UPSC Results: ಕೋಚಿಂಗ್‌ ಇಲ್ಲದೆ ಯುಪಿಎಸ್ಸಿಯಲ್ಲಿ 101ನೇ ರ‍್ಯಾಂಕ್ ಪಡೆದ ಸೌಭಾಗ್ಯ!

By Kannadaprabha News  |  First Published Apr 17, 2024, 7:03 AM IST

ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಸೌಭಾಗ್ಯ ಬೀಳಗಿಮಠ ಯಾವುದೇ ತರಬೇತಿ ಇಲ್ಲದೆ ಯುಪಿಎಸ್ಸಿಯಲ್ಲಿ 101ನೇ ರ‍್ಯಾಂಕ್ ಪಡೆಯುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ. 


ಬಸವರಾಜ ಹಿರೇಮಠ

ಧಾರವಾಡ (ಏ.17): ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಸೌಭಾಗ್ಯ ಬೀಳಗಿಮಠ ಯಾವುದೇ ತರಬೇತಿ ಇಲ್ಲದೆ ಯುಪಿಎಸ್ಸಿಯಲ್ಲಿ 101ನೇ ರ‍್ಯಾಂಕ್ ಪಡೆಯುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ. ತಮ್ಮ ಪದವಿ ಕಾಲೇಜಿನ ಶಿಕ್ಷಕಿಯೊಬ್ಬರಿಂದ ಉಚಿತವಾಗಿ ಮಾರ್ಗದರ್ಶನ ಪಡೆದು ಈ ಸಾಧನೆ ಮಾಡಿದ್ದಾರೆ. ಮೂಲತಃ ದಾವಣಗೆರೆಯವರಾದ, ಸದ್ಯ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಸೌಭಾಗ್ಯ ಬೀಳಗಿಮಠ ಈ ಸಾಧನೆ ಮಾಡಿದವರು. ಸೌಭಾಗ್ಯ ಅವರ ತಂದೆ ಶರಣಯ್ಯ ಸ್ವಾಮಿ ದಾವಣಗೆರೆಯ ಶ್ಯಾಮನೂರಿನಲ್ಲಿ ನರ್ಸರಿ ಮಾಡಿಕೊಂಡಿದ್ದಾರೆ.

Tap to resize

Latest Videos

undefined

2018ರಿಂದಲೇ ಯುಪಿಎಸ್‌ಸಿ ಪರೀಕ್ಷೆಗೆ ಓದುತ್ತಿದ್ದ ಸೌಭಾಗ್ಯ ಅವರ ಆಸಕ್ತಿ ನೋಡಿ ಕೃಷಿ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕಿ ಆಗಿರುವ ಡಾ. ಅಶ್ವಿನಿ ಮುನಿಯಪ್ಪ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಸೌಭಾಗ್ಯ ಅವರಿಗೆ ಉಚಿತ ಮಾರ್ಗದರ್ಶನ ನೀಡಿದ್ದಾರೆ. ಕಾಲೇಜು ಸಮಯ ಹೊರತುಪಡಿಸಿ ಬೆಳಗ್ಗೆ, ಸಂಜೆ ಹೊತ್ತು ಹಾಗೂ ರಜಾ ದಿನಗಳಲ್ಲಿ ಸೌಭಾಗ್ಯ ಅವರಿಗೆ ವಿಶೇಷ ತರಬೇತಿ ನೀಡುತ್ತಿದ್ದ ಡಾ. ಅಶ್ವಿನಿ ಅವರ ಪ್ರಯತ್ನಕ್ಕೆ ಉತ್ತಮ ಫಲಿತಾಂಶವೇ ದೊರೆತಿದೆ.

ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ ಆಗಬಾರದು ಎಂಬ ಆಶಯದಿಂದ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಮಾರ್ಗದರ್ಶನ ಮಾಡುತ್ತಿದ್ದೇನೆ. ಸೌಭಾಗ್ಯ ಅವರಂತೆ ಈ ಹಿಂದೆ ಇಬ್ಬರು ಅಭ್ಯರ್ಥಿಗಳು ಯುಪಿಎಸ್‌ಸಿಯಲ್ಲಿ ಪಾಸಾಗಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಡಾ. ಅಶ್ವಿನಿ ಮುನಿಯಪ್ಪ ''ಕನ್ನಡಪ್ರಭ''ಕ್ಕೆ ತಿಳಿಸಿದರು.

ಲೋಕಸಭೆಯಲ್ಲಿ ಲೀಡ್‌ ಕೊಡದಿದ್ದರೆ ನಾನು ಮಂತ್ರಿ ಸ್ಥಾನ ಬಿಡಬೇಕಾಗುತ್ತೆ: ಸಚಿವ ದರ್ಶನಾಪುರ

ಐಎಎಸ್‌ ಆಗಬೇಕೆಂಬುದೇ ನನ್ನ ಅಚಲ ನಿರ್ಧಾರವಾಗಿತ್ತು. ಪರೀಕ್ಷೆಗೆ ತಯಾರಿ ಮಾಡುತ್ತಿದ್ದಾಗ, ನನಗಿರುವ ಆಸಕ್ತಿ ಗಮನಿಸಿದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಶ್ವಿನಿ ಅವರು 2018ರಿಂದ ಇಲ್ಲಿಯವರೆಗೂ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ನನಗೆ ಉಚಿತವಾಗಿ ತರಬೇತಿ ನೀಡಿದರು. ಅವರ ಪ್ರಯತ್ನದ ಫಲವಾಗಿಯೇ ನಾನೀಗ ಅತ್ಯುನ್ನತ ಪರೀಕ್ಷೆ ಪಾಸಾಗಿದ್ದೇನೆ.
- ಸೌಭಾಗ್ಯ ಬೀಳಗಿಮಠ, ಯುಪಿಎಸ್‌ಸಿ 101ನೇ ರ‍್ಯಾಂಕ್ .

click me!