
ಶಿರಸಿ(ಮೇ. 23) ಕೇಂದ್ರ ಸಚಿವ ಅನಂತ್ ಕುಮಾರ್ ಹಗಡೆ ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದು ದೇಶದ ಟಾಪ್ ಗೆಲುವಿನಲ್ಲಿ ಒಂದಾಗುವ ಎಲ್ಲ ಸಾಧ್ಯತೆಗಳಿವೆ.
ಎದುರಾಳಿಗಳನ್ನು ಚೆಂಡಾಡಿರುವ ಅನಂತ್ ಕುಮಾರ್ ಹೆಗಡೆ ಮೋದಿ ಅಲೆಯಲ್ಲಿ ಭಾರೀ ಅಂತರದಿಂದ ಗೆದ್ದಿದ್ದಾರೆ.
ಸೋಲಿಲ್ಲದ ಸರದಾರ ಖರ್ಗೆಗೆ ಸೋಲುಣಿಸಿದ ಉಮೇಶ್ ಜಾಧವ್
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲೇ ಅತೀ ಹೆಚ್ಚು ಮತಗಳ ಅಂತರ(4,77,081)ದಿಂದ ಗೆಲ್ಲುವ ಮೂಲಕ ಹೆಗಡೆ ದಾಖಲೆ ಬರೆದಿದ್ದಾರೆ.
2004 ರಿಂದ ಸತತ ಮೂರು ಬಾರಿಗೆ ಅನಂತ ಕುಮಾರ್ ಹೆಗಡೆ ಅವರೇ ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿಯೂ ಹೆಗಡೆ ಗೆಲುವಿನ ನಗೆ ಬೀರಿದ್ದಾರೆ.