ಸರ್ಕಾರಿ ಶಾಲಾ ಮಕ್ಕಳಿಂದ ಕಾರು ಕ್ಲೀನ್ ಮಾಡಿಸಿದ ಮುಖ್ಯ ಶಿಕ್ಷಕ; ಏನು ಶಿಕ್ಷೆ ಕೊಡ್ತೀರಾ ಸಚಿವರೇ ಎಂದ ಪಾಲಕರು

By Sathish Kumar KHFirst Published Feb 18, 2024, 3:23 PM IST
Highlights

ಇಷ್ಟು ದಿನ ವಿದ್ಯಾರ್ಥಿಗಳಿಂದ ಶಾಲೆಯ ಕೋಣೆ, ಆವರಣ, ಶೌಚಗೃಹ ಸ್ವಚ್ಛಗೊಳಿಸುತ್ತಿದ್ದ ಶಿಕ್ಷಕರು ಈಗ ತಮ್ಮ ಕಾರನ್ನೂ ವಿದ್ಯಾರ್ಥಿಗಳಿಂದಲೇ ಸ್ವಚ್ಛಗೊಳಿಸಿದ ಘಟನೆ ನಡೆದಿದೆ.

ವಿಜಯಪುರ (ಫೆ.18): ರಾಜ್ಯದ ಹಲವೆಡೆ ಈಗಾಗಲೇ ವಿವಿಧ ಶಾಲೆಗಳಲ್ಲಿ ಶೌಚಾಲಯ ಹಾಗೂ ಶಾಲಾ ಕೋಣೆಗಳನ್ನು ಮಕ್ಕಳಿಂದ ಸ್ವಚ್ಛಗೊಳಿಸುವ ಪ್ರಕರಣಗಳು ನಡೆದಿದ್ದವು. ಆದರೆ, ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಂದ ತನ್ನ ಕಾರನ್ನು ಕ್ಲೀನ್ ಮಾಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಹೌದು, ಹಿಂದೆಲ್ಲಾ ಗುರುವಿನ ಗುಲಾಮನಾಗುವ ತನಕ ಸಿಗುವುದಿಲ್ಲ ಮುಕುತಿ ಎಂಬ ಮಾತನ್ನು ಹೇಳಲಾಗುತ್ತಿತ್ತು. ಆದರೆ, ಈಗ ಹಿಂದಿನ ಸಂಪ್ರದಾಯ ಹಾಗೂ ಶಿಕ್ಚಣ ಪದ್ದತಿ ಬದಲಾಗಿದ್ದು, ಪೋಷಕರು ಮಕ್ಕಳನ್ನು ಶಿಕ್ಷಣಕ್ಕೆ ಬಿಟ್ಟು ಬೇರ್ಯಾವ ಕೆಲಸ ಮಾಡುವುದಕ್ಕು ಬಿಡುವುದಿಲ್ಲ. ಇನ್ನು ಶಿಕ್ಷಣ ಇಲಾಖೆ ನಿಯಮಾವಳಿಗಳಲ್ಲಿಯೂ ಮಕ್ಕಳಿಂದ ಯಾವುದೇ ಕೆಲಸ ಮಾಡಿಸುವುದಕ್ಕೆ ಅವಕಾಶವಿಲ್ಲ. ಆದರೂ, ಕೆಲವು ಶಿಕ್ಷಕರು ಮಕ್ಕಳಿಂದಲೇ ಶಾಲೆಯ ಕೋಣೆ, ಶಾಲಾ ಆವರಣ ಹಾಗೂ ಶೌಚಗೃಹಗಳನ್ನು ಸ್ವಚ್ಛಗೊಳಿಸುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಶಿಕ್ಷಕರ ಕ್ರಮಕ್ಕೆ ಮಕ್ಕಳ ಪೋಷಕರು ಸೇರಿದಂತೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು.

ಬೆಂಗಳೂರಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಫೆ.28 ಡೆಡ್‌ಲೈನ್ ಕೊಟ್ಟ ಬಿಬಿಎಂಪಿ

ಈಗ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಶಾಲಾ ಕಾರ್ಯಗಳನ್ನು ಮಾಡಿಸುವುದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಮುಖ್ಯ ಶಿಕ್ಷಕ ತಮ್ಮ ವೈಯಕ್ತಿಕ ಕೆಲಸಗಳನ್ನೂ ಮಾಡಿಸಿಕೊಂಡಿದ್ದಾರೆ. ಸರ್ಕಾರಿ ಶಾಲಾ ನುಖ್ಯ ಶಿಕ್ಷಕ ಬಸವರಾಜ ರಕ್ಕಸಗಿ ಅವರು ಈಗ ತಮ್ಮ ಕಾರನ್ನು ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಿಕೊಂಡಿದ್ದಾರೆ. ಶನಿವಾರ ಅರ್ಧ ದಿನ ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳಿಂದಲೇ ತನ್ನ ಕಾರನ್ನಯ ಸ್ವಚ್ಚ ಮಾಡುಸಿಕೊಂಡಿರುವ ಘಟನೆ ನಡೆದಿದ್ದು, ಈಗ ವಿಡಿಯೋ ವೈರಲ್ ಆಗಿದೆ. 

