Vijayapura: ಮಾಜಿ ಸಚಿವ ಎಂ ಬಿ ಪಾಟೀಲ್‌ರನ್ನು ಭೇಟಿ ಮಾಡಿದ ಉಕ್ರೇನ್‌ ವಿದ್ಯಾರ್ಥಿಗಳು

By Govindaraj S  |  First Published Apr 7, 2022, 3:28 PM IST

⦁ ಉಕ್ರೇನ್‌ನಿಂದ ವಾಪಾಸ್‌ ಆದ ಎಂಬಿಬಿಎಸ್‌ ವಿದ್ಯಾರ್ಥಿಗಳ ಪರದಾಟ.
⦁ ಆನ್‌ಲೈನ್‌ ಪಾಠ ನಡೆಯುವಾಗಲೇ ಮೊಳಗುತ್ವಂತೆ ಯುದ್ಧದ ಸೈರನ್.
⦁ ಪ್ರಾಕ್ಟಿಕಲ್‌ ಅಧ್ಯಯನ ಇಲ್ಲದೆ ಕಂಗಾಲದ ಎಂಬಿಬಿಎಸ್‌ ವಿದ್ಯಾರ್ಥಿಗಳು.


ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ (ಏ.07): ರಷ್ಯಾ-ಉಕ್ರೇನ್‌ ನಡುವೆ ನಡೆದ ಘೋರ ಯುದ್ಧದ (Ukraine Russia Crisis) ಪರಿಣಾಮ ಉಕ್ರೇನ್‌ನಲ್ಲಿ ಎಂಬಿಬಿಎಸ್‌ ವಿದ್ಯಾಭ್ಯಾಸ (MBBS Students) ಮಾಡುತ್ತಿದ್ದ ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಾಸ್‌ ಆಗಿ ಜೀವವನ್ನೇನೋ ಉಳಿಸಿಕೊಂಡಿದ್ದಾರೆ. ಆದರೆ ಸದ್ಯ ಆನ್‌ಲೈನ್‌ ಕ್ಲಾಸ್‌ ಗಳು (Online Class)  ಇಲ್ದೆ, ಅಧ್ಯಯನದ ಕೊರತೆಯಿಂದಾಗಿ ವಿದ್ಯಾರ್ಥಿಗಳು (Students) ಪರದಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯಿಂದ ಉಕ್ರೇನ್‌ ದೇಶದ ಮೆಡಿಕಲ್‌ ಕಾಲೇಜುಗಳಲ್ಲಿ ಎಂಬಿಬಿಎಸ್‌ ಅಧ್ಯಯನಕ್ಕೆ ಹೋಗಿದ್ದ 18 ವಿದ್ಯಾರ್ಥಿಗಳು ವಾಪಾಸ್‌ ಆಗಿದ್ದಾರೆ. ಆದ್ರೆ ಜೀವ ಉಳಿಸಿಕೊಂಡ ನೆಮ್ಮದಿಯಲ್ಲಿ ವಿದ್ಯಾರ್ಥಿಗಳಿದ್ರು ಮುಂದೇನು ಎನ್ನುವ ಆತಂಕ ವಿದ್ಯಾರ್ಥಿಗಳನ್ನ ಕಾಡ್ತಿದೆ.

Tap to resize

Latest Videos

ಆನ್‌ಲೈನ್‌ ಕ್ಲಾಸ್‌ ಇದ್ರು ನಿಂತಿಲ್ಲ ಆತಂಕ: ಬುಕೋವಿನಿಯನ್‌ ಸ್ಟೆಟ್‌ ಮೆಡಿಕಲ್‌ ಯುನಿವರ್ಸಿಟಿ, ಜರ್ನಿವಿಸ್ಸ ಉಕ್ರೇನ್‌ನಲ್ಲಿ ಮೆಡಿಕಲ್‌ ಓದಲು ಹೋಗಿದ್ದ ವಿಜಯಪುರದ 18 ವಿದ್ಯಾರ್ಥಿಗಳು ವಾಪಾಸ್‌ ಆಗಿದ್ದಾರೆ ಇಬ್ಬರು ವಿದ್ಯಾರ್ಥಿಗಳು ತಾವಾಗಿಯೇ ವಾಪಾಸ್‌ ಆದ್ರೆ 16 ವಿದ್ಯಾರ್ಥಿಗಳನ್ನ ಸರ್ಕಾರ ಕರೆತಂದಿದೆ. ಅಧಿಕ ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ಇದೀಗ ವಾಪಾಸ್‌ ಆಗಿದ್ದಾರೆ. ವಾಪಸ್‌ ಬಂದ ಮೇಲೆ ಅಧ್ಯಯನಕ್ಕೆ ವಿದ್ಯಾರ್ಥಿಗಳು ಪರದಾಟ ಅನುಭವಿಸುತ್ತಿದ್ದಾರೆ. ಆನ್‌ ಕ್ಲಾಸ್‌ ನಡೆಯುತ್ತಿದ್ರು, ಪ್ರಾಕ್ಟಿಕಲ್‌ ಇಲ್ಲದೆ ವಿದ್ಯಾರ್ಥಿಗಳು ಅಧ್ಯಯನ ಅಪೂರ್ಣ. ಉಕ್ರೇನ್‌ನ ಕೆಲ ಯುನಿವರ್ಸಿಟಿಗಳು ಯುದ್ಧದ ನಡುವೆಯು ಭಾರತೀಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಕ್ಲಾಸ್‌ ತೆಗೆದುಕೊಳ್ತಿವೆ. ಅದರಲ್ಲು ನೂರೆಂಟು ಅಡಚಣೆಗಳು ಎದುರಾಗ್ತೀವೆ.

