Online Course ನೀಡುತ್ತಿರುವ ಎಜುಟೆಕ್ ಸಂಸ್ಥೆಗಳಿಗೆ UGC ಎಚ್ಚರಿಕೆ

By Suvarna News  |  First Published Jan 19, 2022, 9:47 PM IST

*ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳು, ಎಜುಟೆಕ್ ಕಂಪನಿಗಳಿಂದ ಆನ್‌ಲೈನ್ ಕೋರ್ಸು, ದೂರ ಶಿಕ್ಷಣ
*ಈ ರೀತಿಯ ಕೋರ್ಸು, ದೂರ ಶಿಕ್ಷಣವನ್ನು ನೀಡುವುದು ಕಾನೂನು ಬಾಹಿರ ಎಂದ ಯುಜಿಸಿ
*ಫ್ರಾಂಚೈಸ್ ಮೂಲಕ ಎಜುಟೆಕ್ ಕಂಪನಿಗಳು ಆನ್ಲೈನ್ ಕೋರ್ಸುಗಳನ್ನು ನೀಡುವಂತಿಲ್ಲ


ಕೋವಿಡ್ ನಂತರದ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಮೊದಲಿದ್ದ ಜಗತ್ತಿಗೂ ಈಗ ವಾಸ್ತವದ ಜಗತ್ತಿಗೂ ಸಾಕಷ್ಟು ಬದಲಾವಣೆಗಳನ್ನು ಗುರುತಿಸಬಹುದಾಗಿದೆ. ಈ ಪೈಕಿ ಶಿಕ್ಷಣವೂ ಒಂದು. ನಾಲ್ಕಾರು ವರ್ಷದ ಹಿಂದೆ ನರ್ಸರಿಯಿಂದ ಹಿಡಿದು ಪಿಜಿವರೆಗೂ ಆನ್‌ಲೈನ್ ಮೂಲಕವೇ ಶಿಕ್ಷಣವನ್ನು ಕೊಡಲು ಸಾಧ್ಯ ಎಂದರೆ ಯಾರೂ ನಂಬುತ್ತಿರಲಿಲ್ಲ. ಆದರೆ, ಇದೀಗ ಕಾಲ ಬದಲಾಗಿದೆ. ಎಲ್ಲವನ್ನೂ ದೂರದಿಂದಲೇ, ಇಲ್ಲವೇ ಆನ್‌ಲೈನ್ ಮೂಲಕವೇ ಕೈಗೊಳ್ಳುವಷ್ಟು ಜಗತ್ತು ಬದಲಾಗಿದೆ. ಹಾಗಾಗಿ, ದೂರ ಶಿಕ್ಷಣ ಮತ್ತು ಆನ್‌ಲೈನ್ ಕೋರ್ಸುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೇ ಗಮನದಲ್ಲಿಟ್ಟುಕೊಂಡ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಎಜುಟೆಕ್ ಕಂಪನಿಗಳು ದೂರಶಿಕ್ಷಣ ಮತ್ತು ಆನ್‌ಲೈನ್ ಕೋರ್ಸುಗಳನ್ನು ನೀಡಲು ಮುಂದಾಗುತ್ತಿವೆ. ಆದರೆ, ಇವುಗಳ ಕ್ರಮಕ್ಕೆ ವಿಶ್ವವಿದ್ಯಾಲಯ ಗ್ರ್ಯಾಂಟ್ಸ್ ಕಮಿಷನ್ (University Grants Commission-UGC) ಕೆಂಗಣ್ಣು ಬೀರಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಫ್ರಾಂಚೈಸ್ ಜತೆಗೂಡಿ ಎಜುಟೆಕ್ ಕಂಪನಿಗಳು ದೂರಶಿಕ್ಷಣ ಹಾಗೂ ಆನ್‌ಲೈನ್ ಕೋರ್ಸುಗಳನ್ನು ನೀಡುತ್ತಿರುವುದು ಸರಿಯಲ್ಲ. ಇದು ಗುಣಾತ್ಮಕ ಶಿಕ್ಷಣದ ಮೇಲೆ ಹೊಡೆತ ಬೀಳಲಿದೆ ಎಂದು ಯುಜಿಸಿ ಎಚ್ಚರಿಸಿದೆ.

