ಕರ್ನಾಟಕ, ಕೇರಳ ಸೇರಿ ದೇಶದಲ್ಲಿದೆ 21 ನಕಲಿ ವಿಶ್ವವಿದ್ಯಾಲಯ, UGC ವರದಿಗೆ ಶಿಕ್ಷಣ ಕ್ಷೇತ್ರ ತಲ್ಲಣ!

By Suvarna News  |  First Published Aug 26, 2022, 8:27 PM IST

UGC ಕಾಯ್ದಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ದೇಶದ 21 ವಿಶ್ವವಿದ್ಯಾಲಯದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇಷ್ಟೇ ಅಲ್ಲ ಇವು ನಕಲಿ ವಿಶ್ವವಿದ್ಯಾಲಯ ಎಂದು ಯುಜಿಸಿ ಸ್ಪಷ್ಟವಾಗಿ ಹೇಳಿದೆ.


ನವದೆಹಲಿ(ಆ.26):  ದೇಶದಲ್ಲಿ ಶಿಕ್ಷಣ ಕ್ಷೇತ್ರ ಉದ್ಯಮವಾಗಿ ಬದಲಾಗಿ ಹಲವು ದಶಕಗಳೇ ಉರುಳಿದೆ. ಆದರೆ ಇದೀಗ ಶಿಕ್ಷಣ ಒದಗಿಸುತ್ತಿರುವ ಕೆಲ ವಿಶ್ವವಿದ್ಯಾಲಯಗಳು ನಕಲಿ ಅನ್ನೋ ಆಘಾತಕಾರಿ ಮಾಹಿತಿಯನ್ನು UGC ಬಹಿರಂಗ ಪಡಿಸಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ(UGC) ಕಾಯ್ದಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ 21 ವಿಶ್ವವಿದ್ಯಾಲಯಗಳ ಹೆಸರನ್ನು  UGC ಬಹಿರಂಗ ಪಡಿಸಿದೆ. ಈ ವಿಶ್ವವಿದ್ಯಾಲಯನಗಳು ಸ್ವಯಂ ಶೈಲಿಯ ಹಾಗೂ ಮಾನ್ಯತೆ ಪಡೆಯ ಸಂಸ್ಥೆಗಳಾಗಿದೆ. ಹೀಗಾಗಿ ಇಂತಹ ವಿಶ್ವವಿದ್ಯಾಲಯಗಳನ್ನು ನಕಲಿ ವಿಶ್ವವಿದ್ಯಾಲಯ ಎಂದು  UGC ಘೋಷಿಸಿದೆ.  ಈ ವಿಶ್ವವಿದ್ಯಾಲಾಯ ಯಾವುದೇ ಪದವಿ ನೀಡಲು ಅರ್ಹತೆ ಹೊಂದಿಲ್ಲ ಎಂದು  UGC ಸ್ಪಷ್ಟಪಡಿಸಿದೆ. ಈ ಪೈಕಿ ಕರ್ನಾಟಕ, ಕೇರಳ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ನಕಲಿ ವಿಶ್ವವಿದ್ಯಾಲಯ ಬೆಳೆದು ನಿಂತಿದೆ. ಆದರೆ ದೆಹಲಿಯಲ್ಲಿ ಅತೀ ಹೆಚ್ಚಿನ ನಕಲಿ ವಿಶ್ವವಿದ್ಯಾಲಯಗಳಿವೆ ಎಂದು ಯುಜಿಸಿ ಹೇಳಿದೆ.

ದೆಹಲಿಯಲ್ಲಿ ಯುಜಿಸಿಯಿಂದ ಮಾನ್ಯತೆ ಪಡೆಯದೇ ಕಾರ್ಯನಿರ್ವಹಿಸುತ್ತಿರುವ 8 ನಕಲಿ ವಿಶ್ವವಿದ್ಯಾಲಯಗಳಿವೆ ಎಂದು ಯುಜಿಸಿ ಹೇಳಿದೆ. ಇದರಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ & ಫಿಸಿಕಲ್ ಹೆಲ್ತ್ ಸೈನ್ಸ್, ಕರ್ಮಷಿಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ವಿಶ್ವವಿದ್ಯಾಲಯ, ವೊಕೆಶನಲ್ ವಿಶ್ವವಿದ್ಯಾಲಯ, ಎಡಿಆರ್ ಜ್ಯೂರಿಡಿಕಲ್ ಯೂನಿವರ್ಸಿಟಿ ಸೇರಿದಂತೆ 8 ದೆಹಲಿಯ ವಿಶ್ವವಿದ್ಯಾಲಯಗಳು ಪದವಿ ನೀಡಲು ಅನರ್ಹ ಎಂದು ಯುಜಿಸಿ ಘೋಷಿಸಿದೆ. ಈ ಸಂಸ್ಥೆಗಳು ಯುಜಿಸಿ ಕಾಯ್ದಿಯಡಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