Vijayapura ಕೆಂಡ ಹಾಯ್ದ ನಾಲ್ಕು ರಾಜ್ಯಗಳ 3 ಸಾವಿರ ಭಕ್ತರು!

ಆನ್‌ಕ್ಲಾಸ್‌ ವೇಳೆಯಲ್ಲೆ ಮೊಳಗುತ್ವೆ ಸೈರನ್: ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗಾರನ ಜೊತೆಗೆ ಪೋನ್ ಮೂಲಕ ಮಾತನಾಡಿದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮೂಲದ ಸಿದ್ದು ಪೂಜಾರಿ ಅನ್ನೋ ವಿದ್ಯಾರ್ಥಿ ಆನ್ ಕ್ಲಾಸ್ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾನೆ. ಆನ್‌ ಕ್ಲಾಸ್‌ ಗಳೇನೊ ನಡೆಯುತ್ತಿವೆ. ಆದ್ರೆ ಕ್ಲಾಸ್‌ ಗಳು ನಡೆಯುತ್ತಿರುವಾಗಲೇ ಯುದ್ಧದ ಸೈರನ್‌ ಮೊಳಗುತ್ವೆ, ಉಪನ್ಯಾಸಕರು ಅಲ್ಲಿಗೆ ಪಾಠ ನಿಲ್ಲಿಸಿ ಬಂಕರ್‌ ಗಳಿಗೆ ತೆರಳುತ್ತಾರೆ. ದಿನಕ್ಕೆ 4 ಬಾರಿ ಹೀಗಾಗುತ್ತೆ. ಹೀಗೆ ಆದ್ರೆ ನಮಗೆ ಆನ್‌ ಲೈನ್‌ ಕ್ಲಾಸ್‌ ಅರ್ಥವಾಗೋದಾದ್ರು ಹೇಗೆ ಅಂತಾ ಆತಂಕ ಹೊರಹಾಕಿದ್ದಾನೆ. ಅದನ್ನ ಹೇಗಾದ್ರು ಅಡ್ಜಸ್ಟ್‌ ಮಾಡಿಕೊಳ್ಳಬಹುದು ಅಂದ್ರು ಪ್ರಾಕ್ಟಿಕಲ್‌ ಅಧ್ಯಯನ ಬೇಕೆ ಬೇಕು ಎಂದಿದ್ದಾನೆ.

