ಬಿಜೆಪಿ ಸರ್ಕಾರದ ಸಾಧನೆ ಚೊಂಬು: ಜಮೀರ್ ವಾಗ್ದಾಳಿ

By Ravi JanekalFirst Published Apr 25, 2024, 5:05 AM IST
Highlights

ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರದ ಕೊನೆಯ ದಿನವಾದ ಬುಧವಾರ ಬೆಂಗಳೂರು ಕೇಂದ್ರ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ಆಲಿ ಖಾನ್‌ ಅವರು ಸಚಿವ ಜಮೀರ್‌ ಆಹ್ಮದ್‌ ಖಾನ್‌ ಅವರ ನೇತೃತ್ವದಲ್ಲಿ ಶಾಂತಿನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ವಾರ್ಡ್‌ಗಳಲ್ಲಿ ಭರ್ಜರಿ ರೋಡ್‌ ಶೋ ಮತ್ತು ಮತ ಪ್ರಚಾರ ನಡೆಸಿದರು.

 ಬೆಂಗಳೂರು (ಏ.25) : ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರದ ಕೊನೆಯ ದಿನವಾದ ಬುಧವಾರ ಬೆಂಗಳೂರು ಕೇಂದ್ರ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ಆಲಿ ಖಾನ್‌ ಅವರು ಸಚಿವ ಜಮೀರ್‌ ಆಹ್ಮದ್‌ ಖಾನ್‌ ಅವರ ನೇತೃತ್ವದಲ್ಲಿ ಶಾಂತಿನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ವಾರ್ಡ್‌ಗಳಲ್ಲಿ ಭರ್ಜರಿ ರೋಡ್‌ ಶೋ ಮತ್ತು ಮತ ಪ್ರಚಾರ ನಡೆಸಿದರು.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಟಿ.ಆರ್‌. ಮಿಲ್ ಸರ್ಕಲ್‌, ಪಾದರಾಯನಪುರ ಮತ್ತು ಮೋಮಿನ್‌ಪುರ ಭಾಗದಲ್ಲಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ನೇತೃತ್ವದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ರೋಡ್‌ಶೋನಲ್ಲಿ ಪಾಲ್ಗೊಂಡಿದರು.

 

ದೇಶದಲ್ಲಿ ಮೋದಿ ಅಲೆ ಇದ್ಯಾ? ಈ ಬಾರಿ ಹಾಗೇನು ಕಾಣ್ತಿಲ್ಲ ಎಂದ ಜಮೀರ್ ಅಹ್ಮದ್

ಸಂಗಮ್‌ ವೃತ್ತದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು, ಕೇಂದ್ರದಲ್ಲಿ ಹತ್ತು ವರ್ಷ ಅಧಿಕಾರ ನಡೆಸಿದ ನರೇಂದ್ರಮೋದಿ ಯವರ ಬಿಜೆಪಿ ಸರ್ಕಾರದ ಸಾಧನೆ ಕೇವಲ ಚೊಂಬು. ಬಿಜೆಪಿ ಐವತ್ತು ವರ್ಷ ದೇಶವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿದೆ. ಬಿಜೆಪಿ ಅಭಿವೃದ್ಧಿ ವಿಚಾರದಲ್ಲಿ ಮತ ಕೇಳುವುದಿಲ್ಲ. ಹಿಂದೂ -ಮುಸ್ಲಿಂ ಎಂದು ಜನರನ್ನು ವಿಭಜನೆ ಮಾಡಿ ಕೋಮುಭಾವನೆ, ಪ್ರಚೋದನೆ, ಸುಳ್ಳು ಹೇಳಿ ಜನರನ್ನು ವಂಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಐದು ಗ್ಯಾರಂಟಿ ಅನುಷ್ಠಾನ ಮಾಡಿದೆ. ಆರನೇ ಗ್ಯಾರಂಟಿ ಆಗಿ ಬಡ ಕುಟುಂಬಗಳಿಗೆ 1.82 ಲಕ್ಷ ಗಳಿಗೆ ಮನೆ ಹಂಚಿಕೆ ತೀರ್ಮಾನ ಕೈಗೊಂಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರು. ಯುವ ನಿರುದ್ಯೋಗಿ ಪದವಿಧ ರರಿಗೆ ಒಂದು ಲಕ್ಷ, ರೈತರ ಸಾಲ ಮನ್ನಾ ಭರವಸೆ ಕೊಟ್ಟಿದೆ. ನೀವು ಆಶೀರ್ವಾದ ಮಾಡಿದರೆ ಅದನ್ನೂ ಈಡೇರಿಸಲಾಗುವುದು ಎಂದು ಹೇಳಿದರು.

ಚಾಮರಾಜಪೇಟೆ ರೋಡ್‌ಶೋನಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೋಜ್ ಖಾನ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ರಿಜ್ವನ್, ಶೇಕ್ ಬಾಬಾ, ರವಿ, ವಿನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಶಾಂತಿನಗರದಲ್ಲಿ ಭರ್ಜರಿ ಪ್ರಚಾರ

ಶಾಂತಿನಗರ ವಿಧಾನಸಭಾ ವ್ಯಾಪ್ತಿಯ ವಿವೇಕನಗರ, ಆಸ್ಟಿನ್ ಟೌನ್ ಮತ್ತು ನೀಲಸಂದ್ರ ಪರಿಸರದಲ್ಲಿ ಶಾಸಕರಾದ ಎನ್.ಎ. ಹ್ಯಾರಿಸ್ ಅವರ ನೇತೃತ್ವದಲ್ಲಿ ಚುನಾವಣಾ ಪ್ರಚಾರ ನಡೆಸಿ, ಮತಯಾಚಿಸಲಾಯಿತು. ಪ್ರಚಾರದುದ್ದಕ್ಕೂ ನೆರೆದ ಜನಸ್ತೋಮ ಮೊಳಗಿಸಿದ ಕಾಂಗ್ರೆಸ್ ಗೆಲುವಿನ ಘೋಷಣೆ ಮುಗಿಲು ಮುಟ್ಟಿತ್ತು. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಈ ಬಾರಿ ಕಾಂಗ್ರೆಸ್‌ ಗೆಲುವು ನಿಶ್ಚಿತ ಎಂದು ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.

 

ಅಚ್ಚೇ ದಿನ್ ಬೇಡ, ಹಳೇ ದಿನಗಳೇ ಸಾಕು ಸ್ವಾಮಿ: ಸಚಿವ ಜಮೀರ್‌ ಅಹ್ಮದ್‌ ಖಾನ್‌

ಡಿಸಿಸಿ ಅಧ್ಯಕ್ಷರಾದ ನಂದ ಕುಮಾರ್, ಕೆಪಿವೈಸಿಸಿ ಅಧ್ಯಕ್ಷರಾದ ಮಹಮ್ಮದ್ ಹ್ಯಾರಿಸ್ ನಲಪಾಡ್, ವಿಡುತಲೈ ಚಿರುತೈಗಲ್ ಸಂಸ್ಥಾಪಕ ತೋಳ್ ತಿರುಮಾಳವನ್, ಬ್ಲಾಕ್‌ ಅಧ್ಯಕ್ಷರು, ವಾರ್ಡ್‌ ಅಧ್ಯಕ್ಷರು, ಮಾಜಿ ನಗರ ಪಾಲಿಕೆ ಸದಸ್ಯರು ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದರು.

click me!