UGC NET 2021: ಯುಜಿಸಿ-ನೆಟ್ 2ನೇ ಹಂತದ ಪರೀಕ್ಷಾ ವೇಳಾಪಟ್ಟಿ ಪ್ರಕಟ

By Suvarna NewsFirst Published Dec 19, 2021, 2:20 PM IST
Highlights
  • UGC NET ಪರೀಕ್ಷೆಯ ದಿನಾಂಕ ಪ್ರಕಟ
  • ಡಿಸೆಂಬರ್ 24 ರಿಂದ ಡಿಸೆಂಬರ್ 27 ರವರೆಗೆ ನಡೆಯಲಿವೆ ಪರೀಕ್ಷೆಗಳು
  • ಯುಜಿಸಿ ನೆಟ್​ನ ಮಿಕ್ಕ ಪರೀಕ್ಷೆಗಳಿಗೆ ಸದ್ಯದಲ್ಲೇ ಪ್ರಕಟಣೆ ಎಂದ NTA

ಬೆಂಗಳೂರು(ಡಿ.19): ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency) UGC NET 2021 ಪರೀಕ್ಷೆಯ 2ನೇ ಹಂತದ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಡಿಸೆಂಬರ್ 2020 ಮತ್ತು ಜೂನ್ 2021 ರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (National Eligibility Test)ಹಂತ ಎರಡರ ಪರೀಕ್ಷೆಗಳು 2021ರ  ಡಿಸೆಂಬರ್ 24 ರಿಂದ ಡಿಸೆಂಬರ್ 27 ರವರೆಗೆ ನಡೆಯಲಿವೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬಹಿರಂಗಪಡಿಸಿದೆ. ವೇಳಾಪಟ್ಟಿ  ಮತ್ತು ಇತರ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್ ಆದ ugcnet.nta.nic.in ನಲ್ಲಿ  ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ..

ಹಂತ 2ರಲ್ಲಿ ಐದು ವಿಷಯಗಳಾದ ಕನ್ನಡ, ಬಂಗಾಳಿ, ಗೃಹ ವಿಜ್ಞಾನ, ಹಿಂದಿ ಮತ್ತು ಸಂಸ್ಕೃತಗಳಿಗೆ ದಿನಾಂಕವಾರು ಮತ್ತು ಶಿಫ್ಟ್​ವಾರು ಡಿಸೆಂಬರ್ 24, 26 ಮತ್ತು 27, 2021 ರಂದು ಪರೀಕ್ಷೆ ನಡೆಯಲಿದೆ.

ಪರೀಕ್ಷೆಯನ್ನು ಎರಡು ಪಾಳಿಗಳಲ್ಲಿ ನಡೆಸಲಾಗುತ್ತಿದ್ದು, ಮೊದಲನೆಯ ಶಿಫ್ಟ್​ನಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೆಯ ಶಿಫ್ಟ್​ನಲ್ಲಿ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಅವಧಿಯು 180 ನಿಮಿಷಗಳವರೆಗೆ (3 ಗಂಟೆಗಳ ಕಾಲ) ಇರಲಿದೆ. ಆದರೆ ಪೇಪರ್ 1 ಮತ್ತು ಪೇಪರ್ 2ರ ನಡುವೆ ಯಾವುದೇ ವಿರಾಮಗಳು ಇರುವುದಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.

BMRCL Recruitment 2022: ನಮ್ಮ ಮೆಟ್ರೋದಲ್ಲಿ 144 ಇಂಜಿನಿಯರ್ ಹುದ್ದೆ ಭರ್ತಿಗೆ ಅಧಿಸೂಚನೆ

ಡಿಸೆಂಬರ್ 24 ರಂದು ಬಂಗಾಳಿ, ಡಿಸೆಂಬರ್ 26ರಂದು ಕನ್ನಡ(ಶಿಪ್ಟ್ 1), ಹಿಂದಿ(ಶಿಪ್ಟ್ 1 & ಶಿಪ್ಟ್ 2) ಮತ್ತು ಡಿಸೆಂಬರ್ 27ರಂದು ಸಂಸ್ಕೃತ (ಶಿಪ್ಟ್ 1) ಮತ್ತು ಹೋಂ ಸೈನ್ಸ್ ( ಶಿಪ್ಟ್ 2) ಪರೀಕ್ಷೆಗಳು ನಡೆಯಲಿದೆ. 

