ರಾಜಕೀಯ ನಾಯಕರು ಪರಸ್ಪರ ವಾಗ್ದಾಳಿ| ಜನರಿಗೆ ಕಿಕ್ಕೇರಿಸಿದ ಡೈಲಾಗ್ ಸಮರ| ಇಲ್ಲಿವೆ ಮರೆಯಲಾಗದ 5 ಹೇಳಿಕೆಗಳು
ನವದೆಹಲಿ[ಮೇ.15): ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದನ ಮೇ 19ರಂದು ನಡೆಯಲಿದ್ದು, 7 ಹಂತದ ಮತದಾನದ ಫಲಿತಾಂಶ ಮೇ 23ರಂದು ಹೊರ ಬೀಳಲಿದೆ. 2014ರ ಚುನಾವಣೆಗೆ ಹೋಲಿಸಿದರೆ ಹಲವಾರು ಹೊಸತನಗಳನ್ನು ಕಾಣಬಹುದು. ದರಲ್ಲೂ ವಿಶೇಷವಾಗಿ ರಾಜಕೀಯ ನಾಯಕರು ಪರಸ್ಪರ ವಾಗ್ದಾಳಿ ನಡೆಸಲು ಬಳಸಿದ ಡೈಲಾಗ್ ಗಳು ಸೂಪರ್ ಹಿಟ್ ಆಗಿವೆ.
ಈ ಡೈಲಾಗ್ ಸಮರ ಹಲವಾರು ನಾಯಕರನ್ನು ಜನರಿಗೆ ಪರಿಚಯಿಸಿದೆ. ಇದರ ಆಧಾರದಲ್ಲಿ ರಾಜಕೀಯ ನಾಯಕರು ಮತ್ತಷ್ಟು ಫೇಮಸ್ ಆಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಹಳಷ್ಟು ಫೇಮಸ್ ಆದ ಡೈಲಾಗ್ ಎಂದರೆ 'ಚೌಕೀದಾರ್ ಚೋರ್ ಹೆ'. ಮೋದಿ ಟೀಕಿಸಲು ರಾಹುಲ್ ಗಾಂಧಿ ಇದನ್ನು ಬಳಸಿದ್ದರು. ಆದರೆ ಇದು ಫೇಮಸ್ ಆಗುತ್ತಿದ್ದಂತೆಯೇ ರಾಹುಲ್ ತಮ್ಮೆಲ್ಲಾ ಭಾಷಣಗಳಲ್ಲಿ ಇದನ್ನು ಬಳಸಲಾರಂಭಿಸಿದರು.
undefined
2014ಕ್ಕೆ ಹೋಲಿಸಿದರೆ ಈ ಒಂದು ಡೈಲಾಗ್ ರಾಹುಲ್ ಗಾಂಧಿಯನ್ನು ಮತ್ತಷ್ಟು ಫೇಮಸ್ ಮಾಡಿದೆ ಎಂಬುವುದರಲ್ಲಿ ಅನುಮಾನವಿಲ್ಲ. ಇತ್ತ ಪ್ರಧಾನಿ ಮೋದಿಯ 'ಕಾಮ್ ದರ್, ನಾಮ್ ದಾರ್' ಎಂಬ ಹೇಳಿಕೆಯೂ ಫೇಮಸ್ ಆಗಿದೆ. ಇಲ್ಲಿದೆ ನೋಡಿ ಈ ಬಾರಿಯ 5 ಸೂಪರ್ ಹಿಟ್ ಹೇಳಿಕೆಗಳು.
1. ಚೌಕೀದರ್ ಚೋರ್ ಹೆ
2019ರ ಲೋಕಸಭಾ ಚುನಾವಣೆಗೂ ಮೊದಲೇ ರಾಹುಲ್ ಗಾಂಧಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಲಾರಂಭಿಸಿದರು. 2014ರ ಚುನಾವಣಾ ಫಲಿತಾಂಶವನ್ನು ಗಮನಿಸಿ ರಾಹುಲ್ ಈ ಪೂರ್ವ ಸಿದ್ಧತೆ ನಡೆಸಿದ್ದರು. ಇದಕ್ಕೆ ತಕ್ಕಂತೆ ಮೋದಿ ಸರ್ಕಾರದ ರಫೇಲ್ ಡೀಲ್ ರಾಹುಲ್ ಗಾಂಧಿಗೆ ಬಹುದೊಡ್ಡ ಅಸ್ತ್ರವೆಂಬಂತೆ ಸಿಕ್ಕಿತ್ತು. ಈ ವಿಚಾರ ರಾಹುಲ್ ಗಾಂಧಿಗೆ ದೇಶದಲ್ಲಿ ತಮ್ಮ ಅಸ್ತಿತ್ವ ಮರು ಸ್ಥಾಪಿಸಲು ಅವಕಾಶ ನೀಡಿತ್ತು
ಹೀಗಿರುವಾಗಲೇ ಮೋದಿ ತಮ್ಮನ್ನು ತಾವು ಚೌಕೀದಾರ್ ಎಂದು ಕರೆಯಲಾರಂಭಿಸಿದ್ದರು. ಇದರ ಲಾಭ ಪಡೆದ ರಾಹುಲ್ ಗಾಂಧಿ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸದೆ 'ಚೌಕೀದಾರ್ ಚೋರ್ ಹೆ' ಎಂದು ಬಳಸಲಾರಂಭಿಸಿದರು. ಈ ವಿಚಾರ ಬಿಜೆಪಿ ಕೆಂಗಣ್ಣಿಗೀಡಾಗಿತ್ತು. ಬಳಿಕ ಈ ಹೇಳಿಕೆ ನ್ಯಾಯಾಲಯದ ಮೆಟ್ಟಿಲೇರಿದ್ದು ತಿಳಿದಿರುವ ವಿಚಾರ.
