
ಬೆಂಗಳೂರು(ಮೇ.19): ಲೋಕಸಭೆ ಚುನಾವಣೆಗೆ ಇಂದು ಏಳನೇಯ ಮತ್ತು ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯ ಕಂಡಿದೆ. ಇದೀಗ ದೇಶದ ಚಿತ್ತ ಮೇ.23ರ ಫಲಿತಾಂಶದತ್ತ ನೆಟ್ಟಿದೆ. ಈ ಮಧ್ಯೆ ದೇಶದ ಪ್ರಮುಖ ವಿವಿಧ ಸುದ್ದಿವಾಹಿನಿಗಳು ಹಾಗೂ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಹೊರಗಡೆವಿದ್ದು, ವಿವಿಧ ಚುನಾವಣೋತ್ತರ ಸಮೀಕ್ಷೆಗಳ ಅಂಕಿ ಅಂಶ ಇಲ್ಲಿದೆ.
NEWSX ಸಮೀಕ್ಷೆ:
NEWSX ಸಮೀಕ್ಷೆ ಪ್ರಕಾರ ಎನ್ಡಿಎ ಮೈತ್ರಿ ಕೂಟಕ್ಕೆ 298 ಸ್ಥಾನಗಳು ದೊರೆಯಲಿವೆ. ಅದರಂತೆ ಯುಪಿಎ 118 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, 126 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಲಿದ್ದಾರೆ.
250 ಸ್ಥಾನಗಳಲ್ಲಿ ಬಿಜೆಪಿ ಜಯ ದಾಖಲಿಸಿದರೆ, ಕಾಂಗ್ರೆಸ್ 76 ಸ್ಥಾನಗಳನ್ನು ಗಳಿಸಲಿದೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.