ಬಳ್ಳಾರಿಗೆ ಅಭ್ಯರ್ಥಿ ಆಯ್ಕೆ ಹಿಂದಿನ ರಹಸ್ಯ ಬಿಚ್ಚಿಟ್ಟ ಶ್ರೀರಾಮುಲು

Published : Mar 22, 2019, 08:36 PM ISTUpdated : Mar 22, 2019, 08:42 PM IST
ಬಳ್ಳಾರಿಗೆ ಅಭ್ಯರ್ಥಿ ಆಯ್ಕೆ ಹಿಂದಿನ ರಹಸ್ಯ ಬಿಚ್ಚಿಟ್ಟ ಶ್ರೀರಾಮುಲು

ಸಾರಾಂಶ

ಬಳ್ಳಾರಿಯಲ್ಲಿ ಬಿಜೆಪಿ ಮತ್ತು ಬಿಜೆಪಿ ಮುಖಂಡರು ಅಧಿಕೃತವಾಗಿ ಅಖಾಡಕ್ಕೆ ಇಳಿದಿದ್ದಾರೆ. ದೇವೇಂದ್ರಪ್ಪ ಆಯ್ಕೆಯ ರಹಸ್ಯವನ್ನು ಶ್ರೀರಾಮುಲು ತೆರೆದಿಟ್ಟಿದ್ದಾರೆ.

ಬಳ್ಳಾರಿ[ಮಾ.22]  ಬಳ್ಳಾರಿ ಜಿಲ್ಲೆಯಿಂದ ದೇವೇಂದ್ರಪ್ಪ ಹೆಸರು ಅಧಿಕೃತ ಘೋಷಣೆಯಾಗಿದೆ.  ದೇವೇಂದ್ರಪ್ಪ ಅನುಭವಿ ರಾಜಕಾರಣಿ.  ಏ.1 ರಂದು ನಾಮಪತ್ರ ಸಲ್ಲಿಸಲಿದ್ದು  ದೇವೇಂದ್ರಪ್ಪ ಗೆಲ್ಲಿಸಲು ಹಠತೋಟ್ಟಿದ್ದೇವೆ ಎಂದು ಬಿಜೆಪಿ ನಾಯಕ ಬಿ. ಶ್ರೀರಾಮುಲು ಹೇಳಿದರು.

ಉಪಚುನಾವಣೆ ಸೋಲಿನ ಪರಿಸ್ಥಿತಿ ಬೇರೆಯಾಗಿತ್ತು.  ಸಾರ್ವತ್ರಿಕ ಚುನಾವಣೆಯಲ್ಲಿ ಆ ರೀತಿ ನಡೆಯಲ್ಲ. ಸಚಿವರು , ಆಪ್ತರು ಲಂಚ ಪ್ರಕರಣದಲ್ಲಿ ಸಿಲುಕಿದ್ದಾರೆ. ನಾಲ್ಕು ‌ಜಿಲ್ಲೆಗೆ ಸೀಮಿತವಾದ ಮುಖ್ಯಮಂತ್ರಿ ಹೈದರಾಬಾದ್ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ತುಮಕೂರಲ್ಲಿ ದೋಸ್ತಿಗೆ ಥಟ್ಟಂತ ಶಾಕ್ ಕೊಟ್ಟ ಮುದ್ದಹನುಮೇಗೌಡ!

ಸಿಎಂ ಜನರ ಹಂಗಿನಲ್ಲಿ ಇಲ್ಲ. ರಾಹುಲ್ ಸೋನಿಯಾ ಗಾಂಧಿ ಹಂಗಿನಲ್ಲಿ‌ ಇದ್ದಾರೆ. ಬಾದಾಮಿಯಲ್ಲಿ ವಾಲ್ಮೀಕಿ ‌ಜನರು‌ ನನಗೆ ಮತ ಹಾಕಿಲ್ಲವೆಂದು ಸಿದ್ದರಾಮಯ್ಯ ಹೇಳ್ತಾರೆ. ಇದು ಜನರಿಗೆ ಯಾವ ಸಂದೇಶ ನೀಡ್ತದೆ.  ದೇವೇಂದ್ರಪ್ಪ ಅವರನ್ನು ಒಂದು ಲಕ್ಷ ಅಂತರದಲ್ಲಿ ಗೆಲ್ಲಿಸುತ್ತೇವೆ.  ದೇವೇಂದ್ರಪ್ಪ ಬೇರೆ ಜಿಲ್ಲೆಯವರಲ್ಲ ಬಳ್ಳಾರಿಯವರೇ. ಉಪಚುನಾವಣೆ ಯಲ್ಲಿ ಹಣ ಮತ್ತ ಅಧಿಕಾರದ ಬಲದಿಂದ ಗೆದ್ದಿದ್ದರು ಎಂದರು.

ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಅಭ್ಯರ್ಥಿಯೆಂದು‌ ನಿರ್ಣಯ ಮಾಡಿದ್ದೇವೆ. ವೆಂಕಟೇಶ ಪ್ರಸಾದ್ ,ನಾಗೇಂದ್ರ ಬಗ್ಗೆ ಗೌರವವಿದೆ.. ಪ್ರಸಾದ್ ಪಕ್ಷಕ್ಕೆ ಬರೋವಾಗ ಟಿಕೆಟ್ ಆಸೆಯಿಂದಲ್ಲ ಎಂದು ಅವರೇ ಹೇಳಿದ್ದಾರೆ. ಪ್ರಸಾದ್ ನಮ್ಮ ಜೊತೆಗೆ ಇರುತ್ತಾರೆ. ಪ್ರಸಾದ್ ಪಕ್ಷ ಸೇರೋ ಮೊದಲೇ ದೇವೇಂದ್ರಪ್ಪ ಹೆಸರು ಫೈನಲ್ ಆಗಿತ್ತು ಎಂದರು.

ಬಿಜೆಪಿ ಪಕ್ಷದ ಅಭ್ಯರ್ಥಿ ದೇವೇಂದ್ರಪ್ಪ ಮಾತನಾಡಿ. ಕಾಂಗ್ರೆಸ್ ನಲ್ಲಿ ಸಾಕಷ್ಟು ನೋವು ತಿಂದು ಇಲ್ಲಿಗೆ ಬಂದಿದ್ದೇನೆ. ಆ ಪಕ್ಷ ಈ ಪಕ್ಷ ಬಿಡಿ..ನನ್ನನ್ನು ಬೆಳೆಸಿ ಎಂದು ಮನವಿ ಮಾಡಿಕೊಂಡರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!