ಒಂದೇ ಕೂಟದಲ್ಲಿದ್ದ ಬಿಜೆಪಿ, ಎಡರಂಗ!: ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

By Web DeskFirst Published Mar 17, 2019, 11:14 AM IST
Highlights

ಅಮಿತಾಭ್ ಬಚ್ಚನ್ ಚುನಾವಣೆ ಗೆದ್ದಿದ್ದರು| 1989 ರಲ್ಲಿ ಬಿಜೆಪಿ, ಎಡರಂಗ ಒಂದೇ ಕೂಟದಲ್ಲಿದ್ದವು!| ಎನ್‌ಡಿಎ ಮೈತ್ರಿಕೂಟದಲ್ಲಿ 36 ಪಕ್ಷಗಳು

ಅಮಿತಾಭ್ ಬಚ್ಚನ್ ಚುನಾವಣೆ ಗೆದ್ದಿದ್ದರು

ಹಿಂದಿ ಚಿತ್ರರಂಗದ ಪ್ರಸಿದ್ಧ ನಟ ಅಮಿತಾಭ್ ಬಚ್ಚನ್ ಅವರು ರಾಜೀವ್ ಗಾಂಧಿ ಸ್ನೇಹಿತರಾಗಿದ್ದರು. 1984ರಲ್ಲಿ ಅಲಹಾಬಾದ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರಿ ಅಂತರದಿಂದ ಗೆದ್ದಿದ್ದರು. ಆದರೆ, ಬೊಫೋರ್ಸ್ ಹಗರಣದಲ್ಲಿ ತಮ್ಮ ಹೆಸರೂ ಉಲ್ಲೇಖವಾಗಿದ್ದರಿಂದ ರಾಜೀನಾಮೆ ಕೊಟ್ಟವರು ಮತ್ತೆ ರಾಜಕೀಯಕ್ಕೆ ಬರಲಿಲ್ಲ

1989 ರಲ್ಲಿ ಬಿಜೆಪಿ, ಎಡರಂಗ ಒಂದೇ ಕೂಟದಲ್ಲಿದ್ದವು!

ಬಿಜೆಪಿ ಹಾಗೂ ಎಡರಂಗ ಸೈದ್ಧಾಂತಿಕವಾಗಿ ವಿರುದ್ಧ ದಿಕ್ಕಿನಲ್ಲಿ ನಿಲ್ಲುವ ಪಕ್ಷಗಳು. ಇವೆರಡೂ ಪಕ್ಷಗಳು ಒಂದೇ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲುವುದನ್ನು ಊಹಿಸಿಕೊಳ್ಳುವುದೂ ಕಷ್ಟ. ಆದರೆ ಅಂತಹದ್ದೊಂದು ಅಪರೂಪದ ಘಟನೆ 1989ರಲ್ಲಿ ನಡೆದಿತ್ತು. ವಿ.ಪಿ. ಸಿಂಗ್ ಸರ್ಕಾರಕ್ಕೆ ಬಿಜೆಪಿ- ಎಡರಂಗ ಬಾಹ್ಯ ಬೆಂಬಲ ನೀಡಿದ್ದವು.

ಎನ್‌ಡಿಎ ಮೈತ್ರಿಕೂಟದಲ್ಲಿ 36 ಪಕ್ಷಗಳು

ಎನ್‌ಡಿಎ ಮೈತ್ರಿಕೂಟದಲ್ಲಿ ಎಷ್ಟು ಪಕ್ಷಗಳಿವೆ? ಹೆಚ್ಚೆಂದರೆ ಐದಾರು ಎಂದರೆ ತಪ್ಪಾದೀತು. ಏಕೆಂದರೆ, ಸದ್ಯ ಎನ್‌ಡಿಎ ಜತೆ ಗುರುತಿಸಿ ಕೊಂಡಿರುವ ರಾಜಕೀಯ ಪಕ್ಷಗಳ ಸಂಖ್ಯೆ 36!

click me!