Vivo for Education Scholarship: 100 ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು

Tap to resize

Latest Videos

ಕೆಲವು ಎಜುಟೆಕ್ (EdTech) ಕಂಪನಿಗಳು ಮುಕ್ತ ಹಾಗೂ ದೂರ ಶಿಕ್ಷಣ ಕಲಿಕೆ (Open and Distance Learing-ODL) ಕೋರ್ಸುಗಳನ್ನು ಆಫರ್ ಮಾಡುತ್ತಿರುವುದಾಗಿ ಹೇಳಿಕೊಂಡಿವೆ. ಈ ರೀತಿಯ ಕೋರ್ಸುಗಳನ್ನು ಯುಜಿಸಿ (UGC)ಯಿಂದ ಮಾನ್ಯತೆ ಪಡೆದುಕೊಂಡಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ನೀಡುತ್ತಿವೆ. ಆದರೆ, ವಾಸ್ತವದಲ್ಲಿ ಈ ರೀತಿಯಾಗಿ ಶಿಕ್ಷಣವನ್ನು ನೀಡುತ್ತಿಲ್ಲ ಎಂದು ಯುಜಿಸಿ ಹೇಳಿಕೊಂಡಿದೆ.

ಕೆಲವು ಎಜು ಟೆಕ್ (EdTech) ಕಂಪನಿಗಳು ಪತ್ರಿಕೆ/ ಸಾಮಾಜಿಕ ಮಾಧ್ಯಮ/ ದೂರದರ್ಶನ ಇತ್ಯಾದಿಗಳಲ್ಲಿ ಒಡಿಎಲ್/ ಆನ್‌ಲೈನ್ (ODL-Online) ವಿಧಾನಗಳಲ್ಲಿ ಪದವಿ ಮತ್ತು ಡಿಪ್ಲೊಮಾ ಕಾರ್ಯಕ್ರಮಗಳನ್ನು ಕೆಲವು ವಿಶ್ವವಿದ್ಯಾಲಯಗಳು/ ಸಂಸ್ಥೆಗಳು ಮಾನ್ಯತೆ ಪಡೆದ/ ಅನುಕೂಲಕರವಾಗಿ ನೀಡುತ್ತಿವೆ ಎಂಬುದು ಇತ್ತೀಚೆಗೆ ಯುಜಿಸಿ (UGC) ಗಮನಕ್ಕೆ ಬಂದಿದೆ.  ಆದರೆ, ಯುಜಿಸಿ ಅಂತಹ ಫ್ರಾಂಚೈಸಿ ವ್ಯವಸ್ಥೆಗೆ ಅನುಮತಿಸುವುದಿಲ್ಲ ಮತ್ತು ಅನ್ವಯವಾಗುವ ಕಾನೂನುಗಳು/ ನಿಯಮಗಳು/ ನಿಬಂಧಗಳನ್ನು ಉಲ್ಲಂಘಿಸುವ ಎಜುಟೆಕ್ ಕಂಪನಿಗಳು ಮತ್ತು ಉತನ್ನ ಶಿಕ್ಷಮ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಯುಜಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯುಜಿಸಿ (ಮುಕ್ತ ಮತ್ತು ದೂರಶಿಕ್ಷಣ ಕಾರ್ಯಕ್ರಮಗಳು ಮತ್ತು ಆನ್‌ಲೈನ್ ಕಾರ್ಯಕ್ರಮಗಳು) ನಿಯಮಗಳು, 2020 ಮತ್ತು ಅದರ ತಿದ್ದುಪಡಿಯ ಪ್ರಕಾರ ODL / ಅಥವಾ ಆನ್‌ಲೈನ್ ಕಾರ್ಯಕ್ರಮಗಳನ್ನು ನೀಡಲು ಯುಜಿಸಿಯಿಂದ ಉನ್ನತ ಶಿಕ್ಷಣ ಸಂಸ್ಥೆಗಳು (HEls) ಘೋಷಿತವಾಗಿವೆ ಎಂದು ಅದು ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಎಜುಟೆಕ್ ಕಂಪನಿಗಳು ಉನ್ನತ ಶಿಕ್ಷಣ ಸಂಸ್ಥೆಗಳ ಜತೆಗೂಡಿ ಫ್ರಾಂಚೈಸ್ ಮೂಲಕ ದೂರ ಶಿಕ್ಷಣವಾಗಲೀ, ಆನ್‌ಲೈನ್ ಕೋರ್ಸುಗಳನ್ನಾಗಿ ನೀಡಲು ಅವಕಾಶವಿಲ್ಲ. ಒಂದೊಮ್ಮೆ ಈ ರೀತಿಯಾಗಿ ಕೋರ್ಸುಗಳನ್ನು, ದೂರ ಶಿಕ್ಷಣವನ್ನು ನೀಡಿದ್ದು ಕಂಡು ಬಂದರ ಕ್ರಮ ಅನಿವಾರ್ಯವಾಗುತ್ತದೆ ಎಂದು ಯುಜಿಸಿ ಹೇಳಿಕೊಂಡಿದೆ.

