ಇಷ್ಟೆಲ್ಲಾ ಓಡಾಡಿ, ಅರಚಾಡಿ ಮತ ಹಾಕದೆ ಉಳಿದ ದಿಗ್ವಿಜಯ್ ಸಿಂಗ್!

Published : May 12, 2019, 07:49 PM IST
ಇಷ್ಟೆಲ್ಲಾ ಓಡಾಡಿ, ಅರಚಾಡಿ ಮತ ಹಾಕದೆ ಉಳಿದ ದಿಗ್ವಿಜಯ್ ಸಿಂಗ್!

ಸಾರಾಂಶ

ಲೋಕಸಭೆ ಚುನಾವಣೆಗೆ 6ನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣ| ಪ್ರತಿಷ್ಠಿತ ಭೋಪಾಲ್ ಕ್ಷೇತ್ರದಲ್ಲೂ ಇಂದು ಮತದಾನ| ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್, ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್| ಸ್ವಕ್ಷೇತ್ರ ರಾಜಗರ್‌ನಲ್ಲಿ ಮತ ಚಲಾಯಿಸದ ದಿಗ್ವಿಜಯ್ ಸಿಂಗ್| ದಿನವೀಡಿ ಭೋಪಾಲ್‌ನಲ್ಲೇ ಉಳಿದ ಕಾಂಗ್ರೆಸ್ ಅಭ್ಯರ್ಥಿ| ಮತದಾನದಿಂದ ವಂಚಿತರಾದ ದಿಗ್ಗಿಗೆ ಬಿಜೆಪಿ ಕುಹುಕ|

ಭೋಪಾಲ್(ಮೇ.12): 2109ರ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಗಮನ ಸೆಳೆದ ಕ್ಷೇತ್ರಗಳ ಪೈಕಿ ಭೋಪಾಲ್ ಮತ ಕ್ಷೇತ್ರವೂ ಒಂದು. ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಮತ್ತು ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ನಡುವಿನ ಕದನ ದೇಶದ ಗಮನ ಸೆಳೆದಿತ್ತು.

ಅದರಂತೆ ಇಂದು ಭೋಪಾಲ್ ಲೋಕಸಭಾ ಕ್ಷೇತ್ರಕ್ಕೆ ಮತದಾನವಾಗಿದ್ದು, ಇದೀಗ ಎಲ್ಲರ ಗಮನ ಮೇ.23ರ ಫಲಿತಾಂಶದ ಮೇಲಿದೆ.

ಈ ಮಧ್ಯೆ ಚುನಾವಣೆ ವೇಳೆ ಭರ್ಜರಿ ಪ್ರಚಾರ ನಡೆಸಿ ಗಮನ ಸೆಳೆದಿದ್ದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್, ತಮ್ಮ ಮತವನ್ನೇ ಚಲಾಯಿಸದೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಅಸಲಿಗೆ ದಿಗ್ವಿಜಯ್ ಸಿಂಗ್ ಭೋಪಾಲ್ ಮತದಾರರಾಗಿರದೇ ರಾಜಗರ್ ಕ್ಷೇತ್ರದ ಮತದಾರರಾಗಿದ್ದಾರೆ. ಇಂದೂ ರಾಜಗರ್‌ನಲ್ಲೂ ಮತದಾನ ನಡೆದಿದ್ದು, ಇದೇ ಕ್ಷೇತ್ರದಿಂದ ದಿಗ್ವಿಜಯ್ ಸಿಂಗ್ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಆದರೆ ಇಂದು ದಿನವೀಡಿ ಭೋಪಾಲ್‌ನಲ್ಲೇ ಉಳಿದಿದ್ದ ದಿಗ್ವಿಜಯ್ ಸಿಂಗ್ ಅವರಿಗೆ , ರಾಜಗರ್ ಗೆ ಹೋಗಿ ಮತ ಹಾಕಲು ಸಾಧ್ಯವಾಗಲಿಲ್ಲ.

ಇನ್ನು ದಿಗ್ವಿಜಯ್ ಮತ ಹಾಕದಿರಲು ಸಾಧ್ಯವಾಗದಿರುವುದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ. ಸಿಎಂ ಕಮಲ್ ನಾಥ್ ಮಾತು ಕೇಳಿ ಭೋಪಾಲ್‌ಗೆ ಬಂದ ದಿಗ್ವಿಜಯ್ ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಹೇಳಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!