ಮತಹಾಕಿ ಪ್ರಾಣ ಬಿಟ್ಟ ಮತದಾರ!

Published : Apr 18, 2019, 04:01 PM IST
ಮತಹಾಕಿ ಪ್ರಾಣ ಬಿಟ್ಟ ಮತದಾರ!

ಸಾರಾಂಶ

ಮತಹಾಕಿ ಬಂದ ಮತದಾರ ಸಾವು | ಮಂಡ್ಯದ ಮಲ್ಲನಾಯಕನಹಳ್ಳಿಯಲ್ಲಿ ದುರ್ಘಟನೆ | ಬೊಮ್ಮೇಗೌಡ ಮೃತ ದುರ್ದೈವಿ 

ಮಂಡ್ಯ (ಏ. 18): ಮತಹಾಕಿ ಬಂದ ಮತದಾರನೊಬ್ಬ ಮನೆಯಲ್ಲಿ ಮಲಗಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.  

ಮಂಡ್ಯದ ಮಲ್ಲನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ.  ಬೊಮ್ಮೆಗೌಡ (30) ಮೃತ ದುರ್ದೈವಿ. ಬೊಮ್ಮೇಗೌಡ ನಿವಾಸಕ್ಕೆ ಮೈತ್ರಿ ಅಭ್ಯರ್ಥಿ ನಿಖಿಲ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. 

ಇನ್ನು ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಇಂದು (ಗುರುವಾರ) ನಿಖಿಲ್ ಕುಮಾರಸ್ವಾಮಿ ವಾಹನ ಏರಿ ರೋಡ್ ಶೋ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುಮಲತಾ ಅಂಬರೀಶ್  ಸಹ ಪ್ರಚಾರಕ್ಕೆ ಮುಂದಾಗಿದ್ದಾರೆ. ಆದ್ರೆ ಸುಮಲತಾ ಪ್ರಚಾರಕ್ಕೆ ಪೊಲೀಸರು ನಿರಾಕರಿಸಿದ್ದಾರೆ.

ಇದ್ರಿಂದ ಕೆರಳಿದ ಸುಮಲತಾ ಬೆಂಬಲಿಗರು ಪೊಲೀಸರ ವರ್ತನೆಗೆ ಆಕ್ರೋಶಗೊಂಡು ಸುಮಲತಾ ಪರ ಘೋಷಣೆ ಕೂಗಿದ್ರು. ಈ ವೇಳೆ ನಿಖಿಲ್ ಹಾಗೂ ಸುಮಲತಾ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.

ತಕ್ಷಣವೇ ಪೋಲಿಸರು ಮಧ್ಯೆ ಪ್ರವೇಶಿಸಿ ಎರಡು ಕಡೆ ಬೆಂಬಲಿಗರನ್ನು ನಿಯಂತ್ರಿಸಿ, ಪರಿಸ್ಥಿತಿಯನ್ನು ಶಾಂತಗೊಳಿಸಿದರು. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!