ಕಾವೇರಿ ವಿಷಯವಾಗಿ ಕಣ್ಣೀರು ಹಾಕಿದ್ದು ನಾವು: ಮೋದಿಗೆ ಗೌಡರ ತಿರುಗೇಟು

By Web Desk  |  First Published Apr 19, 2019, 2:52 PM IST

ರಾಜ್ಯದ ಹಿತಕ್ಕಾಗಿ ನಮ್ಮ ಕಣ್ಣೀರು| ಕಾವೇರಿ ವಿಷಯವಾಗಿ ಕಣ್ಣೀರು ಹಾಕಿದ್ದು ನಾವು| ರಾಜ್ಯದ ಸಮಸ್ಯೆ ಬಂದಾಗ ದೇವೇಗೌಡ ಫ್ಯಾಮಲಿ ಕಣ್ಣೀರು ಹಾಕಿದ್ದು| ಕಾರ್ಯಕ್ರಮದಲ್ಲಿ ದೇವೇಗೌಡ ಕುಟುಂಬ ಭಾವನಾತ್ಮಕವಾಗಿ ಕಣ್ಣೀರು ಹಾಕತ್ತೆ ಎಂಬ ಮೋದಿ ಹೇಳಿಕೆಗೆ ತಿರುಗೇಟು.


ಕೊಪ್ಪಳ[ಏ.19]: ದೇವೇಗೌಡರ ಕುಟುಂಬ ಭಾವನಾತ್ಮಕವಾಗಿ ಕಣ್ಣೀರು ಹಾಕತ್ತೆ ಎಂಬ ಮೋದಿ ಹೇಳಿಕೆಗೆ ಮಾಜಿ ಪ್ರಧಾನಿ ತಿರುಗೇಟು ನೀಡಿದ್ದಾರೆ. ರಾಜ್ಯದ ಹಿತಕ್ಕಾಗಿ ಕುಟುಂಬ ನಮ್ಮ ಕಣ್ಣೀರು ಹಾಕುತ್ತೆ, ಕಾವೇರಿ ವಿಷಯವಾಗಿ ಕಣ್ಣೀರು ಹಾಕಿದ್ದು ನಾವು ಎನ್ನುವ ಮೂಲಕ ಪ್ರಧಾನಿ ಮೋದಿಗೆ ಮಾತಿನೇಟು ನೀಡಿದ್ದಾರೆ.

"

Tap to resize

Latest Videos

ಕೊಪ್ಪಳದ ಖಾಸಗಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ದೇವೆಗೌಡರು '17 ಜನ ಸಂಸದರು, ನಾಲ್ಕು ಮಂದಿ ಕಾಂಗ್ರೆಸ್ ಮಿನಿಸ್ಟರ್ಸ್ ಇದ್ರೂ ಕಣ್ಣೀರು ಹಾಕಿರಲಿಲ್ಲ ಆಗ ದೇವೇಗೌಡ ಕುಟುಂಬ ಕಾವೇರಿ ವಿಷಯವಾಗಿ ಕಣ್ಣೀರು ಹಾಕಿದೆ. ಮೋದಿ ಗಿಂತ ನಾನು ಚೆನ್ನಾಗಿ ಮಾತಾಡಬಲ್ಲೆ. ಆದ್ರೆ ನನಗೆ ಹಿಂದಿ ಬರೋದಿಲ್ಲ. ಮಾತಾಡಬೇಕಾದ್ರೆ ಮೋದಿಗೆ ಮಾತಿನ ಮೇಲೆ ಹಿಡಿತ ಇರಬೇಕು' ಎಂದು ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು 'ಮೈತ್ರಿ ಕೂಟ ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೆ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಹಾಗೂ ನಾನು ಇನ್ನುಳಿದ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದೇವೆ. ಈಗಾಗಲೇ ಮತದಾರನ ತೀರ್ಪು ಪೆಟ್ಟಿಗೆಯಲ್ಲಿ ಸೀಲ್ ಆಗಿದೆ. ಮತದಾರರ ತೀರ್ಪು ನಾವು ಒಪ್ಪಬೇಕು. ಇಷ್ಟು ಸ್ಥಾನ ಗೆಲ್ತೀವಿ ಅಂತಾ ಹೇಳಲು ಆಗಲ್ಲ. ಆದರೆ ಅಭ್ಯರ್ಥಿಯಾಗಿ ನಾವೇ ಗೆಲ್ಲುತ್ತೇವೆ. ಅದೇನಿದ್ದರೂ ಮತದಾರರ ತೀರ್ಪು ಗೌರವಿಸಬೇಕು' ಎಂದಿದ್ದಾರೆ

click me!