
ಭೋಪಾಲ್[ಏ.11]: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್ ಮತ್ತು ಅವರ ಪುತ್ರ ನಕುಲ್‌ನಾಥ್ ಅವರ ಒಟ್ಟು ಆಸ್ತಿ ಭರ್ಜರಿ 780 ಕೋಟಿ ರು. ಕಮಲ್ ಛಿಂಡ್ವಾರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತ್ತು ನಕುಲ್, ಛಿಂಡ್ವಾರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿ ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಆಸ್ತಿ ಮಾಹಿತಿ ಬಹಿರಂಗಪಡಿಸಿದ್ದಾರೆ.
ಕಮಲ್‌ನಾಥ್ ತಮ್ಮ ಬಳಿ, 84 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹಾಗೂ 40.5 ಕೋಟಿ ರು. ಮೌಲ್ಯದ ಚರಾಸ್ತಿ ಇದೆ ಎಂದು ಘೋಷಿಸಿದ್ದಾರೆ. ನಕುಲ್‌ನಾಥ್ ಅವರು ತನ್ನ ಹಾಗೂ ತನ್ನ ಪತ್ನಿ ಪ್ರಿಯಾ ಅವರ ಬಳಿ ಒಟ್ಟು 618.23 ಕೋಟಿ ರು. ಮೌಲ್ಯದ ಚರಾಸ್ತಿ ಹಾಗೂ 41.77 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಸಿಎಂ ಆಗಿ ಆಯ್ಕೆಯಾಗಿರುವ ಕಮಲ್‌ನಾಥ್, ವಿಧಾನಸಭೆಯ ಸದಸ್ಯರಲ್ಲ. ಹೀಗಾಗಿ ಉಪಚುನಾವಣೆಗೆ ಸ್ಪರ್ಧಿಸಿದ್ದಾರೆ.