ಅಂದು ಇನ್ಸ್ ಪೆಕ್ಟರ್, ಇಂದು ಸಂಸದ, ಸೆಲ್ಯೂಟ್ ಮಾತ್ರ ಬದಲಾಗಿಲ್ಲ!

Published : May 26, 2019, 05:48 PM IST
ಅಂದು ಇನ್ಸ್ ಪೆಕ್ಟರ್, ಇಂದು ಸಂಸದ, ಸೆಲ್ಯೂಟ್ ಮಾತ್ರ ಬದಲಾಗಿಲ್ಲ!

ಸಾರಾಂಶ

ಬದಲಾವಣೆ ಜಗದ ನಿಯಮ. ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದವರು ಈಗ ಎಂಪಿಯಾಗಿದ್ದಾರೆ. ಆದರೆ ತಮ್ಮ ಹಳೆಯ ಬಾಸ್ ಗೆ ಸೆಲ್ಯೂಟ್ ನೀಡುತ್ತಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೈದರಾಬಾದ್[ಮೇ. 26]  ಒಂದು ಕಾಲದಲ್ಲಿ ತನ್ನ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯುತ್ತಿದ್ದ ವ್ಯಕ್ತಿ ಈಗ ಅವರಿಂದಲೇ ಸೆಲ್ಯೂಟ್ ಪಡೆದುಕೊಳ್ಳುತ್ತಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ಗೋರಂಟ್ಲಿ ಮಾಧವ್  ಅನಂತಪುರ ಜಿಲ್ಲೆಯ ಹಿಂದೂಪೂರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಸಿಐಡಿ ಉಪ ಪೊಲೀಸ್ ಮಹಾನಿರ್ದೇಶಕ ಮೆಹಬೂಬಾ ಪಾಷ, ನೂತನ ಸಂಸದರಿಗೆ ಸೆಲ್ಯೂಟ್ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಒಂದು ಕಾಲದ ಇನ್ಸ್ ಪೆಕ್ಟರ್ ನೂತನ ಸಂಸದ ಮಾಧವ್ ನಗುತ್ತಲೆ ಪ್ರತಿ ಸೆಲ್ಯೂಟ್ ನೀಡಿದ್ದಾರೆ. ಈ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈಸ್ ಆರ್ ಸಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಕದ್ರಿ ಮಾಜಿ ಸರ್ಕಲ್ ಇನ್ಸ್ ಪೆಕ್ಟರ್ ಮಾಧವ್, ತೆಲುಗು ದೇಶಂ ಪಕ್ಷದ ಸಂಸದ ಕೃಷ್ಟಾಪ್ಪ ನಿಮ್ಮಾಲಾ ವಿರುದ್ಧ 1 ಲಕ್ಷದ 40 ಸಾವಿರದ 748 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!