ಈ ಬಾರಿ ದಾಖಲೆ ಸಂಖ್ಯೆಯ ಅಭ್ಯರ್ಥಿಗಳು?

By Web DeskFirst Published Apr 2, 2019, 11:28 AM IST
Highlights

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೃಹತ್ ಲೋಕಸಭಾ ಚುನಾವಣಾ ಸಮರದಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಲೇ ಇದ್ದು, ಈ ಬಾರಿಯು ಕಳೆದ ಬಾರಿಯ ಚುನಾವಣೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿಯುವ ಸಾಧ್ಯತೆ ಇದೆ.

ಬೆಂಗಳೂರು (ಏ. 02): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೃಹತ್ ಲೋಕಸಭಾ ಚುನಾವಣಾ ಸಮರದಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಲೇ ಇದ್ದು, ಈ ಬಾರಿಯು ಕಳೆದ ಬಾರಿಯ ಚುನಾವಣೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿಯುವ ಸಾಧ್ಯತೆ ಇದೆ.

'ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ‌ ನೆಗೆದು ಬೀಳ್ತಾರೆ'

ದೇಶದಲ್ಲಿ ಚುನಾವಣಾ ರಣಕಹಳೆ ಮೊಳಗಿದ್ದು, ರಾಜ್ಯದಲ್ಲಿಯೂ ಇದರ ಕಾವು ಬಿರುಬಿಸಲನ್ನು ಲೆಕ್ಕಿಸಿದರೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಈ ಬಾರಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೊದಲನೆ ಹಂತದಲ್ಲಿಯೇ ಕಳೆದ ಲೋಕಸಭಾ ಚುನಾವಣೆಗೆ ಕಣಕ್ಕಿಳಿದಿದ್ದ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾಗಿವೆ.

2014 ರ ಲೋಕಸಭೆ ಚುನಾವಣೆಯಲ್ಲಿ 434 ಮಂದಿ ಸ್ಪರ್ಧಿಸಿದ್ದರೆ ಈ ಬಾರಿ ಮೊದಲ ಹಂತದಲ್ಲಿಯೇ 241 ಮಂದಿ ಅಖಾಡದಲ್ಲಿದ್ದಾರೆ. ಎರಡನೇ ಹಂತಕ್ಕೆ ಏ. 8 ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಎರಡನೇ ಹಂತದಲ್ಲಿಯೂ 200 ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. 2004 ರಲ್ಲಿ ದೇಶದಲ್ಲಿಯೇ 5453 ಮಂದಿ ಸ್ಪರ್ಧಿಸಿದರೆ ರಾಜ್ಯದಲ್ಲಿ 172 ಮಂದಿ ಕಣದಲ್ಲಿದ್ದರು.

ಭಾರತದ ASATನಿಂದ ಬಾಹ್ಯಾಕಾಶದಲ್ಲಿ ಕಸದ ರಾಶಿ: ನಾಸಾ ಅಸಮಾಧಾನ!

2009 ರಲ್ಲಿ ದೇಶಾದ್ಯಂತ 8070 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದರೆ, ರಾಜ್ಯದಲ್ಲಿ 427 ಮಂದಿ ಅಖಾಡಕ್ಕೆ ಧುಮುಕಿದ್ದಾರೆ. ಅಂತೆಯೇ 2014 ರಲ್ಲಿ ದೇಶದಲ್ಲಿ 8251 ಅಭ್ಯರ್ಥಿಗಳು ಚುನಾವಣೆಯನ್ನು ಎದುರಿಸಿದ್ದು, ರಾಜ್ಯದಲ್ಲಿ 434 ಮಂದಿ ಸ್ಪರ್ಧಿಸಿದ್ದರು. ಕಳೆದ 15 ವರ್ಷದಲ್ಲಿ ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಚುನಾವಣೆಯನ್ನು ನ್ಯಾಯ ಸಮ್ಮತ ಮತ್ತು ಮುಕ್ತವಾಗಿ ನಡೆಸುವುದು ಚುನಾವಣಾ ಆಯೋಗಕ್ಕೂ ಸವಾಲು ಆಗಿದೆ.

ಮಹಿಳೆಯರು ಅಧಿಕ:

ರಾಜ್ಯದಲ್ಲಿ ಮಹಿಳೆಯರು ಸಹ ಚುನಾವಣಾ ಕಣಕ್ಕೆ ಇಳವ ಸಂಖ್ಯೆ ಹೆಚ್ಚಾಗುತ್ತಿದೆ. 2004 ರಲ್ಲಿ ಕೇವಲ 10 ಮಹಿಳೆಯರು ಮಾತ್ರ ಚುನಾವಣೆ ಕಣಕ್ಕಿಳಿದಿದ್ದರು. 2009 ರಲ್ಲಿ 19 ಮತ್ತು 2014 ರಲ್ಲಿ 20 ಮಹಿಳೆಯರು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 20 ಮಹಿಳೆಯರ ಪೈಕಿ ಗೆದ್ದಿದ್ದು ಮಾತ್ರ ಒಬ್ಬರು ಮಾತ್ರ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಗೆಲುವು ಸಾಧಿಸಿದ್ದರು.

2019 ರ ಲೋಕಸಭೆ ಚುನಾವಣೆಗೆ ಮೊದಲ ಹಂತದಲ್ಲಿ 15 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. ಎರಡನೇ ಹಂತದಲ್ಲಿ ಮತ್ತಷ್ಟು ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಕಳೆದ ಬಾರಿ 20 ಮಂದಿ ಸ್ಪರ್ಧಿಸಿದ್ದರೆ ಈ ಬಾರಿ ಮಹಿಳೆಯರ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಪಕ್ಷದಿಂದ ಕೇವಲ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಮತ್ತು ಸಿಪಿಎಂದಿಂದ ವರಲಕ್ಷ್ಮೀ ಸ್ಪರ್ಧಿಸಿದ್ದಾರೆ. ರಾಜ್ಯ ಪಕ್ಷದಿಂದ ಯಾವೊಬ್ಬ ಮಹಿಳೆಗೂ ಟಿಕೆಟ್ ನೀಡಿಲ್ಲ. ಮಾನ್ಯತೆ ಪಡೆಯದ ಪಕ್ಷದಿಂದ ಆರು ಮಂದಿ ಕಣದಲ್ಲಿದ್ದಾರೆ. ಸುಮಲತಾ ಸೇರಿದಂತೆ 7 ಮಂದಿ ಸ್ವತಂತ್ರ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

- ಪ್ರಭುಸ್ವಾಮಿ ನಟೇಕರ್ 

 

click me!