ಈ ಎಸ್‌ಪಿ ನಾಯಕನ ಪ್ರಕಾರ, ಪುಲ್ವಾಮಾ ದಾಳಿಯ ಹಿಂದಿದೆ ಮೋದಿ ಸರ್ಕಾರ!

Published : Mar 21, 2019, 03:49 PM ISTUpdated : Mar 21, 2019, 03:59 PM IST
ಈ ಎಸ್‌ಪಿ ನಾಯಕನ ಪ್ರಕಾರ, ಪುಲ್ವಾಮಾ ದಾಳಿಯ ಹಿಂದಿದೆ ಮೋದಿ ಸರ್ಕಾರ!

ಸಾರಾಂಶ

'ಸರ್ಕಾರದ ನಡೆಯಿಂದ ದುಃಖವಾಗಿದೆ. ಮತಗಳಿಗಾಗಿ ನಮ್ಮ ಸೇನಾ ಯೋಧರನ್ನು ಸಾಯಿಸಲಾಗಿದೆ. ಜಮ್ಮು ಹಾಗೂ ಶ್ರೀನಗರದ ನಡುವೆ ತಪಾಸಣೆ ಇರಲಿಲ್ಲ. ದೇಶ ಕಾಯುವ ಸೈನಿಕರನ್ನು ಸಾಮಾನ್ಯ ಬಸ್ ಗಳಲ್ಲಿ ಕರೆದೊಯ್ಯಲಾಗುತ್ತಿತ್ತು. ಇದೊಂದು ಪಿತೂರಿ ಎಂದು ಈಗಲೇ ಹೇಳುವುದಿಲ್ಲ. ಸರ್ಕಾರ ಬದಲಾದರೆ ಈ ಬಗ್ಗೆ ತನಿಖೆ ನಡೆದು, ಬಹು ದೊಡ್ಡ ವ್ಯಕ್ತಿಗಳು ಇದರಲ್ಲಿ ಸಿಲುಕಿಕೊಳ್ಳುತ್ತಾರೆ ಆಗ ನಿಮಗೇ ಇದು ಖಾತ್ರಿಯಾಗುತ್ತದೆ'

ನವದೆಹಲಿ[ಮಾ.21]: ಸಮಾಜವಾದಿ ಪಾಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಪುಲ್ವಾಮಾ ದಾಳಿ ಒಂದು 'ಪಿತೂರಿ' ಎನ್ನುವ ಮೂಲಕ ಗಂಭೀರ ಆರೊಪ ಮಾಡಿದ್ದಾರೆ. ಅಲ್ಲದೇ ಸರ್ಕಾರ ಬದಲಾದರೆ ಇದರ ತನಿಖೆ ನಡೆಯುತ್ತದೆ. ಆಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣ್ಯ ವ್ಯಕ್ತಿಗಳೇ ಸಿಲುಕಿಕೊಳ್ಳುತ್ತಾರೆ ಎಂದೂ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಬುಧವಾರದಂದು ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮ್ ಗೋಪಾಲ್ ಯಾದವ್ 'ಸರ್ಕಾರದ ನಡೆಯಿಂದ ದುಃಖವಾಗಿದೆ. ಮತಗಳಿಗಾಗಿ ನಮ್ಮ ಸೇನಾ ಯೋಧರನ್ನು ಸಾಯಿಸಲಾಗಿದೆ. ಜಮ್ಮು ಹಾಗೂ ಶ್ರೀನಗರದ ನಡುವೆ ತಪಾಸಣೆ ಇರಲಿಲ್ಲ. ದೇಶ ಕಾಯುವ ಸೈನಿಕರನ್ನು ಸಾಮಾನ್ಯ ಬಸ್ ಗಳಲ್ಲಿ ಕರೆದೊಯ್ಯಲಾಗುತ್ತಿತ್ತು. ಇದೊಂದು ಪಿತೂರಿ ಎಂದು ಈಗಲೇ ಹೇಳುವುದಿಲ್ಲ. ಸರ್ಕಾರ ಬದಲಾದರೆ ಈ ಬಗ್ಗೆ ತನಿಖೆ ನಡೆದು, ಬಹು ದೊಡ್ಡ ವ್ಯಕ್ತಿಗಳು ಇದರಲ್ಲಿ ಸಿಲುಕಿಕೊಳ್ಳುತ್ತಾರೆ ಆಗ ನಿಮಗೇ ಇದು ಖಾತ್ರಿಯಾಗುತ್ತದೆ' ಎಂದಿಗ್ದಾರೆ.