ಎಕ್ಸ್ಪಾಯರಿ ಪಿಎಂ
ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು 'ಎಕ್ಸ್ಪಾಯರಿ ಪಿಎಂ' ಎಂದು ಸಂಭೋದಿಸಿದ್ದರು. ಫಣಿ ಚಂಡಮಾರುತದ ಬಳಿಕ ಮಮತಾ ಬ್ಯಾನರ್ಜಿ ಮೋದಿ ಕರೆಗೆ ಉತ್ತರಿಸಲಿಲ್ಲ ಎಂಬ ಆರೋಪದ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಅವರು ಎಕ್ಸ್ಪಾಯರಿ ಪಿಎಂ ಬಳಿ ಮತನಾಡಲು ಇಷ್ಟವಿಲ್ಲ ಎಂದಿದ್ದರು.
ಕಾಮ್ ದಾರ್, ನಾಮ್ ದಾರ್
ಲೋಕಸಭಾ ಪ್ರಚಾರ ಸಭೆಗಳಲ್ಲಿ ರಾಜಕೀಯ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರು,. ಈ ವೇಳೆ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ನೀಡಿರುವ ಹೇಳಿಕೆ ಬಹಳಷ್ಟು ಸದ್ದು ಮಾಡಿದ್ದವು. ಒಂದೆಡೆ ಮೋದಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಾ 'ರಾಗದರ್ಬಾರಿ' ಹಾಗೂ 'ರಾಜದರ್ಬಾರಿ' ಎಂದು ಹಣಿದರೆ, ಇತ್ತ ಕಾಂಗ್ರೆಸ್ ಮೋದಿಯನ್ನು 'ನಾಮ್ ದಾರ್' ಎಂದು ಹಣಿದು ತನ್ನನ್ನು ತಾನು 'ಕಾಮ್ ದಾರ್' ಎಂದು ಹೇಳಿಕೊಳ್ಳಲಾರಂಭಿಸಿದ್ದರು.
ಯೂ ಟರ್ನ್ ಬಾಬು ಹಾಗೂ ಸ್ಪೀಕರ್ ಬಾಬು:
ಪ್ರಧಾನಿ ಮೋದಿ ಆಂಧ್ರಪ್ರದೇಶದಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡುರನ್ನು ಯೂ ಟರ್ನ್ ಬಾಬು ಎಂದು ಟೀಕಿಸಿದ್ದರು. ಅಲ್ಲದೇ ಯೂ ಟರ್ನ್ ಬಾಬು ಸುಳ್ಳು ಹೇಳುವುದರಲ್ಲಿ ಅದೆಷ್ಟು ನಿಪುಣರೋ, ಸ್ಪೀಕರ್ ನಲ್ಲಿ ಧ್ವನಿಯೇರಿಸಲೂ ಅದಕ್ಕಿಂತ ಒಂದು ಹೆಜ್ಜೆ ಮುಂದಿದ್ದಾರೆ. ಇದೇ ಕಾರಣದಿಂದ ಇನ್ಮುಂದೆ ಅವರನ್ನು ಜನರು 'ಸ್ಪೀಕರ್ ಬಾಬು' ಎಂದು ಕರೆಯುತ್ತಾರೆ ಎಂದಿದ್ದರು.
ಸ್ಪೀಡ್ ಬ್ರೇಕರ್ ದೀದಿ
ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಟೀಕಿಸುತ್ತಾ 'ಸ್ಪೀಡ್ ಬ್ರೇಕರ್ ದೀದಿ' ಎಂದು ಕರೆದಿದ್ದರು. ಫಣಿ ಚಂಡಮಾರುತ ವಿಚಾರದಲ್ಲೂ 'ಸ್ಪೀಡ್ ಬ್ರೇಕರ್ ದೀದಿ' ರಾಜಕೀಯ ಮಾಡುತ್ತಿದ್ದಾರೆ ಎಂದು ಹಣಿದಿದ್ದರು.
ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