ಅಳಿಸಲಾಗದ ಶಾಯಿ ಅಳಿಸಬಹುದು, ಕಾಂಗ್ರೆಸಿಗನ ಟ್ವೀಟ್!: ಮೈಸೂರು ಇಂಕಿನ ಮೇಲೆ ಡೌಟ್‌

Published : Apr 30, 2019, 09:31 AM IST
ಅಳಿಸಲಾಗದ ಶಾಯಿ ಅಳಿಸಬಹುದು, ಕಾಂಗ್ರೆಸಿಗನ ಟ್ವೀಟ್!: ಮೈಸೂರು ಇಂಕಿನ ಮೇಲೆ ಡೌಟ್‌

ಸಾರಾಂಶ

ಅಳಿಸಲಾಗದ ಶಾಯಿ ಅಳಿಸಬಹುದು?| ನೇಲ್‌ ಪಾಲಿಷ್‌ ರಿಮೂವರ್‌ ಹಚ್ಚಿದರೆ ಗುರುತು ಹೋಗುತ್ತೆ| ಕಾಂಗ್ರೆಸ್‌ ವಕ್ತಾರ ಟ್ವೀಟ್‌| ಮೈಸೂರು ಇಂಕಿನ ಮೇಲೆ ಡೌಟ್‌

ನವದೆಹಲಿ[ಏ.30]: ಪ್ರತಿ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚಲಾಗುತ್ತದೆ. ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆ ಸಿದ್ಧಪಡಿಸುವ ಈ ಶಾಯಿ ಕಡೇ ಪಕ್ಷ ಒಂದು ಅಥವಾ ಎರಡು ವಾರವಾದರೂ ಬೆರಳಿನಲ್ಲಿ ಇರುತ್ತದೆ. ಆದರೆ ಇದನ್ನು ಸುಲಭವಾಗಿ ಅಳಿಸಿಬಿಡಬಹುದು ಎಂದು ಕಾಂಗ್ರೆಸ್‌ ವಕ್ತಾರ ಸಂಜಯ್‌ ಝಾ ಟ್ವೀಟ್‌ ಮಾಡಿ ಸಂಚಲನಕ್ಕೆ ಕಾರಣವಾಗಿದ್ದಾರೆ.

ಸೋಮವಾರ ಮತದಾನದ ಬಳಿಕ ನೇಲ್‌ ಪಾಲಿಷ್‌ ರಿಮೂವರ್‌ ಹಚ್ಚಿದೆ. ಶಾಯಿ ಅಳಿಸಿಹೋಯಿತು ಎಂದು ಹೇಳಿದ್ದಾರೆ. ಇದನ್ನು ಕೆಲವು ಬೆಂಬಲಿಸಿದ್ದಾರೆ, ಕೆಲವರು ನೇಲ್‌ ಪಾಲಿಷ್‌ ರಿಮೂವರ್‌ ಏಕೆ ಹಚ್ಚಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಏ.11ರಿಂದ ಆರಂಭವಾದ ಮೊದಲ ಹಂತದ ಲೋಕಸಭೆ ಚುನಾವಣೆಯಿಂದಲೂ ಶಾಯಿ ಬಗ್ಗೆ ಸಂದೇಹಗಳು ವ್ಯಕ್ತವಾಗುತ್ತಲೇ ಇವೆ. ಈ ಬಾರಿಯ ಚುನಾವಣೆಗೆ ಆಯೋಗ ಮೈಸೂರು ಕಂಪನಿಯಿಂದ 26 ಲಕ್ಷ ಶಾಯಿ ಬಾಟಲಿಗಳನ್ನು 33 ಕೋಟಿ ರು. ವೆಚ್ಚದಲ್ಲಿ ಖರೀದಿಸಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!