'ಚೌಕೀದಾರ್ ಅಲ್ಲ ಶೋಕಿದಾರ್, ಅಧಿಕಾರಕ್ಕೆ ಬಂದರೆ ಹಗರಣಗಳ ತನಿಖೆ'

By Web DeskFirst Published Apr 10, 2019, 7:57 AM IST
Highlights

ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಮತಯಾಚನೆ| ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ |

ಬೆಂಗಳೂರು[ಏ.10]: ಬಿಜೆಪಿಯವರು ನೂರಾರು ಹಗರಣಗಳನ್ನು ಮಾಡಿದ್ದಾರೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ತನಿಖೆ ಮಾಡಿಸುತ್ತೇವೆ. ಅಗ ಇವರೆಲ್ಲಾ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಅವರು ತಾಲೂಕಿನ ಸೊಪ್ಪಹಳ್ಳಿಯಲ್ಲಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ. ಕೆ.ಸುರೇಶ್ ಪರ ಮತಯಾಚನೆ ಮಾಡಿ ಮಾತನಾಡಿ, ಮೋದಿ ಅವರು ಸಣ್ಣವರನ್ನು ಹಿಂಡಿ ಹಿಪ್ಪೆ ಮಾಡಿ ಇನ್ನೂ ಬಡವರನ್ನಾಗಿ ಮಾಡುತ್ತಿದ್ದಾರೆ. ರಿಲಯಾನ್ಸ್, ಅಂಬಾನಿ, ಅದಾನಿಯಂತಹ ಉಳ್ಳ ವರಿಗೆ ಕೊಡುಗೆ ನೀಡಿ ಅವರನ್ನು ಮತ್ತಷ್ಟು ದೊಡ್ಡ ಹಣವಂತರಾಗಿ ಮಾಡುತ್ತಿದ್ದಾರೆ. ಲೂಟಿಕೋರ ರನ್ನು ಬಿಟ್ಟು ಕೂಲಿ ಕಾರ್ಮಿಕರನ್ನು ಜಿಎಸ್‌ಟಿ ವಿಧಿಸುವ ಮೂಲಕ ಹಿಂಸೆ ನೀಡುತ್ತಿದ್ದಾರೆ. ಸಾಲ ಕಟ್ಟಲಾಗದ ವೈಮಾನಿಕ ಕ್ಷೇತ್ರದಲ್ಲಿ ಅನುಭವ ಇಲ್ಲದ ವ್ಯಕ್ತಿಗೆ ಸಾವಿರಾರು ಕೋಟಿಯ ವಿಮಾನ ತಯಾರಿಕೆ ಒಪ್ಪಂದ ನೀಡಿದ್ದಾರೆ. ಅನಿಲ್ ಅಂಬಾನಿ ಒಂದು ಪೇಪರ್ ಪ್ಲೇನ್ ಸಹ ತಯಾರಿಸಿಲ್ಲ. ಅಂತಹವರಿಗೆ ರಫೇಲ್ ವಿಮಾನ ತಯಾರಿಸುವ ₹45 ಸಾವಿರ ಕೋಟಿ ಗುತ್ತಿಗೆ ನೀಡಲಾಗಿದೆ. ಇದೊಂದು ಎನ್‌ಡಿಎ ಸರ್ಕಾರದ ದೊಡ್ಡ ಅವ್ಯವಹಾರವಾಗಿದೆ ಎಂದು ಆರೋಪಿಸಿದರು.

ಇದರ ಜತೆ 15ರಿಂದ 20 ಜನ ದೊಡ್ಡ ದೊಡ್ಡ ಉದ್ದಿಮೆದಾರರ ₹3.30 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಇಂತಹ ನೂರಾರು ಭ್ರಷ್ಟಾಚಾರ ನಡೆದಿದ್ದು, ಯಾರೇ ಬೇಕಿದ್ದರೂ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದರು.