ನಾಲತವಾಡ ಪಟ್ಟಣದ ವೀರೇಶ್ವರ ವೃತ್ತದ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ರಕ್ಕಸಗಿ ಮೇಲೆ ಕಾರನ್ನು ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಿದ ಗಂಭೀರ ಆರೋಪ ಕೇಳಿಬಂದಿದೆ. ಇಬ್ಬರು ವಿದ್ಯಾರ್ಥಿಗಳು ಕಾರ್ ಸ್ವಚ್ಛ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಶಾಲಾ ಆವರಣದಲ್ಲಿ ನೀರಿನಿಂದ ಕಾರು ತೊಳೆದು ಟವಲ್‌ನಿಂದ ಕ್ಲೀನ್ ಮಾಡುತ್ತಿರುವ ವಿಡಿಯೋ ಸೆರೆಯಾಗಿದೆ. ಈ ವಿಡಿಯೋ ನೋಡಿದ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳ ಪೋಷಕರು, ಶಿಕ್ಷಣ ಸಚಿವರೇ ತಪ್ಪು ಮಾಡಿದ ಶಿಕ್ಷರ ಮೇಲೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಪಿಎಸ್ಐ ಹಗರಣ ತನಿಖೆ ಮತ್ತಷ್ಟು ಚುರುಕು, 2 ವರ್ಷದ ಬಳಿಕ ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌ ಬಂಟರು ಬಂಧನ! ಕಲಬುರಗಿ (ಫೆ.18): ಎರಡು ವರ್ಷಗಳಿಂದ ವಿವಾದದಲ್ಲಿ ಸಿಲುಕಿರುವ 545 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಹಗರಣದ ತನಿಖೆ ಮತ್ತೆ ಚುರುಕುಗೊಂಡಿದೆ. ಪಿಎಸ್ಐ  ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಮೂವರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳು ಅಭ್ಯರ್ಥಿಗಳಿಗೆ ಬ್ಲೂಟೂಥ್ ಮೂಲಕ ಉತ್ತರ ಹೇಳಿ ಕೊಟ್ಟಿದ್ದಕ್ಕೆ ಸಂಬಂಧಿಸಿದಂತೆ  ಕಲಬುರಗಿ ಅಶೋಕ್ ನಗರದಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಈಗ ಸಿಐಡಿ ಬಂಧಿಸಿದೆ. 

ಕೋಮುವಾದ ಚುನಾವಣೆ ದಿಕ್ಕನ್ನೇ ಬದಲಿಸಿದೆ: ಬಿ.ಆರ್.ಪಾಟೀಲ್

ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಂಧಿಸಿದಂತೆ  ಶನಿವಾರ ಮಧ್ಯಾಹ್ನ ಆರ್‌ ಡಿ ಪಾಟೀಲ್‌ನ ಬಲಗೈ ಬಂಟರಾದ ಇಬ್ಬರು ಸರಕಾರಿ ನೌಕರರು ಹಾಗೂ ಬಿ ಕಾಂ ವಿದ್ಯಾರ್ಥಿ ಸಿಐಡಿ ಬಲೆಗೆ ಬಿದ್ದಿದ್ದಾರೆ. ಸಿಐಡಿ ಅಧಿಕಾರಿಗಳು  ಕಲಬುರಗಿಯಲ್ಲಿ ಮೂವರನ್ನ ಬಂಧನ ಮಾಡಿದ್ದಾರೆ. ಬಂಧಿತ ಆರೋಪಿಗಳೆಲ್ಲರೂ ಪಿಎಸ್‌ಐ ಪರಿಕ್ಷಾ ಹಗರಣ ಮತ್ತು ಕೆಇಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌ ಆರ್ ಡಿ ಪಾಟೀಲ್ ಜೊತೆ ಸಂಪರ್ಕವಿದ್ದವರಾಗಿದ್ದಾರೆ. ಬಂಧಿತ ಚಂದ್ರಕಾಂತ್ ಪ್ಯಾಟಿ ಆರೋಗ್ಯ ಇಲಾಖೆ ಶಹದಾಬಾದ್ ನಲ್ಲಿ ಎಫ್ ಡಿಎ ಅಧಿಕಾರಿಯಾಗಿದ್ದಾನೆ. ಮತ್ತೋರ್ವ ಬಂಧಿತ ಬಸವರಾಜನ್ ಸಿದ್ದರಾಮಪ್ಪ ಅಫ್ಜಲ್‌ಪುರದ ಬಿಸಿಎಂ ವಸತಿ ನಿಲಯದ ಸೂಪರಿಂಟೆಂಡೆಂಟ್‌ ಆಗಿದ್ದಾನೆ. ಮೂರನೇ ಬಂಧಿತ ಆರೋಪಿ ಶಶಿಧರ್ ಬಿಕಾಂ ವಿದ್ಯಾರ್ಥಿಯಾಗಿದ್ದಾನೆ.

click me!