ಕಾಶ್ಮೀರದಪುಲ್ವಾಮಾದಲ್ಲಿ ಫೆ. 14ರಂದು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯು CRPF ಯೋಧರ ಮೇಲೆ ಭಯಾನಕ ಆತ್ಮಾಹುತಿ ಬಾಂಬ್ ದಾಳಿ ನಡೆಸಿತ್ತು. ಕಾರಿನಲ್ಲಿ ಭಾರೀ ಪ್ರಮಾಣದ ಸ್ಫೋಟಕವನ್ನು ತುಂಬಿಸಿಕೊಂಡು ಬಂದಿದ್ದ ಬಾಂಬರ್, ಈ ಕಾರನ್ನು ಸೈನಿಕರು ಬರುತ್ತಿದ್ದ ಬಸ್ ಗೆ ಹೊಡೆದು ಸ್ಟೋಟಿಸಿದ್ದ. ಈ ಭಯಾನಕ ದಾಳಿಯಲ್ಲಿ ಭಾರತೀಯ ಸೇನೆಯ CRPF ಪಡೆಯ ಸುಮಾರು 40 ಯೋಧರು ಹುತಾತ್ಮರಾಗಿದ್ದರು. 

ಈ ದಾಳಿಯ ಬಳಿಕ ಭಾರತ ಹಾಗೂಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ನಡುವೆ ಒತ್ತಡದ ವಾತಾವರಣ ನಿರ್ಮಾಣವಾಗಿತ್ತು. ಈ ದಾಳಿಯ ಎರಡು ವಾರಗಳೊಳಗೇ ಭಾರತೀಯ ವಾಯುಸೇನೆಯು 40 ದಶಕಗಳಲ್ಲಿ ಮೊದಲ ಬಾರಿ ಗಡಿ ನಿಯಂತ್ರಣಾ ರೇಖೆ ದಾಟಿ ಪಾಕಿಸ್ತಾನದ ಬಾಲಾಕೋಟ್ ನಲ್ಲಿರುವ ಉಗ್ರರ ಕ್ಯಾಂಪ್ ಗಳನ್ನು ಏರ್ ಸ್ಟ್ರೈಕ್ ನಡೆಸಿ ಧ್ವಂಸಗೊಳಿಸಿ ಮರಳಿತ್ತು. 

ಏರ್ ಸ್ಟ್ರೈಕ್ ನಡೆದಿದ್ದ ಮರುದಿನವೇ ಪಾಕಿಸ್ತಾನ LoC ದಾಟಿ ಭಾರತೀಯ ಸೈನಿಕರ ಕ್ಯಾಂಪ್ ಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಲಿ ನಡೆಸಿತ್ತು. ಈ ಸಂದರ್ಭದಲ್ಲಿ IAF ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಯುದ್ಧ ವಿಮಾನವನ್ನು ಬೆನ್ನಟ್ಟಿ ಪಾಕ್ ಗಡಿ ಪ್ರವೇಶಿಸಿದ್ದರು. ದುರಾದೃಷ್ಟವಶಾತ್ ಈ ಸಂದರ್ಭದಲ್ಲಿ ಅವರು ನಡೆಸುತ್ತಿದ್ದ ಮಿಗ್ 21 ಪತನಗೊಂಡಿತ್ತು. ಪಾಕ್ ಗಡಿಯೊಳಗೆ ಬಿದ್ದದ್ದ ಅವರನ್ನು ಲ್ಲಿನ ಸೇನೆ ಬಂಧಿಸಿತ್ತು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮೇಲೆ ಹೇರಿದ ಒತ್ತಡದಿಂದ ಅಭಿನಂದನ್ ರನ್ನು ಬಿಡುಗಡೆಗೊಳಿಸಿದ್ದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!