ಮೋದಿ ಮೋದಿ ಅನ್ನೋರ ದವಡೆ ಒಡೆಯಿರಿ: ಜೆಡಿಎಸ್ ಶಾಸಕ!

Published : Mar 24, 2019, 02:17 PM ISTUpdated : Mar 24, 2019, 02:21 PM IST
ಮೋದಿ ಮೋದಿ ಅನ್ನೋರ ದವಡೆ ಒಡೆಯಿರಿ: ಜೆಡಿಎಸ್ ಶಾಸಕ!

ಸಾರಾಂಶ

ಮೋದಿ ಮೋದಿ ಅನ್ನೋರ ದವಡೆಗೆ ಹೊಡೆಯಿರಿ ಎಂದ ಜೆಡಿಎಸ್ ಶಾಸಕ| ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿವಾದಾತ್ಮಕ ಹೇಳಿಕೆ| ಮೋದಿ ಬೆಂಬಲಿಗರಿಗೆ ಹೊಡೆಯುವಂತೆ ಹೇಳಿದ ಶಿವಲಿಂಗೇಗೌಡ ವಿಡಿಯೋ ವೈರಲ್| ಶಿವಲಿಂಗೇಗೌಡ ಹೇಳಿಕೆಗೆ ಬಿಜೆಪಿ ಭಾರೀ ವಿರೋಧ|

ಹಾಸನ(ಮಾ.24): ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗುವವರ ದವಡೆಗೆ ಹೊಡೀರಿ ಎಂದು ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಕುರಿತಾದ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಶಿವಲಿಂಗೇಗೌಡ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಎಲ್ಲರಿಗೂ 15 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದ ಮೋದಿ ಮಾತು ತಪ್ಪಿದ್ದು, ಮೋದಿ ಮೋದಿ ಎಂದು ಕುಗುತ್ತಾ ಪ್ರಚಾರಕ್ಕೆ ಬರುವವರಿಗೆ ದವಡೆಗೆ ಹೊಡೆದು 15 ಲಕ್ಷ ರೂ. ಎಲ್ಲಿ ಎಂದು ಕೇಳಿ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.

"

ಇದೇ ವೇಳೆ ತಮ್ಮ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೇ ಉಲ್ಟಾ ಹೊಡೆದಿರುವ ಶಿವಲಿಂಗೇಗೌಡ, ನಾನು ಆ ರೀತಿ ಹೇಳಿಯೇ ಇಲ್ಲ ಎಂದು ವಾದಿಸಿದ್ದಾರೆ.

ಇನ್ನು ಶಿವಲಿಂಗೇಗೌಡರ ಹೇಳಿಕ ಖಂಡಿಸಿರುವ ಬಿಜೆಪಿ, ಪ್ರಧಾನಿ ಮೋದಿಗೆ ಕಲ್ಲು ಹೊಡೆಯಿರಿ ಎಂದೆಲ್ಲಾ ಹೇಳುವ ಮೂಲಕ ಪ್ರತಿಪಕ್ಷಗಳು ಹಿಂಸೆಯನ್ನು ಪ್ರಚೋದಿಸುತ್ತಿವೆ ಎಂದು ಕಿಡಿಕಾರಿದೆ. ಪ್ರತಿಪಕ್ಷಗಳ ಇಂತಹ ಹೇಳಿಕೆಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದೂ ಬಿಜೆಪಿ ಆರೋಪಿಸಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!