ಮರುಕಳಿಸಿದ ಇತಿಹಾಸ, ಆದರೆ ಅಂದು ಕಾಂಗ್ರೆಸ್, ಇಂದು ಬಿಜೆಪಿ!

By Web Desk  |  First Published May 23, 2019, 6:01 PM IST

ಮರುಕಳಿಸಿದ ಇತಿಹಾಸ| ಅಂದು ಕಾಂಗ್ರೆಸ್, ಇಂದು ಬಿಜೆಪಿ| ಇಂದಿರಾ ಗಾಂಧಿಯಂತೆ, ನರೇಂದ್ರ ಮೋದಿ ಅಲೆ| ಇಲ್ಲಿದೆ ನೋಡಿ ಫಲಿತಾಂಶದಲ್ಲಿರುವ ಸಾಮ್ಯತೆ


ನವದೆಹಲಿ[ಮೇ.23]: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಈವರೆಗಿನ ಟ್ರೆಂಡ್ ಅನ್ವಯ ಬಿಜೆಪಿ ನೇತೃತ್ವದ NDA ಒಟ್ಟು 345 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ನೇತೃತ್ವದ UPA ಒಟ್ಟು 91 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಈ ಬಾರಿಯ ಅಂಕಿ ಅಂಶಗಳನ್ನು ಗಮನಿಸುವುದಾದರೆ 1971ರ ಇತಿಹಾಸ ಮರುಕಳಸುವುದರಲ್ಲಿ ಅನುಮಾನವಿಲ್ಲ.

48 ವರ್ಷ ಹಿಂದಿನ ಅಂಕಿ ಅಂಶ:

Tap to resize

Latest Videos

1971ರ ಲೋಕಸಭಾ ಚುನಾವಣಾ ಫಲಿತಾಂಶ

ಗೆದ್ದ ಪಕ್ಷ: ಕಾಂಗ್ರೆಸ್
ಗೆಲುವು: 352 ಕ್ಷೇತ್ರ
ಪ್ರಮುಖ ವಿಪಕ್ಷ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್[ಆರ್ಗನೈಸೇಷನ್]
ವಿಪಕ್ಷಕ್ಕೆ ಸಿಕ್ಕ ಸ್ಥಾನಗಳು: 51
ಪ್ರಧಾನ ಮಂತ್ರಿ: ಇಂದಿರಾ ಗಾಂಧಿ


ಇದಕ್ಕೂ 5 ವರ್ಷ ಹಿಂದಿನ ಚುನಾವಣಾ ಫಲಿತಾಂಶ

1967ರ ಸಾರ್ವತ್ರಿಕ ಚುನಾವಣೆ,

ಗೆದ್ದ ಪಕ್ಷ: ಕಾಂಗ್ರೆಸ್
ಗೆದ್ದ ಸ್ಥಾನಗಳು: 283
ಪ್ರಮುಖ ವಿಪಕ್ಷ: ಸ್ವತಂತ್ರ ಪಾರ್ಟಿ
ವಿಪಕ್ಷಗಳು ಪಡೆದ ಸ್ಥಾನ: 44
ಪ್ರಧಾನಮಂತ್ರಿ: ಇಂದಿರಾ ಗಾಂಧಿ

ವರ್ತಮಾನ ಸ್ಥಿತಿ

2019ರ ಲೋಕಸಭಾ ಚುನಾವಣೆ 
ಗೆಲುವಿನತ್ತ ದಾಪುಗಾಲಿಡುತ್ತಿರುವ ಪಕ್ಷ: ಬಿಜೆಪಿ ನೇತೃತ್ವದ NDA
ಬಿಜೆಪಿ ಮುನ್ನಡೆ: 344+, ಬಿಜೆಪಿ 296+
ಪ್ರಮುಖ ವಿಪಕ್ಷ: ಕಾಂಗ್ರೆಸ್[UPA]
ವಿಪಕ್ಷ ಮುಂಚೂಣಿಯಲ್ಲಿರುವ ಸ್ಥಾನಗಳು: 93+, ಕಾಂಗ್ರೆಸ್ 55+
ಪ್ರಧಾನಿ ಸ್ಥಾನದ ಅಭ್ಯರ್ಥಿ: ನರೇಂದ್ರ ಮೋದಿ

