ನಮ್ಮ ಕುಟುಂಬ ದೇಶ ಒಡೆಯ ಬಯಸಿದ್ದರೆ ಭಾರತವೇ ಇರುತ್ತಿರಲಿಲ್ಲ: ಮೋದಿಗೆ ಎದುರೇಟು!

By Web DeskFirst Published Apr 16, 2019, 9:26 AM IST
Highlights

ನಮ್ಮ ಕುಟುಂಬ ದೇಶ ಒಡೆಯ ಬಯಸಿದ್ದರೆ ಭಾರತವೇ ಇರುತ್ತಿರಲಿಲ್ಲ| ಮೋದಿಗೆ ತಿಗೇಟು ನೀಡಿದ ಫಾರೂಕ್‌ ಅಬ್ದುಲ್ಲಾ

ಶ್ರೀನಗರ[ಏ.16]: ದೇಶ ಒಡೆಯುತ್ತಿದ್ದಾರೆಂದು ತಮ್ಮ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟೀಕೆಗೆ ತುಸು ಖಾರವಾಗಿಯೇ ಎದಿರೇಟು ನೀಡಿರುವ ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ, ನಮ್ಮ ಕುಟುಂಬ ದೇಶ ಒಡೆಯುತ್ತಾರೆಂದು ಪ್ರಧಾನಿ ಆರೋಪಿಸುತ್ತಾರೆ, ಆದರೆ ನಮ್ಮ ಕುಟುಂಬ ಹಾಗೇನಾದರೂ ದೇಶವನ್ನು ಒಡೆಯಲು ಪ್ರಯತ್ನಿಸಿದ್ದರೆ ಭಾರತವೇ ಉಳಿಯುತ್ತಿರಲಿಲ್ಲ ಎಂದಿದ್ದಾರೆ.

ಪ್ರಧಾನಿ ಮೋದಿ ಅವರು ಭಾನುವಾರ ಕಠುವಾದಲ್ಲಿ ಚುನಾವಣಾ ರಾರ‍ಯಲಿಯಲ್ಲಿ ಪಾಲ್ಗೊಂಡು ಮಾತನಾಡಿ ಫಾರೂಕ್‌ ಅಬ್ದುಲ್ಲಾ ಮತ್ತು ಮಾಜಿ ಸಿಎಂ ಮುಫ್ತಿ ವಿರುದ್ಧ ಹರಿಹಾಯ್ದಿದ್ದರು. ಇದಕ್ಕೆ ಫಾರೂಕ್‌ ಸೋಮವಾರ ಇಲ್ಲಿ ನಡೆದ ರಾರ‍ಯಲಿಯಲ್ಲಿ ಎದಿರೇಟು ನೀಡಿದರು. ದೇಶ ಒಡೆಯಲು ಮುಂದಾಗಿರುವುದು ನಾವಲ್ಲ, ನೀವು. ಆದರೆ ಈ ಯತ್ನದಲ್ಲಿ ನಿಮಗೆ ಯಶಸ್ಸು ಸಿಗುವುದಿಲ್ಲ ಎಂದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!