UPSC Success Story: 10 ವರ್ಷ ಕಂಪನಿಯಲ್ಲಿ ಕೆಲಸ ಮಾಡಿ, IAS ಅಧಿಕಾರಿಯಾದ ಪ್ರೇಮ್ ಪ್ರಕಾಶ್ ಮೀನಾ

By Suvarna NewsFirst Published Jan 19, 2022, 9:35 PM IST
Highlights

*ಪ್ರೇಮ್ ಪ್ರಕಾಶ್ ಮೀನಾ ಅವರು ಐಎಎಸ್ ಅಧಿಕಾರಿಯಾಗುವ ಮುನ್ನ 10 ವರ್ಷಗಳ ಕಾಲ ತೈಲ ಮತ್ತು ನಿಕ್ಷೇಪ ಕಂಪನಿಗಳ ಕೆಲಸ
*ಐಐಟಿ-ಬಾಂಬೆ ವಿದ್ಯಾರ್ಥಿಯಾಗಿರುವ ಮೀನಾ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ
*ಮೊದಲ ಪ್ರಯತ್ನದಲ್ಲಿ ಐಆರ್‌ಎಸ್ ಅಧಿಕಾರಿಯಾದರು, 2ನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾದರು

ಕೇಂದ್ರ ಲೋಕಸೇವಾ ಆಯೋಗ (Union Public Service Commission – UPSC) ನಡೆಸುವ ಪರೀಕ್ಷೆಗಳನ್ನು ಎದುರಿಸಲು ಯುವಕರು ಪ್ರತಿವರ್ಷ ಸಿದ್ಧತೆಗಳನ್ನು ನಡೆಸುತ್ತಾರೆ. ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆ ಗಳಲ್ಲಿ ಯುಪಿಎಸ್ಸಿ (UPSC) ಪರೀಕ್ಷೆಗೆ ಬಹಳ ಮಾನ್ಯತೆ ಇದೆ. ಯುಪಿಎಸ್ಸಿ ಪರೀಕ್ಷೆಗಳನ್ನು ಪಾಸು ಮಾಡಿಕೊಂಡು ಐಎಎಸ್ (IAS), ಐಪಿಎಸ್ (IPS), ಐಆರ್‌ಎಸ್ (IRS), ಐಎಫ್ ಎಸ್ (IFS)… ಹೀಗೆ ಹಲವು ನಾಗರೀಕ ಹುದ್ದೆಗಳಿಗೆ ಆಯ್ಕೆಯಾಗಬಹುದು. ಆ ಮೂಲಕ ಜೀವನಗಳನ್ನು ರೂಪಿಸಿಕೊಳ್ಳಬಹುದಾಗಿದೆ. ಅಂದುಕೊಂಡ ಗುರಿ ತಲುಪುವುದಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ.  ಬಾಲ್ಯದಿಂದಲೂ ಐಎಎಸ್  (IAS) ಆಗಬೇಕೆಂದು ಕನಸು ಕಾಣುವ ಅನೇಕ ಜನರು ನಮ್ಮ ಕಣ್ಮುಂದೆಯೇ ಇದ್ದಾರೆ. ಕೆಲವರು ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ನಂತರ ಯುಪಿಎಸ್‌ಸಿ ಮಾರ್ಗವನ್ನು ತೆಗೆದುಕೊಳ್ಳುತ್ತಾರೆ. ಇನ್ನೂ ಅನೇಕ ಮಂದಿ ಯುಪಿಎಸ್‌ಸಿ ಪರೀಕ್ಷೆಗಳಿಗಾಗಿಯೇ ಪೂರ್ತಿ ಓದಿಕೊಂಡು ಸಿದ್ಧರಾಗಿ ಅವುಗಳನ್ನು ಎದುರಿಸುತ್ತಾರೆ. ಈ ಎರಡು ರೀತಿಯಲ್ಲೂ ಅಭ್ಯರ್ಥಿಗಳು ಸಾಕಷ್ಟು ಪರಿಶ್ರಮವನ್ನು ಹಾಕಬೇಕಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ರಾಜಸ್ಥಾನ (Rajasthan)ದ ಅಲ್ವಾರ್ ಜಿಲ್ಲೆಯ ನಿವಾಸಿ ಐಎಎಸ್ ಅಧಿಕಾರಿ ಪ್ರೇಮ್ ಪ್ರಕಾಶ್ ಮೀನಾ (Prem Prakash Meena) ಅವರ ಕಥೆಯೂ ಇದೇ ರೀತಿಯಾಗಿದೆ.

