
ಶಿವಮೊಗ್ಗ : ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುವ ಜಿ.ಟಿ ದೇವೇಗೌಡ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಹೇಳಿದ್ದಾರೆ.
ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು, ಲೋಕಸಭಾ ಚುನಾವಣೆಯನ್ನೂ ಕೂಡ ಎರಡು ಪಕ್ಷಗಳು ಒಟ್ಟಾಗಿ ಎದುರಿಸಿದ್ದವು.
ಬಿಜೆಪಿ ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅಸಹಜ ಮೈತ್ರಿ ಏನಿದ್ದರೂ ಮುಖಂಡರ ನಡುವೆ ಮಾತ್ರ. ಅದು ಈಗ ಸಚಿವ ಜಿಟಿ ದೇವೇಗೌಡ ಹೇಳಿಕೆಯಿಂದ ನಿಜವಾಗಿದೆ.
ಕಾರ್ಯಕರ್ತರ ಮಟ್ಟದಲ್ಲಿ ಈ ಹೊಂದಾಣಿಕೆ ಆಗುವುದಿಲ್ಲ. ಚುನಾವಣೆ ಫಲಿತಾಂಶದ ನಂತರ ಇವರ ನಡುವಿನ ಕಿತ್ತಾಟ ಮತ್ತಷ್ಟು ಹೆಚ್ಚಾಗಲಿದ್ದು. ಈ ಅಸಹಜ ಮೈತ್ರಿ ಹೆಚ್ಚು ದಿನ ಇರುವುದಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದರು.