ಮೊಬೈಲ್ ಏಕೆ ಬಳಸ್ಬೇಕು. ಈ ಪ್ರಶ್ನೆ ಕೇಳಿದಾಗ ವಿದ್ಯಾರ್ಥಿಗಳು ಸೂಕ್ತ ಉತ್ತರ ಬರೀತಾ ಹೋಗ್ತಾರೆ. ಆದ್ರೆ ಈ ವಿದ್ಯಾರ್ಥಿ ಸ್ವಲ್ಪ ಭಿನ್ನವಾಗಿ ಉತ್ತರ ಬರೆದಿದ್ದಾನೆ. ಅದನ್ನು ನೋಡಿದ ಬಳಕೆದಾರರು ಅಚ್ಚರಿಗೊಳಗಾಗಿದ್ದಾರೆ.
ಮೊಬೈಲ್ ಇಲ್ದೆ ಬದುಕೋದು ಕಷ್ಟ ಎನ್ನುವ ಸ್ಥಿತಿಗೆ ಜನರು ಬಂದಿದ್ದಾರೆ. ಒಂದು ಐದು – ಹತ್ತು ನಿಮಿಷ ಕೈಗೆ ಮೊಬೈಲ್ ಸಿಕ್ಕಿಲ್ಲ ಅಂದ್ರೂ ಚಡಪಡಿಕೆ ಶುರುವಾಗುತ್ತದೆ. ಊಟದಿಂದ ನಿದ್ರೆಯವರೆಗೆ, ಶೌಚದಿಂದ ಸ್ನಾನದವರೆಗೆ ಎಲ್ಲ ಕಡೆ ಮೊಬೈಲ್ ಅಗತ್ಯ. ಏನೇ ಸಮಸ್ಯೆ ಬಂದ್ರೂ ಮೊಬೈಲ್ ಹಿಡಿದು ಸರ್ಚ್ ಮಾಡುವ ಜನರು, ಮನರಂಜನೆಗೂ ಅದನ್ನೇ ಬಳಸುತ್ತಿದ್ದಾರೆ. ಒಂದಲ್ಲ ಒಂದು ಕೆಲಸಕ್ಕೆ ಮೊಬೈಲ್ ನಲ್ಲಿ ಬ್ಯುಸಿಯಾಗಿರುವ ಜನರಿಗೆ ರಕ್ತ ಸಂಬಂಧಿಗಳಿಗಿಂತ ಅದು ಹೆಚ್ಚು ಆಪ್ತವಾಗಿದೆ. ಮೊಬೈಲ್ ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಪೋಸ್ಟ್ ವೈರಲ್ ಆಗೋದನ್ನು ನಾವು ನೋಡ್ಬಹುದು. ಈಗ ಮತ್ತೊಂದು ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ನಲ್ಲಿ ಮೊಬೈಲ್ ಏಕೆ ಬೇಕು ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ನೀಡಿರುವ ಉತ್ತರ ಆಸಕ್ತಿಕರವಾಗಿದೆ. ವಿದ್ಯಾರ್ಥಿ ಈ ಪ್ರಶ್ನೆಗೆ ಉತ್ತರ ನೀಡಿದ್ದಾನೆ ಎನ್ನುವಂತೆ ಈ ಪೋಸ್ಟ್ ನಲ್ಲಿ ಬಿಂಬಿಸಲಾಗಿದೆ. ಆದ್ರೆ ವಾಸ್ತವದಲ್ಲಿ ಬಳಕೆದಾರನೇ ಈ ಪ್ರಶ್ನೆ ಕೇಳ್ಕೊಂಡು ಆತನೇ ಉತ್ತರ ನೀಡಿದ್ದಾನೆ. ಏನೇ ಇರಲಿ ಆತನ ಉತ್ತರವನ್ನು ಶಿಕ್ಷಕರು ನೋಡಿದ್ರೆ ದಂಗಾಗೋದು ಗ್ಯಾರಂಟಿ.
ಮೊಬೈಲ್ (Mobile) ಏಕೆ ಬಳಸಬೇಕು ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ವ್ಯಕ್ತಿ ಇಂಗ್ಲೀಷ್ ನಲ್ಲಿ ಉತ್ತರ ಬರೆದಿದ್ದಾರೆ. ಮೊಬೈಲ್ ಇಲ್ಲ ಅಂದ್ರೆ ಮೂಡ್ ಆಫ್ (mode off) ಆಗುತ್ತದೆ. ಮೂಡ್ ಆಫ್ ಆದ್ರೆ ಓದೋಕೆ ಸಾಧ್ಯವಿಲ್ಲ. ವಿದ್ಯಾಭ್ಯಾಸ ಮಾಡದೆ ಹೋದ್ರೆ ಕೆಲಸ ಸಿಗೋದಿಲ್ಲ. ಕೆಲಸ ಸಿಕ್ಕಿಲ್ಲ ಎಂದಾದ್ರೆ ಹಣ ಇರೋದಿಲ್ಲ. ಆಹಾರ ಸಿಗೋದಿಲ್ಲ. ಆಗ ವ್ಯಕ್ತಿ ಕೆಟ್ಟದಾಗಿ ಕಾಣುತ್ತಾನೆ, ತೆಳ್ಳಗಾಗುತ್ತಾನೆ. ಸುಂದರವಾಗಿಲ್ಲದ ವ್ಯಕ್ತಿಗೆ ಮದುವೆ ಆಗೋದಿಲ್ಲ. ಮದುವೆ ಆಗದಿದ್ದರೆ ನೀವು ಏಕಾಂಗಿಯಾಗಿ ಇರಬೇಕಾಗುತ್ತದೆ. ಒಂಟಿಯಾಗಿದ್ದರೆ ಖಿನ್ನತೆ (Mood) ಗೆ ಒಳಗಾಗುತ್ತೀರಿ. ಖಿನ್ನತೆಯಿಂದ ಅನಾರೋಗ್ಯ ಕಾಡುತ್ತದೆ. ಇದ್ರಿಂದ ನಿಮಗೆ ಸಾವು ಸಂಭವಿಸುತ್ತದೆ ಎಂದು ಬರೆದ ವ್ಯಕ್ತಿ ಕೊನೆಯಲ್ಲಿ ನೀತಿ, ಮೊಬೈಲ್ ಇಲ್ಲದೆ ಜೀವನ ಇಲ್ಲ ಎಂದು ಬರೆದಿದ್ದಾನೆ.
undefined
ರೀಲ್ಸ್ ಮಾಡೋದ ತಡೆದಿದ್ದೇ ತಪ್ಪಾಯ್ತು, ಬೆಂಗಳೂರಲ್ಲಿದ್ದ ಗಂಡನ ಮೇಲೆ ಹೀಗೆ ರಿವೇಂಜ್ ತಗೊಳ್ಳದಾ?
creator03319 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇಟ್ಸ್ ಮೈ ಲೈಫ್ ಎನ್ನುವ ಹಾಡನ್ನು ನೀವು ವಿಡಿಯೋ ಹಿಂದೆ ಕೇಳಬಹುದು. ಪ್ರಶ್ನೆ ಉತ್ತರದ ನಂತ್ರ ಅದನ್ನು ಶಿಕ್ಷಕರು ನೋಡಿದ್ದಾರೆ, ಹತ್ತಕ್ಕೆ ಹತ್ತು ಅಂಕವನ್ನು ಇದಕ್ಕೆ ನೀಡಿದ್ದಾರೆ. ಗುಡ್, ಒಳ್ಳೆಯ ವಿವರಣೆ ಎಂದು ಶಿಕ್ಷಕರು ಸಹಿ ಹಾಕಿರೋದನ್ನು ನೀವು ನೋಡ್ಬಹುದು. ಈ ವಿಡಿಯೋವನ್ನು ಈವರೆಗೆ 16 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. 29 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ.
ಅಮೃತಧಾರೆ: ಭೂಮಿಯನ್ನ ಬಾಚಿ ತಬ್ಬಿಕೊಂಡ ಡುಮ್ಮಾ ಸರ್, ಇದು ಮಸ್ತ್ ಅಂದ ವೀಕ್ಷಕರು
ವಿದ್ಯಾರ್ಥಿ ನೀಡಿದ ಉತ್ತರ ಸರಿಯಾಗಿದೆ ಎಂದು ಒಬ್ಬ ಕಮೆಂಟ್ ಮಾಡಿದ್ರೆ ಇನ್ನೊಬ್ಬರು, ಹ್ಯಾಂಡ್ ರೈಟಿಂಗ್ ಚೆನ್ನಾಗಿದೆ ಎಂದಿದ್ದಾರೆ. ಟಿವಿ ಇದ್ಯಲ್ಲ ಎಂಬ ಬಳಕೆದಾರರ ಪ್ರಶ್ನೆಗೆ ಪೋಸ್ಟ್ ಹಾಕಿದವರು, ಮೊಬೈಲ್ ನಷ್ಟಲ್ಲ ಎಂದು ಉತ್ತರ ನೀಡಿದ್ದಾರೆ. ಈ ಪೋಸ್ಟ್ ಗೆ ಅನೇಕ ತಮಾಷೆ ಹಾಗೂ ಗಂಭೀರ ಕಮೆಂಟ್ ಗಳನ್ನು ನೀವು ನೋಡ್ಬಹುದು. ಮೊಬೈಲ್ ನಮ್ಮ ಸಮಯ ಹಾಳು ಮಾಡ್ತಿದೆ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ಹತ್ತಕ್ಕೆ ಹತ್ತು ಅಂಕ ನೀಡಿದ್ದನ್ನು ಪ್ರಶ್ನೆ ಮಾಡಿದ್ದಾರೆ. ಉತ್ತರ ಪತ್ರಿಕೆಯಲ್ಲಿ ಮೊಬೈಲ್ ಸ್ಪೆಲಿಂಗ್ ತಪ್ಪಿದೆ. ಹಾಗಾಗಿ ಅರ್ಧ ಅಂಕ ಕಟ್ ಮಾಡಿ ಎಂದು ಒಬ್ಬರು ಸಲಹೆ ನೀಡಿದ್ದಾರೆ. ಮತ್ತೊಬ್ಬರು ಮೊಬೈಲ್ ನಿಂದ ಎಷ್ಟು ಲಾಭವಿದ್ಯೋ ಅಷ್ಟೇ ನಷ್ಟವಿದೆ ಎಂದಿದ್ದಾರೆ.