Vivo for Education Scholarship: 100 ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು

ಐಎಎಸ್ ಅಧಿಕಾರಿ ಪ್ರೇಮ್ ಪ್ರಕಾಶ್ ಮೀನಾ  ಹಲವಾರು ದೇಶಗಳಲ್ಲಿ ಕೆಲಸ ಮಾಡಿದ ನಂತರ ತಮ್ಮ ಐಎಎಸ್ ಕನಸನ್ನು ಸಾಕಾರಗೊಳಿಸಲು ಭಾರತಕ್ಕೆ ವಾಪಸ್ಸಾದರು. ಪ್ರೇಮ್ ಪ್ರಕಾಶ್ ಮೀನಾ ಅವರು ಜೈಪುರ (Jaipur) ದಲ್ಲಿ ಕೆಮಿಕಲ್ ಇಂಜಿನಿಯರಿಂಗ್ (Chemical Engineering) ಪದವಿ ಪೂರೈಸಿ ದ್ದಾರೆ. ನಂತರ ಐಐಟಿ ಬಾಂಬೆ(IIT-Bomby) ಯಲ್ಲಿ ಎಂ-ಟೆಕ್  (M Tech) ಓದಿದ್ದಾರೆ. ವಿಧ್ಯಾಭ್ಯಾಸ ಪೂರ್ಣಗೊಂಡ ನಂತರ ಪ್ರೇಮ್ ಪ್ರಕಾಶ್ ಮೀನಾ ಅವರು ಸುಮಾರು ಒಂದು ದಶಕದ ಕಾಲ ವಿವಿಧ ದೇಶಗಳಲ್ಲಿ ಅಂತರರಾಷ್ಟ್ರೀಯ ತೈಲ ಮತ್ತು ಅನಿಲ ಕಂಪನಿಗಳಲ್ಲಿ ಕೆಲಸ ಮಾಡಿದ್ರು. ನಂತರ 2015 ರಲ್ಲಿ ಭಾರತಕ್ಕೆ ಮರಳಿದ ಮೇಲೆ ಐಎಎಸ್ ಅಧಿಕಾರಿಯಾಗಲು ತಯಾರಿ ಆರಂಭಿಸಿದರು. ತಮ್ಮ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಿದರು.

UPSC ಪರೀಕ್ಷೆಯಲ್ಲಿ ಪ್ರೇಮ್ ಪ್ರಕಾಶ್ ಮೀನಾ (Prem Prakash Meena) ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ,   ಶ್ರೇಣಿಗೆ ಅನುಗುಣವಾಗಿ ಆದಾಯ ತೆರಿಗೆ (IRS) ಅಧಿಕಾರಿಯಾಗಿ ನೇಮಕಗೊಂಡರು. ಆದರೆ ಬೇರೇನಾದರೂ ಮಾಡುವ ಉತ್ಸಾಹದಿಂದ ಅವರು ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆದರು. ಅದರಲ್ಲಿ ಅಖಿಲ ಭಾರತದಲ್ಲೇ 102 ರ ರ್ಯಾಂಕ್ ಗಳಿಸಿ ಪ್ರೇಮ್ ಪ್ರಕಾಶ್ ಸಕ್ಸಸ್ ಆದರು. 

ನಂತರ ಅವರನ್ನು ಉತ್ತರ ಪ್ರದೇಶ ಕೇಡರ್ ಗೆ ನಿಯೋಜಿಸಲಾಯಿತು. ಪ್ರೇಮ್ ಪ್ರಕಾಶ್ ಅವರು ಬಸ್ತಿ ತಹಸಿಲ್‌ನಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದರು. ನಂತರ ಅವರನ್ನು ಹತ್ರಾಸ್ ಜಿಲ್ಲೆಯಲ್ಲಿ ಜಂಟಿ ಮ್ಯಾಜಿಸ್ಟ್ರೇಟ್ (DM) ಆಗಿ ನೇಮಿಸಲಾಯಿತು. ಅವರು ತಮ್ಮ ಪ್ರಾಮಾಣಿಕತೆ, ಸಮಗ್ರತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳಿಗೆ ಹೆಸರುವಾಸಿಯಾದರು. ಅವರು ಪ್ರಸ್ತುತ ಉತ್ತರಪ್ರದೇಶದ (Uttar Pradesh) ಚಂದೌಲಿ ಜಿಲ್ಲೆಯಲ್ಲಿ ಕಾರ್ಯ‌ನಿರ್ವಹಿಸುತ್ತಿದ್ದಾರೆ.

IGNOU Online Journalism Courses: ಆನ್‌ಲೈನ್ ಪತ್ರಿಕೋದ್ಯಮ ಕೋರ್ಸ್ ಆರಂಭಿಸಿದ ಇಗ್ನೋ

ಪ್ರೇಮ್ ಪ್ರಕಾಶ್ ಮೀನಾ ಅವರು ಜನರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು 'ನ್ಯಾಯ್ ಆಪ್ಕೆ ದ್ವಾರ' ಅಭಿಯಾನವನ್ನು ಪ್ರಾರಂಭಿಸಿದರು. ಈ ಅಭಿಯಾನದ ಅಡಿಯಲ್ಲಿ, ಅವರು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ವಿಷಯವನ್ನು ವಿಲೇವಾರಿ ಮಾಡುತ್ತಾರೆ. ಇದಷ್ಟೇ ಅಲ್ಲ ಪ್ರೇಮ್ ಅವರು, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರನ್ನು ಜನರ ನಾಯಕ ಅಂತ ಕರೆಯಲಾಗುತ್ತದೆ. ಸೋಷಿಯಲ್‌ಮೀಡಿಯಾ ಮೂಲಕ UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಯುವಕರೊಂದಿಗೆ ವಿವಿಧ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ.

click me!