ಭಾರತೀಯರು ಈ ಫಕೀರನ ಜೋಳಿಗೆ ತುಂಬಿಸಿದ್ದಾರೆ: ಮೋದಿ!

By Web DeskFirst Published May 23, 2019, 8:21 PM IST
Highlights

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಭರ್ಜರಿ ಗೆಲುವು| ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಭವ್ಯ ಸಮಾರಂಭ| ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ| ಭಾರತೀಯರು ಈ ಫಕೀರನ ಜೋಳಿಗೆ ತುಂಬಿಸಿದ್ದಾರೆ ಎಂದ ಪ್ರಧಾನಿ| 130 ಕೋಟಿ ಭಾರತೀಯರಿಗೆ ಧನ್ಯವಾದ ಅರ್ಪಿಸಿದ ಅಮಿತ್ ಶಾ| ದೇ ಕಟ್ಟುವ ಕಾರ್ಯದಲ್ಲಿ ಪ್ರಧಾನಿ ಮೋದಿ ಜೊತೆ ನಿಲ್ಲುವ ಭರವಸೆ|

ದೋ ಸೇ ದುಬಾರಾ...

ನವದೆಹಲಿ(ಮೇ.23): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಇಂದು ನವದೆಹಲಿಯ ತನ್ನ ಪ್ರಧಾನ ಕಚೇರಿಯಲ್ಲಿ ಭವ್ಯ ಸಮಾರಂಭವನ್ನು ಏರ್ಪಡಿಸಿದೆ.

live from Delhi: Prime Minister Narendra Modi addresses party workers at the BJP Headquarters. https://t.co/aIYJI4HYVX

— ANI (@ANI)

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯರು ಈ ಫಕೀರನ ಜೋಳಿಗೆ ತುಂಬಿಸಿದ್ದು, 130 ಕೋಟಿ ಭಾರತೀಯರಿಗೆ ತಮ್ಮ ಅನಂತ ಅನಂತ ಧನ್ಯವಾದಗಳು ಎಂದು ಹೇಳಿದರು.

PM Narendra Modi: Aaj desh ke koti-koti nagrikon ne iss fakir ki jholi ko bhar diya hai. Main Bharat ke 130 crore nagrikon ka sar jhuka kar ke naman karta hoon. pic.twitter.com/cElOGrOQFC

— ANI (@ANI)

2019ರ ಫಲಿತಾಂಶ ಭವಿಷ್ಯದ ಸದೃಢ ಭಾರತಕ್ಕೆ ಬುನಾದಿ ಹಾಕಿದ್ದು, ದೇಶವನ್ನು ಕಟ್ಟುವ ಜವಾಬ್ದಾರಿ ತಮಗೆ ನೀಡಿರುವ ಜನತೆಗೆ ಧನ್ಯವಾದ ಎಂದು ಪ್ರಧಾನಿ ಹೇಳಿದರು.

PM: If someone has won, it's Hindustan that has won, it's democracy that has won, it's public that has won, & therefore, all BJP & NDA people with humility dedicate this victory to public. I congratulate all the winners, no matter from which party or which region they contested pic.twitter.com/sOxIEiHruY

— ANI (@ANI)

ಇಡೀ ವಿಶ್ವ ಇಂದು ಭಾರತದತ್ತ ತಿರುಗಿ ನೋಡುತ್ತಿದ್ದು, ಇದು ಭಾರತದ ಗೆಲುವಲ್ಲದೇ ಮತ್ತೇನಲ್ಲ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.

Amit Shah: We had told party workers that they'll have to get on the field to fight the battle of 50%. I can proudly say that in 17 states, people blessed us with more than 50% votes...On the other hand Congress had to face a crushing defeat. In 17 states Congress got a 'big 0'. pic.twitter.com/6C0fW3x3PL

— ANI (@ANI)

ಇದಕ್ಕೂ ಮೊದಲು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ವಿಪಕ್ಷಗಳ ತಲೆಬುಡವಿಲ್ಲದ ಆರೋಪಗಳು, ವೈಯಕ್ತಿಕ ಟೀಕೆಗಳಿಗೆ ಭಾರತದ ಜನತೆ ತಕ್ಕ ಉತ್ತರ ನೀಡಿದ್ದು, ದೇಶದ 17 ರಾಜ್ಯಗಳಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ.

BJP President Amit Shah: Even after so much violence and rigging, BJP won 18 seats in West Bengal. It tells that in coming days, BJP will establish its might in West Bengal pic.twitter.com/nq2HQz76lW

— ANI (@ANI)

ಅದರಂತೆ ದೇಶದ 17 ರಾಜ್ಯಗಳಲ್ಲಿ ಬಿಜೆಪಿ ಶೇ.50ರಷ್ಟು ಮತಗಳಿಸಿದ್ದು, ಪ್ರಧಾನಿ ಮೋದಿ ಅವರಲ್ಲಿ ದೇಶದ ಜನತೆ ಇಟ್ಟಿರುವ ನಂಬಿಕೆಯ ಪ್ರತೀಕ ಎಂದು ಅಮಿತ್ ಶಾ ನುಡಿದರು.

BJP President Amit Shah: This is a historic victory. After 50 years someone has won an absolute majority for the second time in a row. pic.twitter.com/lhsToChZ9D

— ANI (@ANI)

ಭಾರತವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಇಡೀ ದೇಶ ಪ್ರಧಾನಿ ಮೋದಿ ಜೊತೆ ನಿಲ್ಲಲಿದ್ದು, 2024ರ ವೇಳೆಗೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಕಾರ್ಯದಲ್ಲಿ ನಿತ್ಯವೂ ದುಡಿಯುವ ಭರವಸೆ ನೀಡಿದರು.

ದೇಶದ ರಾಜಕೀಯ ಚಿತ್ರಣ

click me!