‘ರಾಹುಲ್ ಪ್ರಧಾನಿಯಾಗದಿದ್ದರೆ ಆತ್ಮಹತ್ಯೆ ಮಾಡ್ಕೋತಿನಿ’ ವೈರಲ್ ಚೆಕ್

By Web DeskFirst Published May 20, 2019, 5:07 PM IST
Highlights

ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗುತ್ತಿದ್ದಂತೆ ಹೊರ ಬರುತ್ತಿರುವ ಟ್ವೀಟ್ ಗಳು ಸಹ ದೊಡ್ಡ ಸುದ್ದಿ ಮಾಡುತ್ತಿವೆ. ಆದರೆ ಫೇಕ್ ನ್ಯೂಸ್ ಫ್ಯಾಕ್ಟರಿ ನಕಲಿ ಸುದ್ದಿ ಹೊರಬಿಡುತ್ತಿವೆ.

ಬೆಂಗಳೂರು(ಮೇ. 20) ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಜವಾಹರ ಲಾಲ್ ನೆಹರು ವಿವಿ ವಿದ್ಯಾರ್ಥಿ ಮುಖಂಡೆ, ಜಮ್ಮು ಕಾಶ್ಮೀರ ಪೀಪಲ್ಸ್ ಮುಂಮೆಂಟ್ ನಾಯಕಿ ಶೆಹ್ಲಾ ರಶೀದ್ ಬರೆದುಕೊಂಡಿದ್ದಾರೆ! 

ಹೀಗೆಂದು ಶೆಹ್ಲಾ ರಶೀದ್ ಬರೆದುಕೊಂಡಿರುವ ರೀತಿಯ ಟ್ವೀಟ್ ಸ್ಕ್ರೀಮ್ ಶಾಟ್ ಹರಿದಾಡುತ್ತಿದೆ. ಆದರೆ ಇದರ ಸತ್ಯಾಸತ್ಯತೆ ಏನು ಎಂಬುದನ್ನು ಕೂಡ ಚರ್ಚೆ ಮಾಡಬೇಕಾಗಿದೆ. 

‘ಕಾಂಗ್ರೆಸ್ ಇರುವುದಕ್ಕಿಂತ ಸಾಯುವುದು ಲೇಸು’

ಇದು ನಕಲಿ ಟ್ವೀಟ್ ಆಗಿದ್ದು ರೈಟ್  ವಿಂಗ್ ನವರು ಪೋಟೋ ಶಾಪ್ ಮಾಡಿದ್ದಾರೆ ಎಂದು ಶೆಹ್ಲಾ ಆರೋಪಿಸಿದ್ದಾರೆ. ಅವರ ಹೆಸರಿನಿಂದ ಟ್ವೀಟ್ ಆಗಿರುವ ಜತೆಗೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿರುವಂತೆಯೂ ಇದೆ.

ಮೇ 18 ರಂದು ಈ ಎಲ್ಲ ಘಟನಾವಳಿಗಳು ನಡೆದು ಹೋಗಿವೆ. ಫೇಸ್ ಬುಕ್ ನಲ್ಲಿಯೂ ಸಹ ಶೆಹ್ಲಾ ರಶೀದ್ ಅವರ ಟ್ವೀಟ್ ಹೊತ್ತ ಸ್ಕ್ರೀನ್ ಶಾಟ್ ಗಳು ಕಂಡುಬಂದಿವೆ. ಇದೊಂದು ಫೇಕ್ ನ್ಯೂಸ್ ಫ್ಯಾಕ್ಟರಿಯಿಂದ ಹೊರಬಂದ ಸುದ್ದಿ ಎಂಬುದು ಮೇಲ್ನೋಟಕ್ಕೆ ಸತ್ಯವಾಗಿದೆ.

 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

What else can the criminal minded right-wing do, but Photoshop, lie, morph, forge! https://t.co/Gi3fP2xG98

— Shehla Rashid شہلا رشید (@Shehla_Rashid)
click me!
Last Updated May 20, 2019, 5:12 PM IST
click me!