IGNOU ADMISSION 2022: ಇಗ್ನೋ ಜನವರಿ ಸೆಶನ್ ಪ್ರವೇಶಾತಿಗೆ ಡಿ.31ರವರೆಗೆ ಅವಧಿ ವಿಸ್ತರಣೆ

ಮಿಕ್ಕಂತೆ ಯುಜಿಸಿ ನೆಟ್​ನ ಇನ್ನೂ ಹಲವು ವಿಷಯಗಳಿಗೆ ಪರೀಕ್ಷೆಗಳು ನಡೆಯಬೇಕಿದ್ದು, ಸದ್ಯದಲ್ಲೇ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಎನ್​ಟಿಎ ಹೇಳಿದೆ. ಹಂತ ಎರಡರ ಉಳಿದ 2 ವಿಷಯಗಳಾದ ಭೂಗೋಳಶಾಸ್ತ್ರ ಮತ್ತು ಸಮಾಜಶಾಸ್ತ್ರ ಮತ್ತು ಹಂತ 1 ರ ನಾಲ್ಕು ವಿಷಯಗಳಾದ ಸಾಮಾಜಿಕ ಕೆಲಸ, ಒಡಿಯಾ, ತೆಲುಗು ಮತ್ತು ಕಾರ್ಮಿಕ ಕಲ್ಯಾಣ ಹಾಗೂ ಜವಾದ್ ಚಂಡಮಾರುತದಿಂದ ಮುಂದೂಡಲ್ಪಟ್ಟ ವಿಷಯಗಳ ಪರೀಕ್ಷಾ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಇದೇ ವೇಳೆ ಎನ್​ಟಿಎ ಹೇಳಿದೆ.

East Coast Railway Recruitment 2022: ನರ್ಸಿಂಗ್​ ಸೂಪರಿಂಟೆಂಡೆಂಟ್

ಯುಜಿಸಿ ನೆಟ್ ಪರೀಕ್ಷೆಯ ಅಡ್ಮಿಟ್ ಕಾರ್ಡ್​​ ಅನ್ನು ಪರೀಕ್ಷಾ ಮಂಡಳಿಯು ಸಮಯಕ್ಕೆ ತಕ್ಕಂತೆ ಬಹಿರಂಗಪಡಿಸಲಿದೆ. ಯುಜಿಸಿ ನೆಟ್​ನ ಅಧಿಕೃತ ವೆಬ್​ಸೈಟ್  ugcnet.nta.nic.in ಗೆ ಭೇಟಿ ನೀಡಿ ಅಭ್ಯರ್ಥಿಗಳು ಹಾಲ್​ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಲು ಕೋರಲಾಗಿದೆ.

IISc Suicide Prevention: ಆತ್ಮಹತ್ಯೆ ತಡೆಗೆ ಸೀಲಿಂಗ್​ ಫ್ಯಾನ್​ ತೆರವುಗೊಳಿಸುತ್ತಿದೆ ಭಾರತೀಯ ವಿಜ್ಞಾನ ಸಂಸ್ಥೆ!

ಯುಜಿಸಿ ನೆಟ್ ಬರೆಯಲು ಯಾರು ಅರ್ಹರು: ರಾಷ್ಟ್ರೀಯ ಮಟ್ಟದ ಈ ಪರೀಕ್ಷೆಯು ಕಂಪ್ಯೂಟರ್ ಮಾದರಿಯ ಪರೀಕ್ಷೆಯಾಗಿದೆ. ಯಾರು ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕ ಗಳಿಸಿರುತ್ತೀರೋ ಅವರು ಯುಜಿಸಿ ನೆಟ್ ಪರೀಕ್ಷೆ ಬರೆಯಲು ಅರ್ಹರು. ಇನ್ನು ಸ್ನಾತಕೋತ್ತರ ಪರೀಕ್ಷೆಯಲ್ಲಿ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಶೇ.50 ಅಂಕ ಗಳಿಸಿದ್ದರೆ ಸಾಕು ಯುಜಿಸಿ ನೆಟ್ ಪರೀಕ್ಷೆ ಬರೆಯಲು ಅರ್ಹತೆ ಪಡೆದುಕೊಳ್ಳುತ್ತಾರೆ.
 

click me!