ಬಾಗಲಕೋಟೆಗೆ ಮೋದಿ : ಬಿಜೆಪಿಗರಿಂದ ವಿಶೇಷ ಉಡುಗೊರೆ

By Web Desk  |  First Published Apr 18, 2019, 9:59 AM IST

ಲೋಕಸಭಾ ಚುನಾವಣೆ ಸಮರ ರಾಜ್ಯದಲ್ಲಿ ಆರಂಭವಾಗಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಬಾಗಲಕೋಟೆಗೆ ಆಗಮಿಸಲಿದ್ದಾರೆ. 


ಬಾಗಲಕೋಟೆ  : ಹನುಮ ಜಯಂತಿ ದಿನವೇ ಪ್ರಧಾನಿ ನರೇಂದ್ರ ಮೋದಿ ಇಂದು ಐತಿಹಾಸಿಕ ನಗರಿ ಬಾಗಲಕೋಟೆಗೆ ಆಗಮಿಸುತ್ತಿದ್ದಾರೆ. 

ಇಲ್ಲಿ  ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು  ಪ್ರಚಾರ ಭಾಷಣ ಮಾಡಲಿದ್ದಾರೆ. ಈ ವೇಳೆ ಇಲ್ಲಿಮ ಬಿಜೆಪಿ ಮುಖಂಡರು ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಲು ಸಜ್ಜಾಗಿದ್ದಾರೆ. 

Tap to resize

Latest Videos

ಸುಮಾರು ಮೂರು ಕೆಜಿ ತೂಕದ ಬಿಲ್ಲು, ಬಾಣವನ್ನು ಮುಂಬೈಯಿಂದ ತರಿಸಿಲಾಗಿದ್ದು, ವಿಜಯ ಸಂಕಲ್ಪ ಯಾತ್ರೆಯ ಸಮಾವೇಶದಲ್ಲಿ ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲಿದ್ದಾರೆ‌. 

ದೇಶದಲ್ಲಿನ ದುಷ್ಟಶಕ್ತಿಗಳನ್ನು ಮೋದಿ ಹಿಮ್ಮೆಟ್ಟಿಸಲಿ ಎಂಬ ಉದ್ದೇಶದಿಂದ ಈ ಬಿಲ್ಲು, ಬಾಣ ನೀಡುತ್ತಿರುವುದಾಗಿ ಸಂಘಟಕರು ಹೇಳಿಕೊಂಡಿದ್ದಾರೆ‌.

click me!