‘ಮುಸ್ಲಿಂ ಮತ ಕಾಂಗ್ರೆಸ್‌ಗೆ: ಗೆಲ್ಲುವ ವಿಶ್ವಾಸ ಇಲ್ಲ ನಮಗೆ’!

Published : May 18, 2019, 02:51 PM IST
‘ಮುಸ್ಲಿಂ ಮತ ಕಾಂಗ್ರೆಸ್‌ಗೆ: ಗೆಲ್ಲುವ ವಿಶ್ವಾಸ ಇಲ್ಲ ನಮಗೆ’!

ಸಾರಾಂಶ

ದೆಹಲಿ ಚುನಾವಣಾ ಫಲಿತಾಂಶದ ಭವಿಷ್ಯ ನುಡಿದ ಅರವಿಂದ್ ಕೇಜ್ರಿವಾಲ್| ಗೆಲ್ಲುವ ವಿಶ್ವಾಸ ಕ್ಷೀಣಿಸಿದೆ ಎಂದ ದೆಹಲಿ ಸಿಎಂ| ‘ಕೊನೆಯ ಕ್ಷಣದಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್‌ಗೆ ವರ್ಗಾವಣೆ’| ‘ದೆಹಲಿ ಜನತೆಗೆ ತಮ್ಮ ಸರ್ಕಾರದ ಕಾರ್ಯವೈಖರಿ ಅರ್ಥವೂ ಆಗಿಲ್ಲ, ಇಷ್ಟವೂ ಆಗಿಲ್ಲ’! 

ನವದೆಹಲಿ(ಮೇ.18): 6ನೇ ಹಂತದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷ ಚುನಾವಣೆ ಬಳಿಕ ತನ್ನದೇ ಆದ ಸಮೀಕ್ಷೆಯನ್ನು ಮುಂದಿಟ್ಟಿದೆ.

ಕೊನೆಯ ಕ್ಷಣದಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಪಕ್ಷಕ್ಕೆ ವರ್ಗಾವಣೆಗೊಂಡಿದ್ದು, ದೆಹಲಿಯಲ್ಲಿ ಗೆಲುವಿನ ನಿರೀಕ್ಷೆ ಕಡಿಮೆ ಎಂದು ಖುದ್ದು ಸಿಎಂ ಅರವಿಂದ್ ಕೇಜ್ರಿವಾಲ್ ಆಭಿಪ್ರಾಯಪಟ್ಟಿದ್ದಾರೆ.

ನಾವು ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇವು. ಆದರೆ ಕೊನೆಯ ಕ್ಷಣದಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಪಕ್ಷಕ್ಕೆ ವರ್ಗಾವಣೆಗೊಂಡಿದ್ದು ಇದು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಎಂದು ಕೇಜ್ರಿ ಹೇಳಿದ್ದಾರೆ.

ಇದೇ ವೇಳೆ ದೆಹಲಿ ಜನತೆಗೆ ತಮ್ಮ ಸರ್ಕಾರದ ಕಾರ್ಯವೈಖರಿ ಅರ್ಥವೂ ಆಗಿಲ್ಲ, ಇಷ್ಟವೂ ಆಗಿಲ್ಲ ಎಂದು ಕೇಜ್ರಿ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!