‘ಪಶ್ಚಿಮ ಬಂಗಾಳದಲ್ಲಿ ಆದಂತೆ ನಮ್ಮಲ್ಲೂ ಆಗುತ್ತದೆ’ HDK ಹೇಳಿಕೆ ಹಿಂದಿನ ಗೂಡಾರ್ಥ!

By Web DeskFirst Published Mar 27, 2019, 10:48 PM IST
Highlights

ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ ನೀಡಿರುವ ಹೇಳಿಕೆಯೊಂದು ಸಹಜವಾಗಿ ಅನೇಕ ಪ್ರಶ್ನೆಗಳನ್ನು ಎತ್ತಿದೆ. ಮಾತನಾಡುತ್ತಾ ಕುಮಾರಸ್ವಾಮಿ ಪಶ್ಚಿಮ ಬಂಗಾಳದ ಉದಾಹರಣೆಯನ್ನು ನೀಡಿದ್ದಾರೆ. ಹಾಗಾದರೆ ಪಶ್ಚಿಮ ಬಂಗಾಳದ ಮಾತು ಬಂದಿದ್ದು ಯಾಕೆ, ಇಲ್ಲಿದೆ ವಿವರ...

ಬೆಂಗಳೂರು[ಮಾ. 27]  ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಸಿಬಿಐ ತಂಡ ಕೋಲ್ಕತ್ತಾ ಪೋಲಿಸ್ ಕಮಿಷನರ್ ರಾಜೀವ್ ಕುಮಾರ್ ಅವರ ನಿವಾಸಕ್ಕೆ ಆಗಮಿಸಿತ್ತು. ಈ ವೇಳೆ ಸಿಬಿಐ ಅಧಿಕಾರಿಗಳನ್ನೇ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದು ದೊಡ್ಡ ಹೈಡ್ರಾಮಕ್ಕೆ ಕಾರಣವಾಗಿತ್ತು.

ಫೆಬ್ರವರಿಯ ಆರಂಭದಲ್ಲಿ ನಡೆದ ಘಟನೆ ನಂತರ ಇಡೀ ದೇಶದ ಗಮನ ಸೆಳೆದಿತ್ತು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಧ್ಯ ದಾರಿಯಲ್ಲೇ ಪ್ರತಿಭಟನೆ ಕುಳಿತಿದ್ದರು. ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದದರು.

ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ತಂದ ಸಿಎಂ ಐಟಿ ಹೇಳಿಕೆ!

ಈ ಘಟನೆ ಇಲ್ಲಿ ಉಲ್ಲೇಖ ಮಾಡಲು ಕಾರಣವಿದೆ. ನನ್ನ ಬೆಂಬಲಿಗರ ಮೇಲೆ ನಾಳೆ ಮುಂಜಾನೆ ಒಳಗೆ ಐಟಿ ದಾಳಿ ಆಗುವ ಸಾಧ್ಯತೆ ಇದೆ. ಚುನಾವಣೆ ವೇಳೆ ರಾಜಕೀಯ ದುರುದ್ದೇಶದಿಂದ ಒಂದು ವೇಳೆ ಇಂಥ ಕ್ರಮಕ್ಕೆ ಮುಂದಾದರೆ ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ಆಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿಯೂ ಒಂದು ರಾಜಕೀಯ ಹೈಡ್ರಾಮಾ ನಡೆಯಲಿದೆಯೇ? ಕಾಲವೇ ಉತ್ತರ ಹೇಳಬೇಕು.

click me!