ಮದರಸ ಶಾಲೆ ಮಕ್ಕಳನ್ನು ಬುದ್ದಿವಂತರಾಗಿಸುವ ಆಸೆ: ಸಚಿವ ನಾಗೇಶ್‌

By Govindaraj S  |  First Published Aug 27, 2022, 12:56 PM IST

ಮದರಸ ಶಾಲೆಗಳ ಮಕ್ಕಳನ್ನು ಬುದ್ದಿವಂತರನ್ನಾಗಿ ಮಾಡಬೇಕು ಎಂಬ ಆಸೆಯಿದೆ, ಬೇರೆ ವಿಷಯವಿಲ್ಲ. ಹೀಗಾಗಿ ಮದರಸಗಳ ಪರಿಸ್ಥಿತಿ ಹೇಗಿದೆ ಎಂದು ನೋಡಲು ಸೂಚನೆ ಕೊಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು. 


ತುಮಕೂರು (ಆ.27): ಮದರಸ ಶಾಲೆಗಳ ಮಕ್ಕಳನ್ನು ಬುದ್ದಿವಂತರನ್ನಾಗಿ ಮಾಡಬೇಕು ಎಂಬ ಆಸೆಯಿದೆ, ಬೇರೆ ವಿಷಯವಿಲ್ಲ. ಹೀಗಾಗಿ ಮದರಸಗಳ ಪರಿಸ್ಥಿತಿ ಹೇಗಿದೆ ಎಂದು ನೋಡಲು ಸೂಚನೆ ಕೊಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮದರಸಗಳು ಸಹ ಒಂದು ತರಹದ ಶಾಲೆಗಳಿದ್ದ ಹಾಗೆಯೇ. ಇಲಾಖೆ ಅನುಮತಿಯಿಂದಲೇ ನಡೆಯುತ್ತಿರುವುದು. 

ಬೇರೆ-ಬೇರೆ ಶಾಲೆಗಳ ಪರಿಸ್ಥಿತಿಗಳನ್ನು ನಾನು ಅವಲೋಕನ ಮಾಡಿದೆ. ಅದೇ ತರಹವೇ ಮದರಸ ಶಾಲೆಗಳ ಬಗ್ಗೆ ಅವಲೋಕನ ಮಾಡಿದ್ದೇನೆ. ಮದರಸಗಳ ಬಗ್ಗೆ ಪೋಷಕರಿಂದ ಅಪಾದನೆಗಳಿತ್ತು. ಬೇರೆ ಬೇರೆ ವಿಷಯಗಳನ್ನು ಕಲಿಸುತ್ತಿಲ್ಲ. ನಾವು ಶಾಲೆಗೆ ಹೋಗಲು ಅವಕಾಶ ಸಿಕ್ಕುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳಿಗೆ ಅಂತಹ ಶಾಲೆಗಳಿಗೆ ಹೋಗಿ, ಪರಿಸ್ಥಿತಿ ನೋಡಿಕೊಂಡು ಬರಲು ಸೂಚಿಸಲಾಗಿದೆ. ನಮಗೊಂದು ಆಸೆಯಿದೆ. ಆ ಮಕ್ಕಳನ್ನು ಸಹ ಬುದ್ದಿವಂತರನ್ನಾಗಿ ಮಾಡಬೇಕು ಎಂದು. ಅದು ಬಿಟ್ಟರೆ ಬೇರೇನಿಲ್ಲ ಎಂದರು.

Tap to resize

Latest Videos

ಅಗ್ನಿಬನ್ನಿರಾಯ ಸ್ವಾಮಿ ಜಯಂತಿ ಸರ್ಕಾರದಿಂದಲೇ ಆಚರಣೆ: ಸಿಎಂ ಬೊಮ್ಮಾಯಿ

ಅಂಗನವಾಡಿ ಹಾಗೂ ಶಾಲೆಗಳಲ್ಲಿ ಎನ್‌ಇಪಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಇಲಾಖೆಗಳನ್ನು ಸೇರಿಸಿ ಒಂದು ಸಮಿತಿಯನ್ನ ಮಾಡಿದ್ದೇವೆ. ಅದು ಪೂರ್ಣವಾಗಿ ಎಲ್ಲವನ್ನ ಪರಿಶೀಲನೆ ಮಾಡಲಿದೆ. 20 ಸಾವಿರ ಅಂಗನವಾಡಿಗಳಲ್ಲಿ ಎನ್‌ಇಪಿ ಜಾರಿಗೆ ತರಬೇಕು. ಈ ವರ್ಷದ ಕಡೆಯ ಒಳಗೆ ತರಬೇಕು ಎಂದು ಯೋಜನೆ ರೂಪಿಸಿದ್ದೇವೆ. ಮದರಸಗಳಲ್ಲಿ ಎನ್‌ಇಪಿ ವಿರೋಧದ ಬಗ್ಗೆ ಅಲ್ಲಿ ಅವಕಾಶ ಸಿಕ್ಕುತ್ತಿಲ್ಲ ಎಂದು ನಾನು ಹೇಳುತ್ತಿಲ್ಲ. ಆಪಾದನೆ ಅವರುಗಳ ಕಡೆಯಿಂದಲೇ ಇದೆ. ಅದನ್ನೇ ನಾನು ಹೇಳುತ್ತಿರುವುದು. ಇದು ನಿಜವೇ, ಸುಳ್ಳೇ ಎಂಬುದು ಗೊತ್ತಾಗಬೇಕಿದೆ ಎಂದರು.

