ಪ್ರಚಾರಕ್ಕೆ ಮಮತಾ ಹೊಸ ತಂತ್ರ: ತೆರೆದ ಜೀಪಲ್ಲಿ ಈ ವ್ಯಕ್ತಿಯ ಪುತ್ಥಳಿ!

Published : Apr 28, 2019, 10:54 AM IST
ಪ್ರಚಾರಕ್ಕೆ ಮಮತಾ ಹೊಸ ತಂತ್ರ: ತೆರೆದ ಜೀಪಲ್ಲಿ ಈ ವ್ಯಕ್ತಿಯ ಪುತ್ಥಳಿ!

ಸಾರಾಂಶ

ಲೋಕಸಭಾ ಚುನಾವಣೆ ಈಗಾಗಲೇ ಆರಂಭವಾಗಿದೆ. ಮತದಾರರನ್ನು ಓಲೈಸಲು ಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಸದ್ಯ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪ್ರಚಾರಕ್ಕಾಗಿ ಹೊಸ ಉಪಾಯ ಕಂಡುಕೊಂಡಿದ್ದಾರೆ.

ಕೋಲ್ಕತಾ[ಏ.28]: ಪಕ್ಷದ ಗಣ್ಯಾತಿಗಣ್ಯರನ್ನು ಕರೆಸಿ ಚುನಾವಣಾ ಪ್ರಚಾರ ನಡೆಸುವುದು ಸಾಮಾನ್ಯ. ಆದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ, ತಮ್ಮ ಪುತ್ಥಳಿಗಳನ್ನೇ ಪ್ರಚಾರಕ್ಕೆ ಕಳುಹಿಸಿಕೊಡುವ ಮೂಲಕ ಈ ಚುನಾವಣೆಯಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ.

ಡೈಮಂಡ್‌ ಹಾರ್ಬರ್‌ ಕ್ಷೇತ್ರದ ಸಂಸದನಾಗಿರುವ ಅಭಿಷೇಕ್‌ ತರೆದ ಜೀಪಿನಲ್ಲಿ ತಮ್ಮ ಮೂರ್ತಿಯನ್ನಿಟ್ಟು ಕಾರ್ಯಕರ್ತರು ಪ್ರಚಾರ ನಡೆಸುವಂತೆ ಸಲಹೆ ನೀಡಿ ಅದನ್ನು ಕಾರ್ಯಗತಗೊಳಿಸಿದ್ದಾರೆ. ಹೀಗಾಗಿ ಅವರ ಕ್ಷೇತ್ರದಲ್ಲಿ ಇದೀಗ ಅಭಿಷೇಕ್‌ ಬ್ಯಾನರ್ಜಿ ಅವರ ಮೂರ್ತಿಗಳೇ ಭರ್ಜರಿ ಪ್ರಚಾರದ ಸರಕುಗಳಾಗಿದ್ದು, ಅದನ್ನು ಕಂಡೊಡನೆ ಜನ ಕೂಡ ಘೋಷಣೆ ಕೂಗಿ ಸ್ವಾಗತಿಸುತ್ತಿದ್ದಾರೆ.

ಈ ಕುರಿತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!