ಮಾಜಿ ಸಚಿವ ಎಂ ಬಿ ಪಾಟೀಲರನ್ನ ಮೊರೆಹೋದ ವಿದ್ಯಾರ್ಥಿಗಳು: ವಿಜಯಪುರದ ಬಿಎಲ್ಡಿ ಮೆಡಿಕಲ್‌ ಕಾಲೇಜಿನ ಅಧ್ಯಕ್ಷರು ಆಗಿರುವ ಮಾಜಿ ಸಚಿವ ಎಂ ಬಿ ಪಾಟೀಲರನ್ನ (Mb Patil) ಉಕ್ರೇನ್‌ ನಿಂದ ವಾಪಾಸ್‌ ಆದ ವಿದ್ಯಾರ್ಥಿಗಳು ಭೇಟಿ ಮಾಡಿದ್ದಾರೆ. ನಮಗೆ ಪ್ರಾಕ್ಟಿಕಲ್‌ ಅಧ್ಯಯನಕ್ಕೆ ಸಹಾಯ ಮಾಡಿ ಎಂದು ಮೊರೆ ಇಟ್ಟಿದ್ದಾರೆ. ಗ್ರಂಥಾಲಯ ಬಳಕೆಗು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಾನವೀಯತೆ ಮೆರೆದ ಎಂ ಬಿ ಪಾಟೀಲ್‌: ವಿದ್ಯಾರ್ಥಿಗಳು, ಪೋಷಕರು ಎಂ ಬಿ ಪಾಟೀಲರನ್ನ ಭೇಟಿ ಮಾಡಿ ತಮ್ಮ ಆತಂಕ, ಪರಿಸ್ಥಿತಿಯನ್ನ ಹೇಳಿಕೊಂಡಿದ್ದಾರೆ. ತಕ್ಷಣವೇ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಎಂ ಬಿ ಪಾಟೀಲ್‌ ಉಚಿತವಾಗಿ ಗ್ರಂಥಾಲಯ ಬಳಕೆಗೆ ಅವಕಾಶ ಮಾಡಿ ಕೊಡುವ ಭರವಸೆ ನೀಡಿದ್ದಾರೆ. ಈ ವಿಚಾರವನ್ನ ತಮ್ಮ ಟ್ವಿಟ್ಟರ್‌ನಲ್ಲು ಹಂಚಿಕೊಂಡಿದ್ದಾರೆ. ಜೊತೆಗೆ ವಿದ್ಯಾರ್ಥಿಗಳ ಆನ್‌ ಲೈನ್‌ ಕ್ಲಾಸ್‌ ಗಳು ಸರಿಯಾಗಿ ನಡೆಯದ ಕಾರಣ ಅಧ್ಯಯನಕ್ಕು ಸಹಾಯ ಮಾಡುವುದಾಗಿಯು ಹೇಳಿದ್ದಾರೆ. ಉಕ್ರೇನ್‌ ನಲ್ಲಿಯ ಪಠ್ಯ ಹಾಗೂ ಇಲ್ಲಿನ ಪಠ್ಯಗಳ ವ್ಯತ್ಯಾಸಗಳನ್ನ ನೋಡಿಕೊಂಡು ನಮ್ಮ ಉಪನ್ಯಾಸಕರಿಂದಲೇ ಬೋಧನೆಗು ಅನುಕೂಲ ಮಾಡಿಕೊಡುವುದಾಗಿ ಹೇಳಿದ್ದಾರೆ.

ಉಕ್ರೇನ್‌ ಮೆಡಿಕಲ್‌ ಕಾಲೇಜು ಪಠ್ಯಕ್ರಮದಂತೆ ಬೋಧನೆ: ಉಕ್ರೇನ್‌ ನ ಮೆಡಿಕಲ್‌ ಕಾಲೇಜುಗಳಲ್ಲಿ ಏನು ಬೋಧನೆ ಮಾಡಲಾಗ್ತಿತ್ತು ಎನ್ನುವ ಬಗ್ಗೆ ಅರಿತುಕೊಳ್ಳಲು ಈಗಾಗಲೇ ಬಿಎಲ್ಡಿ ಮೆಡಿಕಲ್‌ ಕಾಲೇಜು ಮುಖ್ಯಸ್ಥರಿಗೆ ಎಂ ಬಿ ಪಾಟೀಲ್‌ ತಿಳಿದಿದ್ದಾರೆ. ಅಲ್ಲಿನ ಪಠ್ಯಕ್ಕು ಇಲ್ಲಿನ ಪಠ್ಯ ಕೊಂಚ ವ್ಯತ್ಯಾಸಗಳಿದ್ದರು ಅದನ್ನ ಪ್ರತ್ಯೇಕವಾಗಿ ಈ ವಿದ್ಯಾರ್ಥಿಗಳಿಗೆ ಬೋಧಿಸಲು ಓರ್ವ ಉಪನ್ಯಾಸಕರನ್ನು ನೀಡುವ ಭರವಸೆಯನ್ನ ಎಂ ಬಿ ಪಾಟೀಲ್‌ ನೀಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿನ ಆತಂಕ ಕೊಂಚ ಮಟ್ಟಿಗೆ ದೂರವಾಗಿದೆ..

ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಮಹಿಳೆ ಸಾವು, 5 ಜನರಿಗೆ ಗಾಯ..!

