ಮತ್ತೊಮ್ಮೆ ಮೋದಿ : ಅಭಿನಂದನೆಗಳ ಮಹಾಪೂರಾ

Published : May 23, 2019, 01:46 PM ISTUpdated : May 23, 2019, 02:18 PM IST
ಮತ್ತೊಮ್ಮೆ ಮೋದಿ : ಅಭಿನಂದನೆಗಳ ಮಹಾಪೂರಾ

ಸಾರಾಂಶ

ಲೋಕಸಭಾ ಫಲಿತಾಂಶದ ಕುತೂಹಲ ತಣಿಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ವಿಜಯಗಳಿಸಿದ್ದಾರೆ. ಮೋದಿ ಗೆಲುವಿಗೆ ಹಲವು ನಾಯಕರು ಅಭಿನಂದನೆ ತಿಳಿಸಿದ್ದಾರೆ. 

ನವದೆಹಲಿ : ಲೋಕಸಭಾ ಚುನಾವಣೆ ಫಲಿತಾಂಶ ಕುತೂಹಲ ತಣಿಯುತ್ತಿದೆ. 

ವಾರಣಾಸಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ನರೇಂದ್ರ ಮೋದಿ ಜಯಗಳಿಸಿದ್ದಾರೆ. ದೇಶದಲ್ಲಿ NDA 340ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮತ್ತೊಮ್ಮೆ ಮೋದಿ ಪ್ರಧಾನಿ ಪಟ್ಟಕ್ಕೇರುವುದು ಬಹುತೇಕ ಖಚಿತವಾದಂತಾಗಿದೆ. 

ಎಸ್ ಪಿ ಅಭ್ಯರ್ಥಿ ಶಾಲಿನಿ ಯಾದವ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ 2,65,261 ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ. 

 

ಮೋದಿ ಅಭೂತಪೂರ್ವ ಗೆಲುವಿಗೆ ಹಲವರು ಅಭಿನಂದನೆ ತಿಳಿಸಿದ್ದಾರೆ. ಶ್ರೀ ಲಂಕಾ ಅಧ್ಯಕ್ಷ ಮೈತ್ರಿ ಪಾಲ ಸಿರಿಸೇನಾ ಮೋದಿ ಗೆಲುವಿಗೆ ಅಭಿನಂದಿಸಿದ್ದು, ಜನತೆ ನಿಮ್ಮ ನಾಯಕತ್ವವನ್ನು ಬಯಸಿದ್ದಾರೆ.  ಭಾರತದೊಂದಿಗೆ ಶ್ರೀಲಂಕಾ ಉತ್ತಮ ಬಾಂಧವ್ಯ  ಮುಂದುವರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. 

ಇನ್ನು ಟಿಆರ್ ಎಸ್ ಮುಖಂಡ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪ್ರಧಾನಿ ನರೇಂದ್ರ ಮೋದಿ ಗೆಲುವಿಗೆ ಅಭಿನಂದನೆ ತಿಳಿಸಿದ್ದಾರೆ. 

ಅಲ್ಲದೇ ಆಂಧ್ರ ಪ್ರದೇಶದಲ್ಲಿ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಗೆಲುವು ಪಡೆದಿದ್ದು, ಜಗನ್ ನೇತೃತ್ವದಲ್ಲಿ ಆಂಧ್ರ ಅಭಿವೃದ್ಧಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಇನ್ನು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆಥನ್ಯಾಹು ಪ್ರಧಾನಿ ನರೇಂದ್ರ ಮೋದಿ ಗೆಲುವಿಗೆ ಅಭಿನಂದಿಸಿದ್ದಾರೆ.

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!