5ನೇ ಕ್ಲಾಸ್‌ ಸಂಖ್ಯೆಯ ಮಕ್ಕಳು 6, 7, 8 ನೇ ಕ್ಲಾಸ್‌ಗೆ ಬರುತ್ತಿಲ್ಲ. 8 ,9, 10 ಕ್ಕೆ ಬಂದ ಮಕ್ಕಳು ಪಿಯುಸಿಗೆ ಬರುತ್ತಿಲ್ಲ. ಪಿಯು ಬರುವ ಸಂಖ್ಯೆಯಷ್ಟು ಮಕ್ಕಳು ಡಿಗ್ರಿಗೆ ಬರುತ್ತಿಲ್ಲ. ಈ ಸಂಬಂಧ ಒಂದಷ್ಟು ಪರಿಶೀಲಿಸಿದಾಗ, ಮಕ್ಕಳೇ ಹೇಳುತ್ತಾರೆ. ನಮಗೆ ಬೇರೆ ವಿಷಯಗಳು ಅರ್ಥ ಅಗುತ್ತಿಲ್ಲ ಎಂದು. ಖಂಡಿತವಾಗಿಯೂ ಎಲ್ಲ ಶಾಲೆಗಳಲ್ಲಿ ಎನ್‌ಇಪಿ ಅನುಷ್ಠಾನ ಆಗುತ್ತದೆ. ಯಾವ್ಯಾವ ಶಾಲೆಗಳು ಕರ್ನಾಟಕ ಎಜುಕೇಶನ್‌ ಆಕ್ಟ್‌ನಲ್ಲಿ ರಿಜಿಸ್ಟರ್ಡ್‌ ಆಗಿದೆ ಅಂತಹ ಶಾಲೆಗಳಲ್ಲಿ ಎನ್‌ಇಪಿ ಜಾರಿಯಾಗಲೇಕು ಎಂದರು.

ಮತದಾನ ಜಾಗೃತಿ ಕಾರ್ಯಕ್ರಮ: ವೋಟರ್‌ ಐಡಿಗೆ ಆಧಾರ್‌ ನಂಬರ್‌ ಜೋಡಿಸಿ

ಸ್ವ ಕ್ಷೇತ್ರದಲ್ಲಿ ಹಲವು ಶಾಲೆಗಳು ದುರಸ್ತಿ: ನಾನು ರಾಜ್ಯಕ್ಕೆ ಮಂತ್ರಿ. ನನಗೆ ಇಡೀ ರಾಜ್ಯದಲ್ಲಿ 48 ಸಾವಿರ ಶಾಲೆಗಳಲ್ಲಿ ಎಷ್ಟು ಶಾಲೆಗಳು ಚೆನ್ನಾಗಿವೆ, ಎಷ್ಟು ಚೆನ್ನಾಗಿಲ್ಲ ಅಂತ ಗೊತ್ತು. ಕಳೆದ ಬಾರಿ ಅಧಿಕಾರ ನಡೆಸಿದ ಸರ್ಕಾರಗಳು ಸರಿಯಾಗಿ ಗಮನ ಕೊಡದ ಕಾರಣ, ಮೂರು ವರ್ಷಗಳಿಂದ ಮಳೆ ಸುರಿದ ಕಾರಣ ಕೆಲವು ಕಡೆ ದುರಸ್ತಿಯಾಗಿಲ್ಲ. ಅದನ್ನ ಸರಿಪಡಿಸುವಂತಹ ಕೆಲಸ ಮಾಡುತ್ತೇವೆ. ಅದೇ ತಿಪಟೂರು ತಾಲೂಕಿನ ಶಾಲೆಗಳನ್ನು ಅಭಿವೃದ್ಧಿ ಮಾಡುವ ಕೆಲಸವನ್ನ ಮಾಡುತ್ತೇನೆ. ಈ ಬಾರಿ 8100 ಕೊಠಡಿಗಳನ್ನ ಹೊಸದಾಗಿ ನಿರ್ಮಾಣ ಮಾಡುತ್ತಿದ್ದೇವೆ. ಅದೇ ರೀತಿ 15 ಸಾವಿರ ಶಿಕ್ಷಕರನ್ನು ಹೊಸದಾಗಿ ಈ ಬಾರಿ ನೇಮಕ ಮಾಡಿಕೊಳ್ಳಲಾಗುತ್ತದೆ. ಶಿಕ್ಷಣ ಇಲಾಖೆಗೆ ಸರ್ಕಾರ ಯಾವುದೇ ಕೊರತೆ ಮಾಡಿಲ್ಲ ಎಂದು ಸಚಿವರು ತಿಳಿಸಿದರು.

click me!