ಲೋಕಸಭೆ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ| ಕೊಪ್ಪಳ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸದ ಬಿಜೆಪಿ| ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಕೈತಪ್ಪುತ್ತಾ?| ಕುತೂಹಲ ಕೆರಳಿಸಿದ ಬಿಜೆಪಿ ಚುನಾವಣಾ ಸಮಿತಿ ನಡೆ|
ಕೊಪ್ಪಳ(ಮಾ.21): ಬಿಜೆಪಿ ಇಂದು ಲೋಕಸಭೆ ಚುನಾವಣೆಗೆ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರೂ ಇವೆ.
ಆದರೆ ಮೊದಲನೇ ಪಟ್ಟಿಯಲ್ಲಿ ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿಲ್ಲ. ಈ ಕಾರಣಕ್ಕೆ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಸಿಗಲಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ.
ಹಾಲಿ ಸಂಸದ ಸಂಗಣ್ಣ ಕರಡಿ ಹೆಸರು ಘೋಷಿಸುವ ನೀರಿಕ್ಷೆ ಎಲ್ಲರಲ್ಲಿ ಇತ್ತು. ಆದರೆ ಕೊಪ್ಪಳ ಕ್ಷೇತ್ರಕ್ಕೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆಯಾಗಿಲ್ಲ.
ಎಲ್ಲ ಹಾಲಿ ಸಂಸದರಿಗೆ ಟಿಕೆಟ್ ಘೋಷಿಸಿರುವ ಕೇಂದ್ರ ಚುನಾವಣಾ ಸಮಿತಿ, ಕೊಪ್ಪಳ ಕ್ಷೇತ್ರಕ್ಕೆ ಬೇರೋಬ್ಬ ಅಭ್ಯರ್ಥಿ ಘೋಷಿಸಲಿದೆಯೇ ಎಂಬ ಕುತೂಹಲ ಮನೆ ಮಾಡಿದೆ.
ಮೂಲಗಳ ಪ್ರಕಾರ ಟಿಕೆಟ್ ರೇಸ್ ನಲ್ಲಿ ಡಾ ಕೆ ಬಸವರಾಜ, ವೀರುಪಾಕ್ಷಪ್ಪ ಸಿಂಗನಾಳ ಮತ್ತು ಸಿ ವಿ ಚಂದ್ರಶೇಖರ್ ಇದ್ದಾರೆ.