
ಮುಂಬೈ[ಮೇ.08]: ಲೋಕಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ಕಷ್ಟಎಂದಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್ ಅವರ ಮಾತನ್ನೇ ಇದೀಗ ಬಿಜೆಪಿ ಮಿತ್ರಪಕ್ಷ ಶಿವಸೇನಾ ಮುಖಂಡ ಸಂಜಯ್ ರಾವತ್ ಬೆಂಬಲಿಸಿದ್ದಾರೆ.
ಮುಂದಿನ ಸರ್ಕಾರ ರಚನೆಗೆ ಬಿಜೆಪಿಗೆ ಮಿತ್ರ ಪಕ್ಷಗಳ ಅನಿವಾರ್ಯತೆ ಉಂಟಾಗಲಿದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ 2014ರಂತೆ 280-282 ಸ್ಥಾನ ಗಳಿಸುವುದು ಅನುಮಾನ ಎಂದಿದ್ದಾರೆ.
ಮುಂದುವರೆಸಿ ಮಾತನಾಡಿದ ಅವರು ಎನ್‌ಡಿಎ ಪರಿವಾರ ಅಥವಾ ಕುಟುಂಬ ಇದನ್ನು ಗಳಿಸಲಿದೆ. ಮೋದಿ ಮತ್ತೆ ಪ್ರಧಾನಿಯಾದರೆ ಶಿವಸೇನೆ ಸಂತಸಪಡಲಿದೆ ಎಂದಿದ್ದಾರೆ.