5 ವರ್ಷ ಮೊದಲು

ಗೆದ್ದ ಪಕ್ಷ: ಬಿಜೆಪಿ ನೇತೃತ್ವದ NDA
ಗೆದ್ದ ಪಕ್ಷ ಪಡೆದ ಸ್ಥಾನ: 354, ಬಿಜೆಪಿ 282
ಪ್ರಮುಖ ವಿಪಕ್ಷ: ಕಾಂಗ್ರೆಸ್ ನೇತೃತ್ವದ UPA
ವಿಪಕ್ಷ ಪಡೆದ ಸ್ಥಾನ: 66, ಕಾಂಗ್ರೆಸ್ ಪಡೆದ ಸ್ಥಾನ: 44
ಪ್ರಧಾನ ಮಂತ್ರಿ: ನರೇಂದ್ರ ಮೋದಿ

1967ರಲ್ಲಿ ಕಾಂಗ್ರೆಸ್ ಬಹುಮತ ಪಡೆಯಿತು. ಇಂದಿರಾ ಗಾಂಧಿ ದೇಶದ ಪ್ರಧಾನಿಯಾದರು. ಸಂಖ್ಯಾ ಬಲ ಹಾಗೂ ನೇತೃತ್ವ ಬಲ ಎರಡೂ ಕಾಂಗ್ರೆಸ್ ಪಕ್ಷಕ್ಕಿತ್ತು ಹೀಗಾಗಿ ವಿಪಕ್ಷ ಕೇವಲ ಹೆಸರಿಗಷ್ಟೇ ಉಳಿದಿತ್ತು. ಇಂದಿರಾ ಗಾಂಧಿಯವರ ಅತಿ ದೊಡ್ಡ ವಿರೋಧ ಪಕ್ಷ ಸ್ವತಂತ್ರ ಪಾರ್ಟಿಯ ಬಳಿ ಕೇವಲ 44 ಸ್ಥಾನಗಳಿದ್ದವು. ಇದೇ ರೀತಿ 2014ರಲ್ಲಿ ಭಾರತೀಯ ಜನತಾ ಪಾರ್ಟಿ ಏಕಾಂಗಿಯಾಗಿ ಬಹುಮತ ಪಡೆಯಿತು. ನರೇಂದ್ರ ಮೋದಿ ಪ್ರಧಾನಿಯಾದರು. ಆವರ ಎದುರಾಳಿಯಾಗಿದ್ದ ಕಾಂಗ್ರೆಸ್ ಪಡೆದಿದ್ದು ಕೇವಲ 44.

1967 ಬಳಿಕ 1971ರಲ್ಲಿ ಲೋಕಸಭಾ ಚುನಾವಣೆ ನಡೆಯಿತು. 1967ರಿಂದ 5 ವರ್ಷಗಳ ಅವಧಿಗೆ ಇಂದಿರಾ ಗಾಂಧಿ ಪ್ರಧಾನಿಯಾಗಿ ಸರ್ಕಾರ ರಚಿಸಿದ್ದರು. ಆದರೆ 1971ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನಾದೇಶ ಪಡೆದರು. 1971ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಒಟ್ಟು 352 ಸ್ಥಾನ ಸಿಕ್ಕಿತು. ಆದರೆ ವಿಪಕ್ಷದಲ್ಲಿದ್ದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್[ಆರ್ಗನೈಸೇಷನ್] ಒಟ್ಟು 51 ಸ್ಥಾನ ಪಡೆಯಿತು. ಸದ್ಯ ಇಂದು ನಡೆಯುತ್ತಿರುವ ಚುನಾವಣಾ ಫಲಿತಾಂಶವೂ ಇದೇ ರೀತಿ ಬರುವ ಸಾಧ್ಯತೆಗಳಿವೆ. NDA 344 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದ್ದರೆ, ಕಾಂಗ್ರೆಸ್ 55 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 

click me!