Tap to resize

Latest Videos

ಯುಜಿಸಿಯಿಂದ ನಾನಾ ವಿದ್ಯಾರ್ಥಿ ವೇತನ, ಅರ್ಹತೆ ಪರೀಕ್ಷಿಸಿಕೊಳ್ಳಿ

ದೆಹಲಿ ಬಳಿಕ ಉತ್ತರ ಪ್ರದೇಶದಲ್ಲಿ ನಾಲ್ಕು ನಕಲಿ ವಿಶ್ವವಿದ್ಯಾಲಯಗಳಿವೆ. ಇನ್ನು ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ಕೇರಳ, ಮಹಾರಾಷ್ಟ್ರ. ಪುದುಚೇರಿ, ಆಂಧ್ರಪ್ರದೇಶದಲ್ಲಿ ತಲಾ ಎರಡೆರೆಡು ವಿಶ್ವವಿದ್ಯಾಲಯಗಳು ನಕಲಿ ಎಂದು ಯುಜಿಸಿ ಹೇಳಿದೆ. 

ಯುಜಿಸಿ ಕಾಯ್ದೆ 1956ರ ಸೆಕ್ಷನ್ 22ರ ಅಡಿಯಲ್ಲಿ ಪದವಿ ನೀಡಲು ಕೇಂದ್ರಿಯ, ಪ್ರಾಂತಿಯ, ಅಥವಾ ರಾಜ್ಯ ಕಾಯ್ದೆಯಡಿ ಮಾನ್ಯತೆ ಪಡೆದಿರುವ ಬೇಕು. ಹೀಗೆ ಯುಜಿಸಿ ಕಾಯ್ದೆಯಡಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮಾತ್ರ ಪದವಿ ನೀಡಲು ಅರ್ಹವಾಗಿರುತ್ತದೆ. ಇದನ್ನು ಯುಜಿಸಿ ಮಾನ್ಯ ಮಾಡುತ್ತದೆ ಎಂದಿದೆ. 

ಯುಜಿಸಿ ಹೊಸ ಪೋರ್ಟಲ್‌ನಲ್ಲಿ ಹೊಸ ಕೋರ್ಸು: ಉಚಿತವಾಗಿಯೇ ಲಭ್ಯ

ಅತಿಥಿ ಉಪನ್ಯಾಸಕರಿಗೆ ಬೆಂ.ವಿವಿ ಅರ್ಜಿ ಆಹ್ವಾನ
ಬೆಂಗಳೂರು ವಿಶ್ವವಿದ್ಯಾಲಯವು 2022-23ನೇ ಶೈಕ್ಷಣಿಕ ವರ್ಷಕ್ಕೆ ವಿವಿಯ ಕಾನೂನು ಕಾಲೇಜಿನಲ್ಲಿ ಕಾನೂನು ವಿಷಯ ಸೇರಿದಂತೆ ವಿವಿಧ ವಿಷಯಗಳ ಬೋಧನೆಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಕಾನೂನು, ಕನ್ನಡ, ಇಂಗ್ಲಿಷ್‌, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ ಮತ್ತು ಅರ್ಥಶಾಸ್ತ್ರ ಬೋಧನೆಗೆ ಬೋಧಕರು ಅಗತ್ಯವಿದ್ದು, ಯುಜಿಸಿ/ಬಿಸಿಐ ನಿಯಮಗಳ ಪ್ರಕಾರ ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ವಿವಿಯ ವೆಬ್‌ಸೈ ನಿಂದ ಡೌನ್‌ಲೋಡ್‌ ಮಾಡಿಕೊಂಡು ಸಂಬಂಧಿಸಿದ ದಾಖಲೆಗಳೊಂದಿಗೆ ಪ್ರಾಂಶುಪಾಲರು, ವಿಶ್ವವಿದ್ಯಾಲಯ ಕಾನೂನು ಕಾಲೇಜು, ಜ್ಞಾನಭಾರತಿ ಇಲ್ಲಿಗೆ ಆ.28ರೊಳಗೆ ಸಲ್ಲಿಸಬಹುದು. 

click me!