ಚೌಕೀದಾರ್ ಅಲ್ಲ ಶೋಕಿದಾರ್:

ಮೋದಿ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ, ಬಡವರ, ಕಾರ್ಮಿಕರ ಪರ ಕನಿಕರಲ್ಲ. ಇವರು ಚೌಕಿದಾರನೇ ಅಥವಾ ದಿನಕ್ಕೆ ೩ ಜೊತೆ ಅತಿ ಹೆಚ್ಚು ಮೌಲ್ಯದ ಬಟ್ಟೆ ಧರಿಸುವ ಶೋಕಿದಾರ್‌ನೇ ಎಂಬ ಅನುಮಾನ ಮೂಡುತ್ತದೆ. ಮಾತಲ್ಲಿ ಹೊಟ್ಟೆ ತುಂಬುವುದಿಲ್ಲ, ದುಡಿದರೆ ಮಾತ್ರ ದೇಶ ಉದ್ಧಾರವಾಗುತ್ತದೆ. ಪ್ರತಿ ಬಿಪಿಎಲ್ ಕುಟುಂಬಕ್ಕೆ ಮಾಸಿಕ ₹6 ಸಾವಿರ ನೀಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ನುಡಿದಂತೆ ನಡೆಯುವವರು ನಾವು, ಹಾಗಾಗಿ ಸ್ಮುಶ್ರ ಅಭ್ಯರ್ಥಿಗೆ ಮತನೀಡಿ ಎಂದು ಮನವಿ ಮಾಡಿದರು.

ಅಭ್ಯರ್ಥಿ ಡಿ.ಕೆ.ಸುರೇಶ್ ಮಾತನಾಡಿ, ಬಿಜೆ ಪಿ ಪ್ರಣಾಳಿಕೆಯಲ್ಲಿ ರೈತರ ಆದಾಯ 2 ಪಟ್ಟು ಮಾಡುವುದಾಗಿ ಹೇಳಿದ್ದಾರೆ. ೫ ವರ್ಷದಿಂದ ರೈತರು ಕಾಣಿಸಲಿಲ್ಲವೇ, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಪ್ರಣಾಳಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಆದರೆ ಕೇಂದ್ರ ಸರಕಾರ ಹಳೆಯ ಪ್ರಣಾಳಿಕೆಯನ್ನು ಪುನರಾವರ್ತಿಸಿ ಪ್ರಕಟಿಸಿದೆ ಎಂದು ದೂರಿದರು

ಶಾಸಕ ಬಿ.ಶಿವಣ್ಣ, ಪ್ರಚಾರ ಸುತಿ ಅಧ್ಯಕ್ಷ ದೊಡ್ಡಹಾಗಡೆ ಹರೀಶ್, ಡೈರಿ ಅಧ್ಯಕ್ಷ ಮಂಜು ನಾಥರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜ ಣ್ಣ, ಚಂದ್ರಪ್ಪ, ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಎನ್.ಅಚ್ಯುತರಾಜು, ಎಡಿಎ ಮಾಜಿ ಅಧ್ಯಕ್ಷ ಸಿ.ನಾಗರಾಜು, ಕೆಪಿಸಿಸಿ ಕಾರ್ಯದರ್ಶಿ ನಾಗವೇಣಿ, ಜೆಡಿಎಸ್ ತಾಲೂಕು ಉಪಾಧ್ಯಕ್ಷ ಎನ್.ಎಸ್.ಪದ್ಮನಾಭ, ಮಾಜಿ ಕಾರ್ಯಾಧ್ಯಕ್ಷ ಎಸ್.ಶುಭಾನಂದ, ಎಂ.ಕೃಷ್ಣಮೂರ್ತಿ, ಸಿಡಿ ಹೊಸಕೋಟೆ ಸಿ.ಕೆ.ಚಿನ್ನಪ್ಪ, ಶ್ರೀರಾಮ್, ಜಿ. ಗೋಪಾಲ್, ಗಣೇಶ್ ಇತರರು ಹಾಜರಿದ್ದರು.

click me!