Vivo for Education Scholarship: 100 ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು

By Suvarna News  |  First Published Jan 18, 2022, 5:55 PM IST

*ಚೀನಾ ಮೂಲದ ವಿವೋ 100 ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೆರವು ನೀಡಲು ಮುಂದಾಗಿದೆ
*ಹಿಂದುಳಿದವ ವರ್ಗದ ವಿದ್ಯಾರ್ತಿಗಳಿಗೆ ಪ್ರತಿ ವರ್ಷವು ತನ್ನ ಈ ಯೋಜನೆ ಮೂಲಕ ನೆರವು ನೀಡುತ್ತದೆ
*1.5 ಲಕ್ಷ ಮೌಲ್ಯದ ನಗದು ವಿದ್ಯಾರ್ಥಿವೇತನವನ್ನು 100 ವಿದ್ಯಾರ್ಥಿಗಳಿಗೆ ನೀಡಲಿದೆ


ಜಾಗತಿಕ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿವೋ (Vivo) ಕಂಪನಿಯು ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನೆರವು ನೀಡಲು ಮುಂದಾಗಿದೆ. ಈ ವರ್ಷವೂ 100 ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಯೋಜನೆಯೊಂದನ್ನು ಘೋಷಿಸಿದೆ. ವಿವೋ (Vivo) ಹೊಸ ಹಂತದ 'vivo For Education' ಕಾರ್ಯಕ್ರಮವನ್ನು ಬಿಡುಗಡೆ ಮಾಡಿದೆ. ವಿವೋ ಪ್ರೊಟೀನ್ (ಈ ಹಿಂದೆ ಎನ್‌ಎಸ್‌ಡಿಎಲ್ ಎಂದು ಕರೆಯಲಾಗುತ್ತಿತ್ತು) ಜೊತೆಗೆ 'ವಿವೋ ಫಾರ್ ಎಜುಕೇಶನ್' ಉಪಕ್ರಮದ ಹೊಸ ಹಂತವನ್ನು ಘೋಷಿಸಿದೆ.

ಈ ಯೋಜನೆಯಲ್ಲಿ ವಿವೋ (Vivo)10 ಲಕ್ಷ ಮೌಲ್ಯದ 100 ವಿವೋ ಸ್ಮಾರ್ಟ್‌ಫೋನ್‌ಗಳನ್ನು ಹಿಂದುಳಿದ  ವಿದ್ಯಾರ್ಥಿಗಳಿಗೆ ನೀಡಲಿದೆ. ಜೊತೆಗೆ ಮೌಲ್ಯದ ನಗದು ವಿದ್ಯಾರ್ಥಿವೇತನವನ್ನು ನೀಡಲು ಸಿದ್ಧವಾಗಿದೆ. ಅಂದಹಾಗೇ ಕಾಲೇಜು ಮೆಟ್ಟಿಲು ಹತ್ತಿರುವ ವಿದ್ಯಾರ್ಥಿಗಳು ವಿವೋದ ಈ ವಿನೂತನ ಯೋಜನೆಯ ಫಲಾನಿಭವಿಗಳಾಗುತ್ತಾರೆ. ಅಂದ್ರೆ ಪ್ರಸ್ತುತ 11 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿವೋ ಸ್ಮಾರ್ಟ್‌ಫೋನ್ ಮತ್ತು ನಗದು ಸ್ಕಾಲರ್‌ಶಿಪ್ ಅನ್ನು ಒದಗಿಸಲಾಗುವುದು. ವಿದ್ಯಾರ್ಥಿಗಳು ಗ್ಯಾಜೆಟ್‌ಗಳೊಂದಿಗೆ ಉತ್ಕೃಷ್ಟ ಕಲಿಕೆಯ ಅನುಭವವನ್ನು ಸಾಧಿಸಲು ವಿವೋ ಕಳೆದ ವರ್ಷ ಕೂಡ 100 ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡಿ ಪ್ರೋತ್ಸಾಹಿಸಿತ್ತು.   

Tap to resize

Latest Videos

undefined

vivo, ಜಾಗತಿಕ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಇತ್ತೀಚೆಗೆ 'vivo ಫಾರ್ ಎಜುಕೇಶನ್' ಕಾರ್ಯಕ್ರಮದ ಹೊಸ ಹಂತದೊಂದಿಗೆ ಬರಲು Protean (ಹಿಂದೆ NSDL ಎಂದು ಕರೆಯಲಾಗುತ್ತಿತ್ತು) ಜೊತೆಗೆ ತನ್ನ ಸಹಯೋಗವನ್ನು ಘೋಷಿಸಿದೆ. ಯೋಜನೆಯ ಭಾಗವಾಗಿ ವಿವೋ 100 ವಿವೋ ಸ್ಮಾರ್ಟ್‌ಫೋನ್‌ಗಳನ್ನು (10 ಲಕ್ಷ ಮೌಲ್ಯದ) ಮತ್ತು 1.5 ಲಕ್ಷ ಮೌಲ್ಯದ ನಗದು ವಿದ್ಯಾರ್ಥಿವೇತನವನ್ನು  100 ಹಿಂದುಳಿದ ಮಕ್ಕಳಿಗೆ ನೀಡಲಿದೆ.

