ಮಂಟಪದಿಂದ ಮತಗಟ್ಟೆಗೆ: ಧನ್ಯವಾದ ಜವಾಬ್ದಾರಿ ಮೆರೆದ ನವದಂಪತಿಗೆ!

By Web DeskFirst Published Apr 18, 2019, 1:19 PM IST
Highlights

ಎರಡನೇ ಹಂತದ ಮತದಾನ ಪ್ರಕ್ರಿಯೆಲ್ಲಿ ಭಾರತ ಬ್ಯುಸಿ| ಕರ್ನಾಟಕ ಸೇರಿದಂತೆ ದೇಶದ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ| ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ| ಕಣದಲ್ಲಿದ್ದಾರೆ ಹಲವು ಪ್ರಮುಖ ಅಭ್ಯರ್ಥಿಗಳು| ಜಮ್ಮು-ಕಾಶ್ಮಿರದಲ್ಲಿ ಮತ ಹಾಕಿ ಗಮನ ಸೆಳೆದ ನವದಂಪತಿ| ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ಮತದಾನ|

ಉದಮ್​ಪುರ್(ಏ.18): 2019 ರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶದ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಬೆಳಿಗ್ಗೆ 11 ಗಂಟೆ ವರೆಗೆ ಒಟ್ಟಾರೆ ದೇಶದಲ್ಲಿ ಶೇ.10 ರಷ್ಟು ಮತದಾನವಾಗಿದ್ದು, ಸಾಯಂಕಾಲ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

Jammu & Kashmir: A newly married couple arrive at a polling station in Udhampur to cast their votes for pic.twitter.com/RWTHAmAEwE

— ANI (@ANI)

ಜಮ್ಮು ಕಾಶ್ಮೀರದ ಉದಮ್​ಪುರ್ ದಲ್ಲಿ ನವ ವಿವಾಹಿತ ದಂಪತಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು. 

ಮದುವೆ ಬಳಿಕ ನೇರವಾಗಿ ಮತಗಟ್ಟೆಗೆ ಬಂದ ನವದಂಪತಿ, ಮತದಾನ ಮಾಡಿ ಗಮನ ಸೆಳೆದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!