ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಯುಜಿಸಿ, ಎನ್‌ಇಟಿ ಪರೀಕ್ಷೆಗೆ ದಿನಾಂಕ ಪ್ರಕಟಿಸಿದ್ದು, ಇಂದಿನಿಂದಲೇ ಪ್ರವೇಶ ಪತ್ರ ವಿತರಿಸಲು ಪ್ರಾರಂಭಿಸಿದೆ.
ನವದೆಹಲಿ, (ಅ.29): ಯುಜಿಸಿ, ಎನ್‌ಇಟಿ ಪರೀಕ್ಷೆಗೆ ದಿನಾಂಕ ಪ್ರಕಟಿಸಲಾಗಿದ್ದು, ಇದೇ ನವೆಂಬರ್ 4,5,11,12 ಮತ್ತು 13 ರಂದು ಪರೀಕ್ಷೆ ನಡೆಯಲಿದೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಿಂದ ಪರೀಕ್ಷೆಗೆ ದಿನಾಂಕವನ್ನು ಪ್ರಕಟಿಸಲಾಗಿದ್ದು, ಯುಜಿಸಿ, ಎನ್‌ಇಟಿ ಪರೀಕ್ಷೆ ದೇಶಾದ್ಯಂತ ಆಯ್ದ ಪ್ರಮುಖ ನಗರಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ..
ಬೇರೆಯವರಿಂದ ಪರೀಕ್ಷೆ ಬರೆಸಿ ರಾಜ್ಯಕ್ಕೆ ಫಸ್ಟ್ ಬಂದಿದ್ದ ಟಾಪರ್ ಅರೆಸ್ಟ್
ಎನ್‌ಇಟಿ ಪರೀಕ್ಷೆಗೆ ಅಕ್ಟೋಬರ್ 29ರಿಂದಲೇ ಪ್ರವೇಶ ಪತ್ರಗಳ ವಿತರಿಸಲು ಪ್ರಾರಂಭಿಸಿದೆ. ugcnet.nta.ac.in ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರ ಮತ್ತು ಮಾಹಿತಿ ಪಡೆಯಹುದಾಗಿದೆ.