Oxfam India: ಟಾಪ್‌ 10 ಧನಿಕರ ಆಸ್ತಿಯಲ್ಲಿ ಎಲ್ಲ ಮಕ್ಕಳಿಗೆ 25 ವರ್ಷ ಉಚಿತ ಶಿಕ್ಷಣ!

ಪ್ರಥಮ‌ ಪಿಯುಸಿ ಅಥವಾ  11 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿವೋ ಸ್ಮಾರ್ಟ್‌ಫೋನ್ ಮತ್ತು ನಗದು ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಶಿಕ್ಷಣವನ್ನು ಬೆಂಬಲಿಸುವ ಉದ್ದೇಶದೊಂದಿಗೆ ಭಾರತ ಸರ್ಕಾರದ ಜೊತೆ  ಹೊಂದಾಣಿಕೆಯೊಂದಿಗೆ ಮುಂದಾಗಿದವನ್ನು ಜಾರಿಗೊಳಿಸಿದ್ದು,  ಹಣಕಾಸಿನ ವಿಭಜನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಕಡಿಮೆ-ಆದಾಯದ ಕುಟುಂಬಗಳ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಬೆಂಬಲವನ್ನು ಪಡೆಯಬಹುದು. 

ವಿವೋದ ಈ ಯೋಜನೆಯು ಮಕ್ಕಳನ್ನು ಸ್ಮಾರ್ಟ್‌ಫೋನ್‌ನೊಂದಿಗೆ ಸಜ್ಜುಗೊಳಿಸುತ್ತದೆ. ಇದು ಕೋವಿಡ್ ಮತ್ತು ಇತರ ರೂಪಾಂತರಗಳ ಹೆಚ್ಚುತ್ತಿರುವ ಅಪಾಯದಿಂದಾಗಿ ದೂರಶಿಕ್ಷಣ ಸಂಸ್ಕೃತಿಯ ಈ ಹಂತದಲ್ಲಿ ಉತ್ಕೃಷ್ಟ ಕಲಿಕೆಯ ಅನುಭವವನ್ನು ಸಾಧಿಸಲು ಸಹಾಯ ಮಾಡುತ್ತದೆ.

"ದೂರಶಿಕ್ಷಣದ ಈ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳು ವಿದ್ಯಾರ್ಥಿಗಳಿಗೆ ಜೀವನಾಡಿಗಳಾಗಿವೆ. ಬ್ರ್ಯಾಂಡ್‌ನಂತೆ, ತಂತ್ರಜ್ಞಾನವು ಕೆಲಸವನ್ನು ಸರಳಗೊಳಿಸುತ್ತದೆ, ಶಿಕ್ಷಣ ಮತ್ತು ಜ್ಞಾನದ ಸ್ವಾಧೀನಕ್ಕೆ ಸಹಾಯ ಮಾಡುತ್ತದೆ ಎಂದು ನಾವು ಬಲವಾಗಿ ನಂಬುತ್ತೇವೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಲು ನಾವು ಸಂತೋಷಪಡುತ್ತೇವೆ. ಅವರ ಕಲಿಕೆಯಲ್ಲಿ ಸಂತೋಷ ಮತ್ತು ಅವರ ಮುಖದಲ್ಲಿ ನಗು ತರಿಸಲು ನಾವು ಪ್ರಯತ್ನಿಸುತ್ತೇವೆ" ಅಂತಾರೆ ವಿವೋ ಇಂಡಿಯಾದ ಬ್ರ್ಯಾಂಡ್ ಸ್ಟ್ರಾಟಜಿಯ ನಿರ್ದೇಶಕ ಯೋಗೇಂದ್ರ ಶ್ರೀರಾಮುಲ.

IGNOU Online Journalism Courses: ಆನ್‌ಲೈನ್ ಪತ್ರಿಕೋದ್ಯಮ ಕೋರ್ಸ್ ಆರಂಭಿಸಿದ ಇಗ್ನೋ

ಈ ಹಿಂದೆಯೂ ಕಳೆದ ವರ್ಷ ವಿವೋ‌ ಕಂಪನಿಯು 100 ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ಆನ್‌ಲೈನ್ ಶಿಕ್ಷಣಕ್ಕಾಗಿ ವಿವೋ ಸ್ಮಾರ್ಟ್‌ಫೋನ್‌ಗಳನ್ನು ಒದಗಿಸುವ ಮೂಲಕ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಿತ್ತು. 'vivo For Education' ಉಪಕ್ರಮದ ಭಾಗವಾಗಿ 65 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ₹8 ಲಕ್ಷ ಮೌಲ್ಯದ ನಗದು ವಿದ್ಯಾರ್ಥಿವೇತನವನ್ನು ಒದಗಿಸಿತ್ತು. ಈ ವರ್ಷವೂ ಅದೇ ಹಾದಿಯಲ್ಲಿ ಹೆಜ್ಜೆ ಇಟ್ಟಿರಯವ ವಿವೋ ಕಂಪನಿ,₹10 ಲಕ್ಷ ಮೌಲ್ಯದ 100 ವಿವೋ ಸ್ಮಾರ್ಟ್‌ಫೋನ್‌ಗಳನ್ನು ಮತ್ತು ₹1.5 ಲಕ್ಷ ಮೌಲ್ಯದ ನಗದು ವಿದ್ಯಾರ್ಥಿವೇತನವನ್ನು  100 ಬಡ ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿದ್ದು ಸ್ವಾಗತಾರ್ಹ.

click me!