895 ಕೋಟಿ ಆಸ್ತಿಯ ಕೈ ಅಭ್ಯರ್ಥಿ 'ತಿವಿಯಲು' 500 ರೂಪಾಯಿ ಒಡೆಯ ರೆಡಿ!

By Web DeskFirst Published Apr 11, 2019, 11:19 AM IST
Highlights

ಕಾಂಗ್ರೆಸ್‌ ಅಭ್ಯರ್ಥಿ ಆಸ್ತಿ 895 ಕೋಟಿ ರುಪಾಯಿ: ಎದುರಾಳಿ ಆಸ್ತಿ 500 ರು.!| ಅತಿ ಶ್ರೀಮಂತ, ಬಡ ಅಭ್ಯರ್ಥಿಗಳು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ

ನವದೆಹಲಿ[ಏ.11]: ಲೋಕಸಭೆಯ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಅತ್ಯಂತ ಸಿರಿವಂತ ಎಂಬ ದಾಖಲೆ, ತೆಲಂಗಾಣದ ಚೆವೆಲ್ಲೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಕೊಂಡ ವಿಶ್ವೇಶ್ವರ ರೆಡ್ಡಿ ಪಾಲಾಗಿದೆ.

ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿರುವ ಅಪೋಲೋ ಆಸ್ಪತ್ರೆ ಸಮೂಹಗಳ ಅಧ್ಯಕ್ಷ ವಿಶ್ವೇಶ್ವರ ರೆಡ್ಡಿ ತಮ್ಮ ಬಳಿ 895 ಕೋಟಿ ರು. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಇವರ ವಿರುದ್ಧ ಕಣಕ್ಕೆ ಇಳಿದಿರುವ ಜೆಡಿಯು ಅಭ್ಯರ್ಥಿ ನಲ್ಲಾ ಪ್ರೇಮಕುಮಾರ್‌ ತಮ್ಮ ಬಳಿ ಕೇವಲ 500 ರು. ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 1266 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು, ಈ ಪೈಕಿ 213 ಜನರ ವಿರುದ್ಧ ಕ್ರಿಮಿನಲ್‌ ಕೇಸುಗಳಿವೆ. 177 ಅಭ್ಯರ್ಥಿಗಳು ತಮ್ಮ ಬಳಿ 5 ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. 416 ಜನ ತಮ್ಮ ಬಳಿ 10 ಲಕ್ಷ ರು.ಗಿಂತ ಕಡಿಮೆ ಆಸ್ತಿಯ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!