IGNOU Online Journalism Courses: ಆನ್‌ಲೈನ್ ಪತ್ರಿಕೋದ್ಯಮ ಕೋರ್ಸ್ ಆರಂಭಿಸಿದ ಇಗ್ನೋ

ಇದೇ ವೇಳೆ, ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡ ಈ ವಿಷಯದಲ್ಲಿ ಹೆಚ್ಚು ಮುತವರ್ಜಿಯನ್ನು ವಹಿಸಬೇಕು ಮತ್ತು ಎಚ್ಚರಿಕೆಯಿಂದ ಇರಬೇಕು. ಎಜುಟೆಕ್‌ ಕಂಪನಿಗಳು ನೀಡುವ ಈ ರೀತಿಯ ಜಾಹೀರಾತುಗಳಿಗೆ ಮರಳಾಗದೇ ಅಧಿಕೃತ ಶಿಕ್ಷಣ ಸಂಸ್ಥೆಗಳಿಂದ ಮಾತ್ರವೇ ತಮ್ಮ ಶಿಕ್ಷಣವನ್ನ ಪೂರೈಸುವುದು ಅಗತ್ಯವಾಗಿದೆ ಎಂದು ಹೇಳಬಹುದು. ಉನ್ನತ ಶಿಕ್ಷಣ ಸಂಸ್ಥೆಗಳ ಬಗೆಗಿನ ಮತ್ತು  ಯುಜಿಸಿಯಿಂದ ಗುರುತಿಸಲ್ಪ ಕಾರ್ಯಕ್ರಮಗಳು ಮಾಹಿತಿಯು deb.ugc.ac.in ನಲ್ಲಿ ಲಭ್ಯವಿದೆ. ಈ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯುವ ಮೊದಲು ಯುಜಿಸಿ-ಡಿಇಬಿ ವೆಬ್‌ಸೈಟ್‌ನಲ್ಲಿ ಕಾರ್ಯಕ್ರಮಗಳ ಮಾನ್ಯತೆ ಅಥವಾ ಅರ್ಹತೆಯ ಸ್ಥಿತಿಯನ್ನು ಪರಿಶೀಲಿಸಲು ಆಯೋಗವು ವಿದ್ಯಾರ್ಥಿಗಳನ್ನು ಕೇಳಿಕೊಂಡಿದೆ.

click me!