
ತುಮಕೂರು (ಫೆ.18): ಪೋಷಕರು ವಿದ್ಯಾರ್ಥಿಯ ಸ್ಕೂಲ್ ಫೀಸ್ ಬಾಕಿ ಉಳಿಸಿದ ಹಿನ್ನೆಲೆ ಶಾಲೆಯಲ್ಲಿ ವಿದ್ಯಾರ್ಥಿಯನ್ನು ಪ್ರತ್ಯೇಕವಾಗಿ ಕೂರಿಸಿ ಶಿಕ್ಷಕರು ಅವಮಾನಿಸಿರುವ ಘಟನೆ ನಡೆದಿದೆ. ಕೇವಲ 6 ಸಾವಿರ ಶಾಲಾ ಶುಲ್ಕ ಕಟ್ಟದ ಹಿನ್ನೆಲೆ, ಕ್ಲಾಸ್ ಟೆಸ್ಟ್ ಕೊಡದೆ, ಕೆಲ ವಿದ್ಯಾರ್ಥಿಗಳಿಗೆ ವಿಚಿತ್ರ ಶಿಕ್ಷೆ ನೀಡಿ ಆಡಳಿತ ಮಂಡಳಿ ಅವಮಾನಿಸಿದೆ.
ಫೀಸ್ ಕಟ್ಟಿಲ್ಲ ಅಂದ್ರೆ ಪರೀಕ್ಷೆ ಬರೆಯುವಂತಿಲ್ಲ, ಶಾಲೆಯಲ್ಲಿ ಎಲ್ಲರೊಂದಿಗೆ ಕೂರುವ ಹಾಗಿಲ್ಲ ಎಂಬುದು ಇಲ್ಲಿನ ಶಿಕ್ಷಕರ ಮತ್ತು ಆಡಳಿತ ಮಂಡಳಿಯವರ ಹೊಸ ರೂಲ್!
ತುಮಕೂರು ನಗರದ ಹೊರಪೇಟೆಯಲ್ಲಿರುವ ಲೂರ್ದ ಮಾತಾ ಶಾಲೆಯ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಶಾಲೆಯ ನಡೆಗೆ ಬೇಸತ್ತು ವಿದ್ಯಾರ್ಥಿ ಪೋಷಕರು ಕಣ್ಣೀರಿಟ್ಟಿದ್ದಾರೆ.
ಸಕ್ಕರೆ ಕೊಬ್ಬಿನಂಶದ ಕಾರಣ ಹೇಳಿ ಶಾಲಾ ಮಕ್ಕಳಿಗೆ ನೀಡುವ ಚಿಕ್ಕಿಗೂ ಗೋತಾ!
ಖಾಸಗಿ ಶಾಲೆ ಹಣ ಬಾಕತನದಿಂದ ವಿದ್ಯಾರ್ಥಿಗಳಿಗೆ ಕಿರುಕುಳ ಮಾತ್ರವಲ್ಲ ಪೋಷಕರಿಗೂ ಹಿಂಸೆ ನೀಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಖಾಸಗಿ ಶಾಲೆಯಿಂದ ಇದೆಂಥಾ ಅಮಾನವೀಯ ಕೃತ್ಯ ಎಂದು ಪೋಷಕರು ಈಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲೂರ್ದ ಮಾತಾ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಕುಶಾಲ್ ಎಂಬ ವಿದ್ಯಾರ್ಥಿಗೆ ಶಾಲಾ ಕೊಠಡಿಯಲ್ಲಿ ಪ್ರತ್ಯೇಕವಾಗಿ ಸಿಬ್ಬಂದಿ ಕೂರಿಸಿದ್ದಾರೆ. ಪರೀಕ್ಷೆಗೆ ಕೂರಿಸುತ್ತಿಲ್ಲ ಅನ್ನೋದು ಒಂದು ಕಡೆಯಾದ್ರೆ, ಫೀಸ್ ಕಟ್ಟದ ವಿದ್ಯಾರ್ಥಿಗಳನ್ನ ತರಗತಿಯಲ್ಲಿ ಪ್ರತ್ಯೇಕವಾಗಿ ಕೂರಿಸುತ್ತಿದ್ದಾರಂತೆ. ಇದು ಚಿಕ್ಕ ವಯಸ್ಸಿನ ಮಕ್ಕಳ ಮನಸ್ಸಿನ ಮೇಲೆ ಭಾರೀ ಪ್ರಭಾವ ಬೀರಿದೆ.
ಟ್ರಾಫಿಕ್ ಜಾಮ್ ನಿಂದ ಕಂಗೆಟ್ಟ ವಿದ್ಯಾರ್ಥಿ, ಪ್ಯಾರಾಗ್ಲೈಡಿಂಗ್ ಮೂಲಕ ಪರೀಕ್ಷೆಗೆ ಹಾಜರು!
ತನ್ನನ್ನು ದೂರವಿಟ್ಟು ಅವಮಾನ ಮಾಡಿದ್ದರಿಂದ ಬೇಸತ್ತ ಕುಶಾಲ್ ಅಳುತ್ತಾ ಮನೆಗೆ ಹೋಗಿದ್ದಾನೆ. ಪೋಷಕರು ಶಾಲೆಯ ಆಡಳಿತ ಮಂಡಳಿಗೆ ಕಾಲಾವಕಾಶ ಕೇಳಿದ್ರೂ ಯಾವುದೇ ಪ್ರಯೋಜನವಾಗಿಲ್ಲ.
ಕುಶಾಲ್ ಗೆ ಮಾತ್ರವಲ್ಲ, ಶಾಲೆಯ ಫೀಸ್ ಕಟ್ಟದ ಎಲ್ಲಾ ಮಕ್ಕಳಿಗೂ ಇದೇ ಶಿಕ್ಷೆ ನೀಡಿದ್ದಾರೆಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಅಸಮಧಾನ ವ್ಯಕ್ತಪಡಿಸಿದ್ದಾರೆ.