ಬಿಎಲ್ಡಿ ಮೆಡಿಕಲ್‌ ಕಾಲೇಜಿನ ಗ್ರಂಥಾಲಯ ಬಳಸಿಕೊಳ್ಳಿ: ಉಕ್ರೇನ್‌ ವಿದ್ಯಾರ್ಥಿಗಳ ವಿಚಾರದಲ್ಲಿ ಸಹಾಯಕ್ಕೆ ಮುಂದೆ ಬಂದಿರುವ ಬಿಎಲ್ಡಿ ಮೆಡಿಕಲ್‌ ಕಾಲೇಜು.. ವಿದ್ಯಾರ್ಥಿಗಳು ತಮ್ಮ ಗ್ರಂಥಾಲಯವನ್ನ ಬಳಸಿಕೊಳ್ಳಬಹುದು. ಉಚಿತವಾಗಿಯೆ ಸೌಲಭ್ಯಗಳನ್ನ ಪಡೆಯಿರಿ ಎಂದಿದೆ. ವಿದ್ಯಾರ್ಥಿಗಳು ಎಂ ಬಿ ಪಾಟೀಲರನ್ನ ಭೇಟಿ ಮಾಡಿದಾಗ ಗ್ರಂಥಾಲಯದ ಸಹಾಯ ಕೇಳಿದ್ದರು. ಈಗಾಗಲೇ ವೈಸ್‌ ಚಾನ್ಸಲರ್‌ ಡಾ. ಮುಧೋಳ ಅವರಿಗೆ ಎಂ ಬಿ ಪಾಟೀಲ್‌ ಅಗತ್ಯ ವ್ಯವಸ್ಥೆಗೆ ತಿಳಿಸಿದ್ದಾರೆ. ಕ್ಲಾಸ್‌ ಗಳಿಗೆ ಹಾಜರಾಗಲು ಅನುಮತಿ ನೀಡಿದ್ದಾರೆ..

ಕೇಂದ್ರಕ್ಕೆ ಮನವಿ ಮಾಡಲು ಸಲಹೆ ನೀಡಿದ ಎಂ ಬಿ ಪಾಟೀಲ್: ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಂ ಬಿ ಪಾಟೀಲ್‌ ವಿದ್ಯಾರ್ಥಿಗಳು ಕೇಳಿದ ಸಹಾಯವನ್ನ ಈಗಾಗಲೇ ನಾವು ಮಾಡ್ತಿದೇವೆ. ಕ್ಲಾಸಸ್‌ ಹಾಗೂ ಲೈಬ್ರೆರಿ ಬಳಕೆಗೆ ಅನುಮತಿಸಿದ್ದೀವಿ. ಆದ್ರೆ ವಿದ್ಯಾರ್ಥಿಗಳ ಮುಂದಿನ ಮೆಡಿಕಲ್‌ ಭವಿಷ್ಯ ಕೇಂದ್ರದಲ್ಲಿ ತೀರ್ಮಾನವಾಗಬೇಕಾಗುತ್ತೆ. ನಾನು ಕೂಡ ಕೇಂದ್ರ ಸಚಿವರನ್ನ, ಪ್ರಧಾನಿಗಳನ್ನ ಭೇಟಿ ಅವರಿಗೆ ಮನವರಿಕೆ ಮಾಡಲು ಪೋಷಕರಿಗೆ ಸಲಹೆ ನೀಡಿದ್ದೇನೆ ಎಂದಿದ್ದಾರೆ. ಯುದ್ಧದಿಂದಾಗಿ ವಿದ್ಯಾರ್ಥಿಗಳಿಗೆ ಈ ಪರಿಸ್ಥಿತಿ ಬಂದಿದೆ. ಕಾರಣ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಇದೊಂದು ಬಾರಿ ವಿದ್ಯಾರ್ಥಿಗಳ ಸಹಾಯಕ್ಕೆ ಬರಬೇಕಿದೆ ಎಂದಿದ್ದಾರೆ.
 

ವಿಜಯಪುರದ ಕೆಲವು ವಿದ್ಯಾರ್ಥಿಗಳು ಯುಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಕಲಿಯಲು ತೆರಳಿದ್ದರು. ಯುದ್ಧದ ಕಾರಣ ವಿಜಯಪುರಕ್ಕೆ ಹಿಂತಿರುಗಬೇಕಾಯಿತು. ಶೈಕ್ಷಣಿಕವಾಗಿ ಅತಂತ್ರವಾಗಿರುವ ಈ ವಿದ್ಯಾರ್ಥಿಗಳಲ್ಲಿ ಹಲವರು ಹಾಗೂ ಅವರ ಪೋಷಕರು ಇಂದು ನನ್ನನ್ನು ಭೇಟಿ ಮಾಡಿ ಮುಂದಿನ ಶಿಕ್ಷಣಕ್ಕೆ ನೆರವಾಗಬೇಕೆಂದು ಮನವಿ ಮಾಡಿದರು. 1/2 pic.twitter.com/eEOzgOPMOV

— M B Patil (@MBPatil)
click me!