ದೇವೇಗೌಡ್ರ ಪರಮಾಪ್ತ ಪಕ್ಷ ಬಿಟ್ಟ ಹಿಂದಿನ ಲೆಕ್ಕಾಚಾರವನ್ನು ಬಿಚ್ಚಿಟ್ಟ HDK

Published : Mar 16, 2019, 05:04 PM ISTUpdated : Mar 16, 2019, 05:06 PM IST
ದೇವೇಗೌಡ್ರ ಪರಮಾಪ್ತ ಪಕ್ಷ ಬಿಟ್ಟ ಹಿಂದಿನ ಲೆಕ್ಕಾಚಾರವನ್ನು ಬಿಚ್ಚಿಟ್ಟ HDK

ಸಾರಾಂಶ

ಕಾಂಗ್ರೆಸ್- ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಂಚಾಲಕರೂ ಹಾಗೂ, ದೇವೇಗೌಡರ ಪರಮಾಪ್ತ ಜೆಡಿಎಸ್ ತೊರೆದಿರುವ ಹಿಂದಿನ ಲೆಕ್ಕಚಾರವೇ ಬೇರೆ ಇದೆ. ಈ ಬಗ್ಗೆ ಕುಮಾರಸ್ವಾಮಿ ಅವರೇ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು, (ಮಾ.16): ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ದಿಢೀರ್ ಜೆಡಿಎಸ್​ಗೆ ಗುಡ್ ಬೈ ಹೇಳಿ ಬಿಎಸ್​ಪಿ ಸೇರಿದ್ದಾರೆ. ದಶಕಗಳಿಂದ ಜೆಡಿಎಸ್​ ಪಕ್ಷದಲ್ಲಿ ಸಕ್ರಿಯರಾಗಿದ್ದರೂ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಬೇಸರ ಅವರಲ್ಲಿತ್ತು ಎನ್ನಲಾಗಿದೆ.

ಇದೇ ಕಾರಣಕ್ಕೀಗ ಪಕ್ಷ ತೊರೆದು ಮಾಯಾವತಿಯವರ ಬಿಎಸ್​ಪಿ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್- ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಂಚಾಲಕರೂ ಆಗಿದ್ದ ಡ್ಯಾನಿಶ್, ದೇವೇಗೌಡರ ಪರಮಾಪ್ತ ಕೂಡಾ ಆಗಿದ್ದರು. 

ಆದ್ರೆ ಕುಮಾರಸ್ವಾಮಿ ಅವರ ಟ್ವೀಟ್ ಮಾಡಿರುವುದನ್ನು ಗಮನಿಸಿದ್ರೆ ದೇವೇಗೌಡ್ರ ಸಮ್ಮತಿ ಮೇರೆಗೆ ಡ್ಯಾನಿಶ್ ಬಿಎಸ್‌ಪಿ ಸೇರಿದ್ದಾರೆ ಎನ್ನುವ ಅರ್ಥ ಕಲ್ಪಿಸುತ್ತಿದೆ.

'ಡ್ಯಾನಿಶ್​​ ಅಲಿ ಬಿಎಸ್​ಪಿ ಸೇರ್ಪಡೆಯಾಗಿದ್ದಾರೆ. ಬಿಎಸ್​ಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದರೆ ಡ್ಯಾನಿಶ್​​ ಅಲಿ ಗೆಲುವು ಸಾಧಿಸಬಹುದು.

ಅದರ ಜತೆಗೆ ಬಿಎಸ್​ಪಿ ಮತ್ತು ಜೆಡಿಎಸ್​ ಪಕ್ಷಗಳ ನಡುವಿನ ಬಾಂಧವ್ಯವೂ ಬೆಳೆಯಲಿದೆ' ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಆದ್ರೆ ಇದು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!