ದೇಶಕ್ಕಾಗಿ ಮತ್ತೊಮ್ಮೆ ಮೋದಿ : ತೇಜಸ್ವಿ ಸೂರ್ಯ ಕರೆ

Published : Apr 06, 2019, 07:44 AM IST
ದೇಶಕ್ಕಾಗಿ ಮತ್ತೊಮ್ಮೆ ಮೋದಿ : ತೇಜಸ್ವಿ ಸೂರ್ಯ ಕರೆ

ಸಾರಾಂಶ

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಅಭ್ಯರ್ಥಿಗಳು.ಎಲ್ಲೆಡೆ ಮುಂಚಿನ ಸಂಚಾರ ನಡೆಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ ಕೂಡ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. 

ಬೊಮ್ಮನಹಳ್ಳಿ: ದೇಶಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಗೆಲ್ಲಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ‍್ಯ ಹೇಳಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅರಕೆರೆ ವಾರ್ಡ್‌ನಲ್ಲಿ ಪ್ರಚಾರ ಕೈಗೊಂಡ ತೇಜಸ್ವಿ ಅವರು ಮಾತನಾಡಿ, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ದೇಶದ್ರೋಹಗಳಿಗೆ ಮಣೆ ಹಾಕುವ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂದು ಗಂಭೀರ ಆರೋಪವೆಸಗಿದರು.

ಮತದಾರರು ಎಚ್ಚೆತ್ತುಕೊಂಡು ಮತ್ತೆ ಯುಪಿಎ ಸರ್ಕಾರ ಬರದಂತೆ ಜಾಗೃತರಾಗಬೇಕು. ದೇಶಕ್ಕಾಗಿ, ದೇಶ ರಕ್ಷಣೆಗಾಗಿ ನರೇಂದ್ರ ಮೋದಿಯವರೊಬ್ಬರ ಪಣತೊಟ್ಟು ನಿಂತಿರುವರು. ಹತ್ತಾರು ಪಕ್ಷಗಳು ಒಗ್ಗಟ್ಟಾಗಿ ಒಬ್ಬ ನರೇಂದ್ರ ಮೋದಿ ಅವರನ್ನು ಎದುರಿಸಲು ಸುಳ್ಳು ಭರವಸೆಗಳು, ಪೊಳ್ಳು ಆಶ್ವಾಸನೆಗಳನ್ನು ನೀಡಿ ಜನತೆಯನ್ನು ಮರಳು ಮಾಡುವ ಪ್ರಯತ್ನವನ್ನೆಸಗುತ್ತಿದ್ದಾರೆ ಎಂದರು.

ಸ್ಥಳೀಯ ಶಾಸಕ ಸತೀಶ್‌ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮೇ ಮುರಳೀಧರ್‌, ಮಾಜಿ ಮಹಾನಗರ ಪಾಲಿಕೆ ಅಧ್ಯಕ್ಷ ಪುರುಷೋತ್ತಮ್‌, ಮಾಜಿ ನಗರಸಭಾ ಸದಸ್ಯ ಮುರಳೀಧರ ಇತರರಿದ್ದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!