ರಂಗೇರಿದ ಲೋಕಸಭಾ ಚುನಾವಣಾ ಕಣ: ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್ ಔಟ್!

Published : Mar 13, 2019, 09:01 AM IST
ರಂಗೇರಿದ ಲೋಕಸಭಾ ಚುನಾವಣಾ ಕಣ: ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್ ಔಟ್!

ಸಾರಾಂಶ

ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ರಂಗೇರಿದ ಚುನಾವಣಾ ಅಖಾಡ| ಟಿಕೆಟ್ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳ ಕಸರತ್ತು| ಬಿಜೆಪಿಯ ಸಂಭಾವ್ಯ 12 ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು[ಮಾ.13]: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಚುನಾವಣಾ ಕಣ ರಂಗೇರಿದೆ. ತೀವ್ರ ಕುತೂಹಲ ಕೆರಳಿಸುತ್ತಿರುವ ರಾಜಕೀಯ ಕಣದಲ್ಲಿ ಕ್ಷಣ ಕ್ಷಣಕ್ಕೂ ತಿರುವುಗಳು ಎದುರಾಗುತ್ತಿವೆ. ಹೀಗಿರುವಾಗ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಯಾವೆಲ್ಲ ಅಭ್ಯರ್ಥಿಗಳಿಗೆ ಟಿಕೆಟ್ ಸಿಗಲಿದೆ ಎಂಬ ವಿಚಾರವೂ ಭಾರೀ ಕುತೂಹಲ ಮೂಡಿಸಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ರಾಜಕೀಯ ನಾಯಕರು ಟಿಕೆಟ್ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಹೀಗಿರುವಾಗಲೇ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲಿರುವ ಸಂಭಾವ್ಯ 12 ಅಭ್ಯರ್ಥಿಗಳ ಪಟ್ಟಿ ಹೊರ ಬಿದ್ದಿದೆ.

12 ಸೀಟು ಫೈನಲ್‌ಗೆ ಬಿಜೆಪಿ ತೀವ್ರ ಕಸರತ್ತು!

ಕಲಬುರ್ಗಿ- ಡಾ.ಉಮೇಶ್ ಜಾಧವ್ ಥಿ ರಾಯಚೂರು- ತಿಪ್ಪರಾಜು ಹವಾಲ್ದಾರ್/ ಗಂಗಾಧರ್ ನಾಯಕ್/ ಅನಂತರಾಜು

ಬಳ್ಳಾರಿ- ದೇವೇಂದ್ರಪ್ಪ/ ವೆಂಕಟೇಶ್ ಪ್ರಸಾದ್/ ಜೆ.ಶಾಂತಾ/ ಲಖನ್ ಜಾರಕಿಹೊಳಿ

ಚಿಕ್ಕೋಡಿ- ರಮೇಶ್ ಕತ್ತಿ/ ಪ್ರಭಾಕರ್ ಕೋರೆ/ಲಕ್ಷ್ಮಣ್ ಸವದಿ

ಚಿತ್ರದುರ್ಗ- ಎ.ನಾರಾಯಣಸ್ವಾಮಿ/ ಲಕ್ಷ್ಮೀನಾರಾಯಣ/ ಮಾನಪ್ಪ ವಜ್ಜಲ್

ತುಮಕೂರು- ಜಿ.ಎಸ್.ಬಸವರಾಜು/ ಸುರೇಶ್‌ಗೌಡ

ಲೋಕಸಭಾ ಎಲೆಕ್ಷನ್:ಹೈಕಮಾಂಡ್ ಅಂಗಳದಲ್ಲಿ ರಾಜ್ಯ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಕೋಲಾರ- ಡಿ.ಎಸ್.ವೀರಯ್ಯ/ ಚಿ.ನಾ.ರಾಮು/ ಛಲವಾದಿ ನಾರಾಯಣಸ್ವಾಮಿ

ಚಿಕ್ಕಬಳ್ಳಾಪುರ- ಬಿ.ಎನ್.ಬಚ್ಚೇಗೌಡ

ಬೆಂ.ಗ್ರಾಮಾಂತರ- ಸಿ.ಪಿ.ಯೋಗೇಶ್ವರ್/ ಪಿ.ಮುನಿರಾಜುಗೌಡ/ ಎಂ.ರುದ್ರೇಶ್

ಹಾಸನ- ಎ.ಮಂಜು/ ಯೋಗಾ ರಮೇಶ್/ ರಾಮೇಗೌಡ

ಮಂಡ್ಯ- ಸಿದ್ರಾಮಯ್ಯ ಥಿ ಚಾಮರಾಜನಗರ- ಕಾಗಲವಾಡಿ ಶಿವಣ್ಣ/ ಶ್ರೀನಿವಾಸ್ ಪ್ರಸಾದ್

ಮಾರ್ಚ್ 16 ರಂದು ಬಿಜೆಪಿಯು ಸಭೆ ನಡೆಸಿ ಬಳಿಕ ಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಲಿದೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!