'ಪಾಕಿಸ್ತಾನದ ಪ್ರಧಾನಿ ಕೇಳಿ ನಾಮರ್ದ ಯಾರು ಗೊತ್ತಾಗುತ್ತದೆ'

By Web DeskFirst Published Mar 19, 2019, 4:05 PM IST
Highlights

ಬಿಜೆಪಿ ನಾಯಕ ಆಯನೂರು ಮಂಜುನಾಥ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಶಿವಮೊಗ್ಗ(ಮಾ. 19) ಕಲಬುರಗಿಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಾಮರ್ದ ಎಂದು ಕರೆಯುತ್ತಾರೆ. ಕಳೆದ ಬಾರಿಯೂ ಚಾಯ್ ವಾಲಾ ಎಂದು ಟೀಕಿಸಿದ್ದರು. ನಾಮರ್ದ ಯಾರು ಎಂದು ಪಾಕಿಸ್ತಾನದ ಪ್ರಧಾನಿ ಕೇಳಿದರೇ ಕಾಂಗ್ರೆಸ್ ನವರಿಗೆ ಹೇಳ್ತಾರೆ ಎಂದು 

ಮುಲಾಯಂ ಸಿಂಗ್ , ಜನಾರ್ದನ ಪೂಜಾರಿಯಂತಹವರು ಕೂಡ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಅಪೇಕ್ಷಿಸುತ್ತಾರೆ. ಪಾಕಿಸ್ತಾನದ ಪ್ರಧಾನಿ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ರನ್ನು ಹಳ್ಳಿ ಹೆಂಗಸು ಎಂದು ಕರೆದಾಗ ಬಿಜೆಪಿ ಪ್ರತಿಭಟನೆ ಮಾಡಿತ್ತು. ರಾಹುಲ್ ಗಾಂಧಿ ಇಂಥ ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್ ನವರು ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

'ಕಂಡ-ಕಂಡವರನ್ನು ಅಪ್ಪ ಎನ್ನುವ ಮಧು,' ಅಣ್ಣನ ಇದೆಂಥಾ ಮಾತು..?

ಇಲ್ಲಿ ಯಾರ ಗುರು ಭಕ್ತಿ ಪ್ರದರ್ಶನಕ್ಕೆ ಬರ್ತಾ ಇಲ್ಲ. 2006 ರಲ್ಲಿ ಬಂಗಾರಪ್ಪ ನವರ ವಿರುದ್ಧ ಕೆಲಸ ಮಾಡಿದ್ದರಿಗೆ ಯಾವ ಗುರು ಭಕ್ತಿ ಇಲ್ಲ.  ಕಾಂಗ್ರೆಸ್ ನಾಯಕರರಾಗಿ ಕೆಲಸ ಮಾಡುತ್ತಾರೆ ಅಷ್ಟೇ. ಡಿಕೆಶಿಯವರು ಬಂಗಾರಪ್ಪ ನವರಿಗಿಂತ ಮೊದಲು ರಾಮಕೃಷ್ಣ ಹೆಗಡೆಯವರಿಗೆ ಬೆದರಿಕೆ ಕೊಟ್ಟವರಿಗೂ ಶಿಷ್ಯ ರಾಗಿದ್ದರು ಎಂದರು.

click me!