ಎಲೆಕ್ಷನ್‌ ಮುಗಿದ ಬೆನ್ನಲ್ಲೇ ವಿವಾದಿತ ಸಚಿವನಿಗೆ ಸಿಎಂ ಯೋಗಿ ಗೇಟ್‌ಪಾಸ್‌

Published : May 21, 2019, 08:23 AM ISTUpdated : May 22, 2019, 02:59 PM IST
ಎಲೆಕ್ಷನ್‌ ಮುಗಿದ ಬೆನ್ನಲ್ಲೇ ವಿವಾದಿತ ಸಚಿವನಿಗೆ ಸಿಎಂ ಯೋಗಿ ಗೇಟ್‌ಪಾಸ್‌

ಸಾರಾಂಶ

ಎಲೆಕ್ಷನ್‌ ಮುಗಿದ ಬೆನ್ನಲ್ಲೇ ವಿವಾದಿತ ಸಚಿವ ರಾಜ್‌ಭರ್‌ಗೆ ಸಿಎಂ ಯೋಗಿ ಗೇಟ್‌ಪಾಸ್‌| ಸಿಎಂ ಯೋಗಿ ನಿರ್ಧಾರವನ್ನು ರಾಜ್‌ಭರ್‌ ಕೂಡಾ ಸ್ವಾಗತಿಸಿದ್ದಾರೆ

ಲಖನೌ[ಮೇ.21]: ತಮ್ಮ ಸರ್ಕಾರ ಮತ್ತು ತಮ್ಮನ್ನು ಬಹಿರಂಗವಾಗಿಯೇ ಟೀಕಿಸುತ್ತಿದ್ದ ಎಸ್‌ಬಿಎಸ್‌ಪಿ ಪಕ್ಷದ ನಾಯಕ ಸಚಿವ ಓಂ ಪ್ರಕಾಶ್‌ ರಾಜ್‌ಭರ್‌ ಅವರನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಸಚಿವ ಸಂಪುಟದಿಂದ ಕೈಬಿಟ್ಟಿದ್ದಾರೆ.

ಈ ನಡುವೆ ಸಿಎಂ ಯೋಗಿ ನಿರ್ಧಾರವನ್ನು ರಾಜ್‌ಭರ್‌ ಕೂಡಾ ಸ್ವಾಗತಿಸಿದ್ದಾರೆ. ಲೋಕಸಭಾ ಚುನಾವಣೆಯುದ್ದಕ್ಕೂ ರಾಜಭರ್‌ ಅವರು ಯೋಗಿ ಸರ್ಕಾರವನ್ನು ಬಹುವಾಗಿ ಟೀಕಿಸಿದ್ದರು. ಜೊತೆಗೆ ಎಸ್‌ಪಿ- ಬಿಎಸ್‌ಪಿ ಮೈತ್ರಿಕೂಟ ಬೆಂಬಲಿಸಿದ್ದರು. ಎನ್‌ಡಿಎ ಮಿತ್ರ ಪಕ್ಷವಾಗಿದ್ದ ಎಸ್‌ಬಿಎಸ್‌ಪಿ 2017ರ ವಿಧಾನಸಭೆ ಚುನಾವಣೆಯಲ್ಲಿ 4 ಸ್ಥಾನ ಗಳಿಸಿತ್ತು.

ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನದ ಬೇಡಿಕೆ ಇಟ್ಟಿದ್ದ ಎಸ್ಪಿಎಸ್ಪಿಗೆ ಅವಕಾಶ ನೀಡದ ಕಾರಣ, ಹಲವು ಕ್ಷೇತ್ರಗಳಲ್ಲಿ ಸ್ವತಂತ್ರ್ಯವಾಗಿ ಕಣಕ್ಕಿಳಿದಿತ್ತು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!