ಸ್ಪರ್ಧಿಸದಂತೆ ಪಕ್ಷ ಹೇಳಿತ್ತು: ಎಂಎಂ ಜೋಷಿ ಹೇಳಿದ್ದು ಕಾನ್ಪುರ್ ಕೇಳಿತ್ತು!

Published : Mar 26, 2019, 11:14 AM IST
ಸ್ಪರ್ಧಿಸದಂತೆ ಪಕ್ಷ ಹೇಳಿತ್ತು: ಎಂಎಂ ಜೋಷಿ ಹೇಳಿದ್ದು ಕಾನ್ಪುರ್ ಕೇಳಿತ್ತು!

ಸಾರಾಂಶ

ಬಿಜೆಪಿ ಹಿರಿ ತಲೆ ಮುರಳಿ ಮನೋಹರ್ ಜೋಷಿಗೆ ಟಿಕೆಟ್ ನಿರಾಕರಣೆ?| ಸ್ಪರ್ಧಿಸದಂತೆ ಪಕ್ಷ ಆದೇಶ ನೀಡಿದೆ ಎಂದ ಮುರಳಿ ಮನೋಹರ್ ಜೋಷಿ| ಕಾನ್ಪುರ್ ಕ್ಷೇತ್ರದ ಜನತೆಗೆ ಬಹಿರಂಗ ಪತ್ರ ಬರೆದಿರುವ ಮುರಳಿ ಮನೋಹರ್ ಜೊಷಿ| ಉತ್ತರ ಪ್ರದೇಶ ಪ್ರಚಾರ ಪಟ್ಟಿಯಿಂದಲೂ ಮುರಳಿ ಮನೋಹರ್ ಜೋಷಿ ಹೊರಕ್ಕೆ|

ಕಾನ್ಪುರ್(ಮಾ.26): ಭಾರತೀಯ ಜನತಾ ಪಕ್ಷವನ್ನು ದೇಶದ ಮನೆ ಮನೆಗೆ ತಲುಪಿಸಿದ ಹಿರಿ ತಲೆಗಳಲ್ಲಿ ಮುರಳಿ ಮನೋಹರ್ ಜೋಷಿ ಕೂಡ ಒಬ್ಬರು. ಅಟಲ್‌ ಬಿಹಾರಿ ವಾಜಪೇಯಿ, ಎಲ್‌ಕೆ ಅಡ್ವಾಣಿ ಅವರಂತ ಘಟಾನುಘಟಿ ನಾಯಕರೊಂದಿಗೆ ಸೇರಿ ಪಕ್ಷವನ್ನು ಜನರ ಮನಸ್ಸಲ್ಲಿ ಅಚ್ಚೊತ್ತುವಂತೆ ಮಾಡಿದ್ದು ಜೋಷಿ ಅವರ ಕೊಡುಗೆ.

ಆದರೆ ಅಡ್ವಾಣಿ ಅವರಂತೆ ಈ ಬಾರಿ ಮುರಳಿ ಮನೋಹರ್ ಜೋಷಿ ಕೂಡ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಉತ್ತರಪ್ರದೇಶದ ಕಾನ್ಪುರ್ ಲೋಕಸಭಾ ಕ್ಚೇತ್ರದ ಸರದಾರ ಮುರಳಿ ಮನೋಹರ್ ಜೋಷಿ ಈ ಬಾರಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಆದರೆ ಜೋಷಿ ಅವರ ಹೇಳಿಕೆಯೊಂದು ಇದೀಗ ಪಕ್ಷಕ್ಕೆ ಮುಜುಗರ ತಂದಿತ್ತಿದೆ.

ಈ ಬಾರಿ ಚುನಾವಣೆಗೆ ಸ್ಪರ್ಧಿಸದಂತೆ ಪಕ್ಷ ತಮಗೆ ಆದೇಶ ನೀಡಿದೆ ಎಂದು ಮುರಳಿ ಮನೋಹರ್ ಜೋಷಿ ಹೇಳಿಕೆ ನೀಡಿದ್ದು, ಈ ಕುರಿತು ಕ್ಷೇತ್ರದ ಜನತೆಗೆ ಬಹಿರಂಗ ಪತ್ರ ಬರೆದಿದ್ದಾರೆ.

ಅಲ್ಲದೇ ಉತ್ತರ ಪ್ರದೇಶದಲ್ಲಿ ಪ್ರಚಾರ ಕೈಗೊಳ್ಳುವ ಪಕ್ಷದ ನಾಯಕರ ಪಟ್ಟಿಯಿಂದ ಕೂಡ ಮುರಳಿ ಮನೋಹರ್ ಜೋಷಿ ಅವರ ಹೆಸರನ್ನು ಕೈಬಿಡಲಾಗಿದೆ. ಮುರಳಿ ಮನೋಹರ್ ಜೋಷಿ ಅವರು ಅಡ್ವಾಣಿ ಬಳಿಕ ಪಕ್ಷದಿಂದ ಟಿಕೆಟ್ ನಿರಾಕರಿಸಲ್ಪಟ್ಟ ಎರಡನೇ ಹಿರಿಯ ನಾಯಕರಾಗಿದ್ದು, ಇದು ಸಹಜವಾಗಿ ಜೋಷಿ ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!