ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿ ದಾಖಲೆಯ ಮತದಾನ?

By Web DeskFirst Published May 3, 2019, 11:02 AM IST
Highlights

ಸ್ವಾತಂತ್ರ್ಯ ಬಳಿಕ ಮೊಟ್ಟ ಮೊದಲ ಬಾರಿ ಈ ಬಾರಿ ದಾಖಲೆಯ ಮತದಾನ?| ಸಮೀಕ್ಷೆಯಲ್ಲಿ ಬಯಲಾಗಿದ್ದೇನು?

ನವದೆಹಲಿ[ಮೇ.03]: 2019ರ ಲೋಕಸಭಾ ಚುನಾವಣೆಯ ಮತಪ್ರಮಾಣ, ಸ್ವಾತಂತ್ರ ನಂತರದಲ್ಲೇ ಅತಿ ಹೆಚ್ಚಿನ ಪ್ರಮಾಣದ್ದಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಯೊಂದು ಹೇಳಿದೆ.

7 ಹಂತಗಳ ಮತದಾನ ಪೈಕಿ ಈಗಾಗಲೇ 4 ಘಟ್ಟಗಳ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಿದೆ. ಅಲ್ಲದೆ, ಮುಂದಿನ ಮೂರು ಹಂತಗಳ ಚುನಾವಣೆಯಲ್ಲಿ ಅಲ್ಪ ಪ್ರಮಾಣದ ಮತದಾನ ಹೆಚ್ಚಳವಾದರೂ, ಅದು ದಾಖಲೆ ಮಟ್ಟತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ‘ಇಕೋರಾರ‍ಯಪ್‌’ ಸಂಶೋಧನಾ ವರದಿ ಹೇಳಿದೆ.

ದೇಶದ ಒಟ್ಟಾರೆ ಜನಸಂಖ್ಯೆ ಪೈಕಿ 90 ಕೋಟಿ ಮಂದಿ ಮತ ಹಾಕುವ ಅಧಿಕಾರ ಹೊಂದಿದ್ದಾರೆ. ಈಗಾಗಲೇ ಮುಕ್ತಾಯವಾಗಿರುವ 4 ಹಂತದ ಚುನಾವಣೆಯಲ್ಲಿ ಶೇ.67ರಷ್ಟುಮತದಾನವಾಗಿದೆ. ಸ್ವಾಂತಂತ್ರ್ಯಾ ನಂತರದಲ್ಲಿ ಅತಿ ಹೆಚ್ಚು ಮತ ದಾಖಲಾಗಿದ್ದು 2014ರಲ್ಲಿ. ಆಗ ಶೇ.67.6ರಷ್ಟುಮತ ಚಲಾವಣೆಯಾಗಿತ್ತು. ಹೀಗಾಗಿ ಮುಂದಿನ 3 ಹಂತದಲ್ಲಿ ಮತಪ್ರಮಾಣದಲ್ಲಿ ಸ್ವಲ್ಪ ಏರಿಕೆಯಾದರೂ, ಅದು ಹೊಸ ದಾಖಲೆಯಾಗಲಿದೆ ಎಂದು ವರದಿ ಹೇಳಿದೆ.

click me!