ಎಲೆಕ್ಷನ್ ಸ್ವಾರಸ್ಯ: ಗೆದ್ದರೂ ಪ್ರಮಾಣವಚನ ಸ್ವೀಕರಿಸಲಿಲ್ಲ ಧರಂ!

By Web DeskFirst Published Mar 13, 2019, 12:57 PM IST
Highlights

ಗೆದ್ದರೂ ಪ್ರಮಾಣವಚನ ಸ್ವೀಕರಿಸಲಿಲ್ಲ ಧರಂ| ಚುನಾವಣೆಗೆ 2014ರಲ್ಲಿ 3870 ಕೋಟಿ ಖರ್ಚಾಗಿತ್ತು|

ಗೆದ್ದರೂ ಪ್ರಮಾಣವಚನ ಸ್ವೀಕರಿಸಲಿಲ್ಲ ಧರಂ

1980ರಲ್ಲಿ ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ 1.17 ಲಕ್ಷ ಮತಗಳ ಅಂತರದಿಂದ ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರು ಜಯಭೇರಿ ಬಾರಿಸಿದ್ದರು. ಆದರೆ ಇಂದಿರಾ ಗಾಂಧಿ ಆಪ್ತ ಸಿ.ಎಂ. ಸ್ಟೀಫನ್ ಗೆಲ್ಲಿಸುವ ಸಲುವಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ರಾಜೀನಾಮೆ ನೀಡಿದ್ದರು.

ಚುನಾವಣೆಗೆ 2014ರಲ್ಲಿ 3870 ಕೋಟಿ ಖರ್ಚಾಗಿತ್ತು

2014ರ ಲೋಕಸಭೆ ಚುನಾವಣೆಯನ್ನು ನಡೆಸಲು ಕೇಂದ್ರ ಸರ್ಕಾರ 3870 ಕೋಟಿ ರು. ವೆಚ್ಚ ಮಾಡಿತ್ತು. ಇದು ಸಿಬ್ಬಂದಿ ಸಾಗಣೆ, ಮತಗಟ್ಟೆ ಸ್ಥಾಪನೆ, ಭದ್ರತಾ ವ್ಯವಸ್ಥೆ ಮತ್ತಿತರೆ ಉದ್ದೇಶಕ್ಕೆ ಆದ ಖರ್ಚು. ಆದರೆ ಅಭ್ಯರ್ಥಿಗಳು ಮಾಡಿದ ವೆಚ್ಚ ಇದರಲ್ಲಿ ಸೇರಿಲ್ಲ

7000

2014ರ ಲೋಕಸಭೆ ಚುನಾವಣೆಗೆ ಒಟ್ಟು 8159 ಮಂದಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಆ ಪೈಕಿ ಶೇ.85ರಷ್ಟು ಅಂದರೆ 6959 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

click me!